ಶ್ವಾನಗಳ ಐಷಾರಾಮಿ ಜೀವನ ಮತ್ತು ಪ್ರವಾಸಕ್ಕೆ 20 ಲಕ್ಷ ರೂ ಖರ್ಚು ಮಾಡಿದ್ದಾಳೀಕೆ..!

ds-dogಕೆಲವು ಸಂದರ್ಭಗಳಲ್ಲಿ ಮನುಷ್ಯರಿಗಿಂತ ಸಾಕು ಪ್ರಾಣಿಗಳಿಗೆ ರಾಜಾತಿಥ್ಯ. ಯಾರ್ಕ್‍ಶೈರ್ ತಳಿಯ 12 ವರ್ಷಗಳ ಎರಡು ಜೊತೆ ಶ್ವಾನಗಳು ಹೈ-ಫೈ ಲೈಫ್ ಎಂಜಾಯ್ ಮಾಡುತ್ತಿವೆ.  ಡಿಂಗ್-ಡಾಂಗ್ ಮತ್ತು ಫನ್-ಫನ್ ಹೆಸರಿನ  ಯಾರ್ಕ್‍ಶೈರ್ ಟೆರ್ರಿಯರ್ಸ್ ತಳಿಯ ನಾಯಿಗಳಿಗೆ ರಾಜಾತಿಥ್ಯ. ತಮ್ಮ ಒಡತಿ ಜಿಯೋ ಮ್ಯಾನ್ ಜೊತೆ ಇತ್ತೀಚೆಗೆ ಹಾಂಕಾಂಗ್‍ನಿಂದ ಜಪಾನ್‍ಗೆ ಖಾಸಗಿ ವಿಮಾನದಲ್ಲಿ ಹಾರುವ ಭಾಗ್ಯ ಲಭಿಸಿದವು.  ಜಿಯೋ ಮ್ಯಾನ್, ಹಾಂಕಾಂಗ್‍ನ ಜವಳಿ ಮತ್ತು ಗಾರ್ಮೆಂಟ್ಸ್ ಕಂಪನಿಯೊಂದರ ಉಪಾಧ್ಯಕ್ಷೆ. ಈಕೆಗೆ ಸಾಕು ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇವುಗಳನ್ನು ಐದು ದಿನಗಳ ಕಾಲ ರಜೆಗಾಗಿ ಜಪಾನ್‍ಗೆ ವಿಶೇಷ ವಿಮಾನದಲ್ಲಿ ಕರೆದೊಯ್ದರು. ಶ್ವಾನಗಳ ಪ್ರವಾಸ ಮತ್ತು ಐಷಾರಾಮಿ ಸೌಲಭ್ಯಕ್ಕಾಗಿ ಈಕೆ 30,580 ಡಾಲರ್‍ಗಳನ್ನು ಅಂದರೆ ಸುಮಾರು 20 ಲಕ್ಷ ರೂ.ಗಳನ್ನು ಸಂತೋಷದಿಂದ ವೆಚ್ಚ ಮಾಡಿದ್ದಾರೆ. ಇದು ಶ್ವಾನಗಳ ಮೇಲೆ ಆಕೆಗಿರುವ ಪ್ರೀತಿಗೆ ಸಾಕ್ಷಿಯಾಗಿದೆ.

laxury-1

ಈ ಮುದ್ದಾದ ಶ್ವಾನಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಇವುಗಳೊಂದಿಗೆ ನಾನು ಪ್ರವಾಸಕ್ಕೆ ಹೋದಾಗ ನನ್ನ ತಂದೆ-ತಾಯಿಯೊಂದಿಗೆ ಹೋದ ಅನುಭವವಾಯಿತು. ಪ್ರಾಣಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವುದು ವಿಶಿಷ್ಟ ಅನುಭವ ಎನ್ನುತ್ತಾರೆ ಜಿಯೋ. ಮನುಷ್ಯರಿಗಷ್ಟೇ ಸೀಮಿತವಾಗಿದ್ದ ವಿಮಾನಯಾನ ಸೇವೆ ಈಗ ಸಾಕು ಪ್ರಾಣಿಗಳಿಗೂ ಲಭಿಸುತ್ತಿದೆ. ಹಾಂಕಾಂಗ್‍ನ ಲೈಫ್ ಟ್ರಾವಲ್ ಪ್ರವಾಸಿ ಸಂಸ್ಥೆ, ಮಾಲೀಕರೊಂದಿಗೆ ಶ್ವಾನಗಳಿಗೂ ವಿಮಾನದಲ್ಲಿ ಅವಕಾಶ ನೀಡುವ ಸೇವೆಯಲ್ಲಿ ಕಳೆದ ವರ್ಷದಿಂದ ಆರಂಭಿಸಿದೆ. ಮಾಲೀಕರು ಇದಕ್ಕಾಗಿ ಹೆಚ್ಚಿನ ಶುಲ್ಕ ನೀಡುತ್ತಿರುವುದರಿಂದ ಪ್ರಾಣಿ ಪ್ರವಾಸ ಲಾಭದಾಯಕವಾಗಿದೆ.
ವಾಣಿಜ್ಯ ವಿಮಾನಗಳಲ್ಲಿ ಸಾಕುಪ್ರಾಣಿಗಳನ್ನು ಕರೆದೊಯ್ಯ ಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಕಟ್ಟಿ ಹಾಕಬೇಕು ಎಂಬ ನಿಯಮವಿದೆ. ಆದರೆ ಖಾಸಗಿ ಜೆಟ್‍ಗಳಲ್ಲಿ ಪುಟ್ಟ ನಾಯಿಗಳನ್ನು ಮಾಲೀಕರು ತಮ್ಮ ತೊಡೆಯ ಮೇಲೆ ಕೂರಿಸಿ ಕೊಳ್ಳಬಹುದು. ಶ್ವಾನಗಳು ದೊಡ್ಡದಾಗಿದ್ದರೆ ನೆಲದ ಮೇಲೆ ಕೂರಿಸಬಹುದು.  ಹಾಂಕಾಂಗ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಮನುಷ್ಯರು ಮತ್ತು ಸಾಕು ಪ್ರಾಣಿಗಳ ಪ್ರವಾಸ ಟ್ರೆಂಡ್ ಆಗುತ್ತಿದ್ದು, ಲೈಫ್ ಟ್ರಾವಲ್ ಸಂಸ್ಥೆ ಇದಕ್ಕಾಗಿ ಪೆಟ್ ಹಾಲಿಡೇ ಟ್ರಾವಲ್ ಎಂಬ ಸ್ಕೀಂ ಆರಂಭಿಸಿದೆ. 9,000 ಡಾಲರ್‍ಗಳಿಂದ ಸೇವೆ ಲಭ್ಯ. ವಾರಾಂತ್ಯಗಳಲ್ಲಿ ಈ ಪ್ರವಾಸಕ್ಕೆ ಭರ್ಜರಿ ಡಿಮ್ಯಾಂಡ್ ಇದೆ.

Sri Raghav

Admin