ಸಡಗರದೊಂದಿಗೆ ನಿಯಮ ಪಾಲಿಸಲು ಕರೆ

turuvekere-6

ತುರುವೇಕೆರೆ,ಸೆ.1- ಗಣೇಶನ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸುವ ಜತೆಗೆ ರಕ್ಷಣಾ ಇಲಾಖೆಯ ಕಾನೂನು ಮತ್ತು ಆದೇಶಗಳನ್ನು ಪಾಲಿಸುವಂತೆ ಡಿವೈಎಸ್‍ಪಿ ಚಂದ್ರಶೇಖರ್ ಕರೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಸಂಬಂಧಿಸಿದ ಪಂಚಾಯಿತಿಯಿಂದ ಅನುಮತಿ ಪಡೆದಿರಬೇಕು.

ವಿಸರ್ಜನೆ ಮಾಡುವ ದಾರಿ ಮತ್ತು ಮಾರ್ಗಗಗಳನ್ನು ಪೊಲೀಸರಿಗೆ ತಿಳಿಸಿ  ಮೆರವಣಿಗೆಯಲ್ಲಿ ಪಟಾಕಿ ಸಿಡಿಸುವ ಸ್ಥಳವನ್ನು ಮೊದಲೇ ನಿಗದಿಪಡಿಸಿರಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದುಸೂಚಿಸಿದರು.ಪಿಎಸ್‍ಐ ಹೊನ್ನೇಗೌಡ ಮಾತನಾಡಿ, ಎಲ್ಲಾ ಧರ್ಮೀಯರು ಶಾಂತಿ, ಸಹನೆ ,ಪ್ರೀತಿಯ ಸಂಕೇತವಾಗಿ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಸಿಪಿಐ ರಾಮಚಂದ್ರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಸತ್ಯಗಣಪತಿ ಸಂಘದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್(ರಾಜು), ಅಸ್ಲಾಂ ಪಾಷಾ, ಇತರರು ಇದ್ದರು.

► Follow us on –  Facebook / Twitter  / Google+

 

Sri Raghav

Admin