ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ರಾಜಕುಮಾರ ಸತ್ತಿ ಅಂತ್ಯಕ್ರಿಯೆ

belagam-22
ಅಥಣಿ,ಸೆ.26-ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ ಸಮೀಪದಕಕಮರಿಗ್ರಾಮದ ರಾಜಕುಮಾರ ಸತ್ತಿ(26) ಅವರಅಂತಿಮ ಸಂಸ್ಕಾರ ತಾಲೂಕಾಡಳಿತ ಹಾಗೂ ಭೂಸೇನೆಯ ಮರಾಠಾ ಇನ್ಫೆಂಟ್ರಿಅವರಿಂದ ಸಕಲ ಗೌರವದೊಂದಿಗೆ ನೆರವೇರಿತು. ರಾಜಕುಮಾರಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಅಥಣಿ, ಐಗಳಿ, ತೆಲಸಂಗ, ಬನ್ನೂರ ಮಾರ್ಗವಾಗಿ ಬೈಕ್‍ರ್ಯಾಲಿ ಮೂಲಕ ಕಕಮರಿಗ್ರಾಮಕ್ಕೆ ಸಂಜೆ 3ಗಂಟೆಗೆ ಆಗಮಸಿತು.ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿಶವ ಪೆಟ್ಟಿಗೆಯನ್ನಿಟ್ಟು ಮೆರೆವಣಿಗೆ ಮಾಡಲಾಯಿತು.

belagam-2
ಅಪಾರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಜನಸ್ಥೋಮವು, ಬೋಲೋ  ಭಾರತ ಮಾತಾಕಿಜೈ, ರಾಜುಅಮರ್‍ರಹೆ ಎಂಬಘೋಷಣೆ ಮುಗಿಲು ಮುಟ್ಟಿತ್ತು.ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಮರವಣಿಗೆ ಗ್ರಾಮದೊಳಕ್ಕೆ ಬರುತ್ತಿದ್ದಂತೆರಸ್ತೆಯ ಬದಿಯಲ್ಲಿ ನಿಂತಗ್ರಾಮಸ್ಥರುರಾಜುನನ್ನು ನೆನೆದುಕಣ್ಣೀರು ಸುರಿಸುತ್ತಿದ್ದದೃಶ್ಯ ಕರಳು ಕರುಗುವಂತಿತ್ತು.ಪಾರ್ಥಿವಶರೀರದ ಸ್ವಾಗತಕ್ಕೆಗ್ರಾಮಸ್ಥರುಜಾತಿ, ಮತ, ಪಂಥ, ಪಕ್ಷತೊರೆದುಒಂದಾಗಿ ಪಾಲ್ಗೊಂಡಿದ್ದರು. ಮುಖ ದರ್ಶನಕ್ಕಾಗಿ ಆಗಮಿಸಿದ ಸಾವಿರಾರುಜನರ ನೂಕು ನುಗ್ಗಲಿನಿಂದಾಗಿ ಪೊಲೀಸರು ಹಾಗೂ ಸೈನಿಕರು ಮತ್ತುಗ್ರಾಮದ ಹಿರಿಯರು ಕೆಲಹೊತ್ತುಜನರನ್ನುಕಂಟ್ರೋಲ್ ಮಾಡಲು ಸಮಾಧಾನ ಪಡಿಸುವಕಸರತ್ತು ನಡೆಸಬೇಕಾಯಿತು.

ತಾಲೂಕಿನಗಣ್ಯಾತಿಗಣ್ಯರು, ರಾಜಕಿಯ ಮುಖಂಡರು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರುಜನರು ಹರಿದು ಬಂದಿತ್ತು. ರಾಜುವಿನ ಅಗಲಿಕೆಯಿಂದ ಪತ್ನಿ, ತಾಯಿ, ಮಾವ ಹಾಗೂ ಭಂಧುಗಳ ರೋಧನೆ ಮುಗಿಲು ಮುಟ್ಟಿತ್ತು. ಬೆಳಗಾವಿ ಭೂಸೇನೆಯ ಸೈನಿಕರು ಪರೇಡ್ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿ ವಂದನೆ ಸಲ್ಲಿಸಿದರು.ನಂತರಅಂತಿಮ ಸಂಸ್ಕಾರಕ್ಕೆ ಅನವು ಮಾಡಿಕೊಟ್ಟರು.ಹಿಂದುಸಂಪ್ರದಾಯದ ವಿಧಿ ವಿಧಾನದಂತೆಅಂತಿಮ ಸಂಸ್ಕಾರ ನೆರವೇರಿತು.

 

► Follow us on –  Facebook / Twitter  / Google+

Sri Raghav

Admin