ಶ್ರೀಲಂಕಾದಂತೆ ನಮ್ಮ ದೇಶದಲ್ಲೂ ನೇತ್ರದಾನ ಕಡ್ಡಾಯವಾಗಬೇಕು : ಯಡಿಯೂರಪ್ಪ

Spread the love

Yadiyurappa

ಬೆಂಗಳೂರು, ಆ.28- ನೆರೆಯ ಶ್ರೀಲಂಕಾ ದೇಶದಲ್ಲಿ ಕಣ್ಣುಗಳನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಿ ನೇತ್ರದಾನವನ್ನು ಕಡ್ಡಾಯಗೊಳಿಸಲಾಗಿದ್ದು , ಅದೇ ರೀತಿ ನಮ್ಮ ರಾಷ್ಟ್ರದಲ್ಲೂ ಇಂತಹ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.   ನಗರದಲ್ಲಿ ಸಮದೃಷ್ಟಿ , ಶ್ರಮತಾ ವಿಕಾಸ ಅನುಸಂಧಾನ ಮಂಡಳ ಆಯೋಜಿಸಿದ್ದ ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ನೇತ್ರದಾನ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ವ್ಯಕ್ತಿಯೊಬ್ಬರ ಮರಣ ನಂತರ ಅವರ ಕಣ್ಣುಗಳನ್ನು ಇಬ್ಬರು ಅಂಧರಿಗೆ ನೀಡುವ ಮೂಲಕ ದೃಷ್ಟಿ ನೀಡಬಹುದಾಗಿದೆ ಎಂದರು.

ಬದುಕು ಚೆನ್ನಾಗಿರಬೇಕಾದರೆ ಸೃಷ್ಟಿ ಚೆನ್ನಾಗಿದ್ದರೆ ಸಾಲದು ದೃಷ್ಟಿಯೂ ಚೆನ್ನಾಗಿರಬೇಕು, ಭಾರತದಲ್ಲಿ 90 ದಶಲಕ್ಷ ಅಂಧರಿದ್ದಾರೆ. ಈ ಪೈಕಿ ಗ್ರಾಮೀಣ ಭಾಗದವರಿಗೆ ಹೆಚ್ಚು ಕಾರ್ನಿಯ ಅಂಧತ್ವವನ್ನು ನೇತ್ರದಾನದ ಮೂಲಕ ಸರಿಪಡಿಸಬಹುದು ಎಂದು ಹೇಳಿದರು.   ಪ್ರತಿ ವರ್ಷ ಒಂದು ಕೋಟಿ ಜನ ಮೃತಪಡುತ್ತಾರೆ. ಇವರಲ್ಲಿ ನೇತ್ರದಾನ ಮಾಡಿರುವವರು ಕೇವಲ 25 ಸಾವಿರ ಮಾತ್ರ. ಹೀಗಾಗಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಮುಂದಿನ 2030ರ ವೇಳೆಗೆ ದೇಶವನ್ನು ಕಾರ್ನಿಯ ಅಂಧತ್ವ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.  ಕಾರ್ಯಕ್ರಮದಲ್ಲಿ ಶಾಸಕ ವಿಜಯಕುಮಾರ್, ವಿಧಾನಪರಿಷತ್ ಸದಸ್ಯ ತಾರಾ ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin