ಶ್ರೀನಿವಾಸ ಪ್ರಸಾದ್‍ರ ಬೆಂಬಲಕ್ಕೆ ನಿಂತ ತಾಪಂ ಸದಸ್ಯರು

Spread the love

srinivas--prasad

ನಂಜನಗೂಡು , ಅ.26- ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‍ರವರು ಕಾಂಗ್ರೆಸ್ ಪಕ್ಷ ತೊರಿಯುತ್ತಿದ್ದಂತೆಯೇ ನಂಜನಗೂಡು ಕ್ಷೇತ್ರದ ರಾಜಕೀಯ ವಲಯದಲ್ಲಿ ಭಾರಿ ಅಲ್ಲೋಲ-ಕಲ್ಲೋಲ ಉಂಟಾಗಿದೆ.ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‍ನಲ್ಲೆ ಉಳಿಯಬೇಕೋ, ಬಿಜೆಪಿಗೆ ಸೇರಬೇಕೋ ಅಥವಾ ವಿ.ಶ್ರೀನಿವಾಸಪ್ರಸಾದವರನ್ನು ಬೆಂಬಲಿಸಬೇಕೊ ಎಂಬ ಗೊಂದಲದಲ್ಲಿ ಮುಳುಗಿರುವ ಹಿನ್ನಲೆಯಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ತಾ.ಪಂ. ಸದಸ್ಯರು ಬಹಿರಂಗವಾಗಿಯೇ ವಿ.ಶ್ರೀನಿವಾಸಪ್ರಸಾದರವರಿಗೆ ಬೆಂಬಲ ವ್ಯಕ್ತಪಡಿಸಿ ನಾವೆಲ್ಲರು ನಿಮ್ಮ ಜೊತೆ ಇರುತ್ತೇವೆ. ನಿಮ್ಮ ರಾಜಕೀಯ ಮುಂದುವರಿಸಿ ಎಂದು ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣನವರ ನೇತೃತ್ವದಲ್ಲಿ ತಾ.ಪಂ. ಸದಸ್ಯರಾದ ಬದನವಾಳು ರಾಮು, ಹೆಮ್ಮರಗಾಲ ಶಿವಣ್ಣ, ಹೆಡತಲೆ ಮಹದೇವನಾಯ್ಕ, ದೇಬೂರು ಹೇಮಾವತಿ, ಕಳಲೆ ದೇವಮ್ಮ, ಸೂರಹಳ್ಳಿ ಶಿವಪ್ಪ, ಕೂಡ್ಲಾಪುರ ಜಯಲಕ್ಷ್ಮಿಶಿವಣ್ಣ, ಹಾಡ್ಯ ಸಿದ್ದರಾಜೇಗೌಡ, ನವಿಲೂರು ಗೀತಾಮಹೇಶ್, ಮುಂತಾದವರುಗಳು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‍ರವರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿರುವುದು ಕುತೂಹಲ ಮೂಡಿಸಿದೆ.ತಾ.ಪಂ. ಅಧ್ಯಕ್ಷರಾಗಿದ್ದ ಬಿ.ಎಸ್.ಮಹದೇವಪ್ಪನವರಿಗೆ ಈಗ ತಾ.ಪಂ. ಸದಸ್ಯರುಗಳ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅವರ ಅಧ್ಯಕ್ಷಗಾದಿಗೆ ಯಾವುದೇ ತೊಂದರೆ ಇಲದಂತಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ದೀಪಾವಳಿ ಬಂಪರ್ ಬಿ.ಎಸ್.ಮಹದೇವಪ್ಪರವರಿಗೆ ಬಂದಂತಾಗಿದೆ. ಒಟ್ಟಾರೆ ನಂಜನಗೂಡಿನ ರಾಜಕೀಯ ದಿನೇದಿನೇ ಕುತೂಹಲ ಮೂಡಿಸಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin