ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಡೆಗಣನೆ : ಅಸಮಾಧಾನ

Spread the love

kr--nagar

ಕೆ.ಆರ್.ನಗರ, ಆ.25- ಸರ್ಕಾರದ ಮೇಲೆ ಒತ್ತಡ ತಂದು ಸುಮಾರು ಒಂದು ಕೋಟಿ ಬಿಡುಗಡೆ ಮಾಡಿಸಿ ಜಲಪಾತೋತ್ಸವ ಆಚರಿಸಲು ತೋರುತ್ತಿರುವ ಆಸಕ್ತಿಯನ್ನು ಶಾಸಕರು ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ತೋರುತ್ತಿಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಚೀರ್ನಹಳ್ಳಿಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.ಜಲಪಾತೋತ್ಸವ ಆಚರಿಸಿ ಪ್ರವಾಸಿಗರನ್ನು ಆಕರ್ಷಿಸುವುದಕ್ಕೆ ರೈತ ಸಂಘದ ಅಭ್ಯಂತರ ಇಲ್ಲ. ಆದರೆ ತಾಲೂಕಿನಲ್ಲಿ ಬರಗಾಲ ಇರುವುದರಿಂದ ಮನರಂಜನಾ ಕಾರ್ಯಕ್ರಮಕ್ಕೆ ಸೀಮಿತಗೊಳ್ಳುವ ಜಲಪಾತೋತ್ಸವ ಆಚರಿಸುವುದಕ್ಕೆ ವಿರೋಧವಿದೆ ಎಂದು ಸುದ್ಧಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕೆಲವು ಶಾಸಕರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಸಾ.ರಾ.ಮಹೇಶ್ ಅವರನ್ನು ಓಲೈಕೆ ಮಾಡಲು ಹೇಳಿಕೆ ಕೊಡುವ ಬದಲು ತಾವು ರೈತರ ಮಕ್ಕಳು ಎಂಬುದನ್ನು ಅರಿಯಬೇಕು ಎಂದು ಸಲಹೆ ನೀಡಿದರು.  ಕಾರ್ಖಾನೆ ಪುನರಾರಂಭಿಸಲು ಪ್ರಯತ್ನಿಸದ ಶಾಸಕರು ಸರ್ಕಾರ ಬೇರೆ ಪಕ್ಷದ್ದು ಎಂದು ನೆಪ ಹೇಳಿ ನನ್ನ ಜವಾಬ್ದಾರಿಯಲ್ಲ ಎಂದು ಜಾರಿಕೊಳ್ಳುತ್ತಾರೆ. ಆದರೆ ಅದೇ ಸರ್ಕಾರದ ಮೇಲೆ ಒತ್ತಡ ತಂದು ಜಲಪಾತೋತ್ಸವ ಆಚರಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು ?ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ನೂತನ್‍ಕುಮಾರ್, ಕಾರ್ಯದರ್ಶಿ ಬಾಚಹಳ್ಳಿಬಸವರಾಜು, ಮುಖಂಡ ನಟರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin