ಸಚಿವ ಎ.ಮಂಜುಗೆ ತೀವ್ರ ಮುಖಭಂಗ

Spread the love

manju-rohini-1
ಹಾಸನ, ಏ.14-ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕೋರಿ ದೂರು ಸಲ್ಲಿಸಿದ್ದ ಸಚಿವ ಎ.ಮಂಜು ಅವರಿಗೆ ತೀವ್ರ ಮುಖಭಂಗವಾಗಿದೆ. ನ್ಯಾಯಸಮ್ಮತ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಕೋರಿ ಸಚಿವರು ಸಲ್ಲಿಸಿದ್ದ ದೂರಿನ ತನಿಖೆ ನಡೆಸುವಂತೆ ಮುಖ್ಯ ಚುನಾವಣಾ ಆಯುಕ್ತರು ನೀಡಿದ ಆದೇಶದನ್ವಯ ಮೈಸೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು ನೀಡಿರುವ ವರದಿಯಲ್ಲಿ ಆಧಾರರಹಿತ ಆರೋಪ ಎಂದು ಹೇಳಲಾಗಿದೆ.

ಸಚಿವರು ದುರುದ್ದೇಶದಿಂದ ತಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಡಿಸಿ ವಿಚಾರದಲ್ಲಿ ಪದೇ ಪದೇ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮುಖಭಂಗ ಅನುಭವಿಸುವಂತಾಗಿದೆ.

Sri Raghav

Admin