ಸಚಿವ ಸ್ಥಾನ ಬೇಕು ಎಂದು ವರಿಷ್ಠರ ಬಳಿ ಮನವಿ ಮಾಡಿಲ್ಲ : ಎಚ್.ವಿಶ್ವನಾಥ್

Spread the love

H-Vishwanath
ಬೆಂಗಳೂರು, ಜೂ.5- ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಬೇಕು ಎಂದು ವರಿಷ್ಠರ ಬಳಿ ಮನವಿ ಮಾಡಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ದೇವೇಗೌಡರು ನಮಗೆ ರಾಜಕೀಯ ಪುನರ್‍ಜನ್ಮ ನೀಡಿದ್ದಾರೆ. ಪಕ್ಷ ನಿರ್ಧರಿಸಿ ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

ಸಚಿವ ಸ್ಥಾನ ನೀಡದಿದ್ದರೂ ಬೇಸರ ಮಾಡಿಕೊಳ್ಳದೆ ಸರ್ಕಾರದ ಜತೆ ಎಡಬಲದಲ್ಲಿ ನಿಂತು ಕೆಲಸ ಮಾಡುತ್ತೇನೆ. ಸಚಿವನಾಗಿಯೇ ಕೆಲಸ ಮಾಡಬೇಕೆಂದೂ ಇಲ್ಲ ಎಂದರು. ವಿಧಾನಸಭೆ ಉಪಾಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಂಪುಟ ದರ್ಜೆ ಮಂತ್ರಿಯಾಗಿದ್ದವನು. ಯಾರಾದರೂ ಯುವಕರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ಪರೋಕ್ಷವಾಗಿ ತಮಗೆ ಆ ಸ್ಥಾನ ಬೇಡ ಎಂಬ ಸಂದೇಶ ರವಾನಿಸಿದರು.

Facebook Comments

Sri Raghav

Admin