ಸಂಸದ ಜಿ.ಎಂ.ಸಿದ್ದೇಶ್ವರ್ ಮನೆ ಮೇಲೆ ಇಂದೂ ಮುಂದುವರೆದ ಐಟಿ ದಾಳಿ
ದಾವಣಗೆರೆ, ಮೇ 19-ಕೇಂದ್ರದ ಮಾಜಿ ಸಚಿವ, ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಮನೆ ಹಾಗೂ ಕಚೇರಿಗಳ ಮೇಲೆ ಇಂದೂ ಕೂಡ ಐಟಿ ದಾಳಿ ಮುಂದುವರೆದಿದೆ.ನವದೆಹಲಿಯಿಂದ ಆಗಮಿಸಿರುವ 35ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಸಿದ್ದೇಶ್ವರ್ ಅವರಿಗೆ ಸಂಬಂಧಿಸಿದ ಕಚೇರಿ, ಬ್ಯಾಂಕ್, ಕಾರ್ಖಾನೆ ಮುಂತಾದ ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.ಕಳೆದ ಮಧ್ಯರಾತ್ರಿಯವರೆಗೆ ಐಟಿ ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದರು.
ಬೆಳಗ್ಗೆ 11ರ ನಂತರ 35 ಅಧಿಕಾರಿಗಳಿಂದ ಮತ್ತೆ ಏಕಕಾಲಕ್ಕೆ ನಾಲ್ಕು ಕಡೆ ಐಟಿ ದಾಳಿ ಮುಂದುವರೆದಿದೆ.ಜಿ.ಎಂ.ಸಿದ್ದೇಶ್ವರ್ ಹುಟ್ಟೂರಾದ ಭೀಮಸಮುದ್ರ ಗ್ರಾಮದ ಮನೆ, ಕಾರ್ಖಾನೆ, ಅಡಿಕೆ ಮಂಡಿ, ಸಹಕಾರ ಬ್ಯಾಂಕ್ಗಳಲ್ಲಿ ಪರಿಶೀಲಿಸಲಾಗಿದೆ. ಈಗಾಗಲೇ ಅಪಾರ ಪ್ರಮಾಣದ ದಾಖಲೆಗಳಿಲ್ಲದ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ಇನ್ನೂ ಮೂರು ದಿನಗಳ ಕಾಲ ದಾಳಿ ನಡೆಸುವ ಸಾಧ್ಯತೆ ಇದೆ.
< Eesanje News 24/7 ನ್ಯೂಸ್ ಆ್ಯಪ್ >