ಸತ್ಯರಾಜ್ ಕ್ಷಮೆ ಕೋರುವವರೆಗೂ ‘ಬಾಹುಬಲಿ’ ಬಿಡುಗಡೆ ಇಲ್ಲ

Spread the love

Satyaraj--001
ಬೆಂಗಳೂರು, ಏ.20- ಕಾವೇರಿ ನದಿ ವಿಚಾರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಾಹುಬಲಿ-2 ಚಿತ್ರದ ನಟ ಸತ್ಯರಾಜ್ ಅವರು ಕ್ಷಮೆ ಕೋರುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್.ಶಿವರಾಮೇಗೌಡ ಆಗ್ರಹಿಸಿದರು.  ನಟ ಸತ್ಯರಾಜ್ ಅವರು ಕಾವೇರಿ ವಿಚಾರ, ನಟ-ನಟಿಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಅವರು ಕ್ಷಮೆ ಕೋರುವವರೆಗೂ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು.ಒಂಬತ್ತು ವರ್ಷಗಳ ಹಿಂದೆ ನಟ ಸತ್ಯರಾಜ್ ಕಾವೇರಿಯನ್ನು ಹೆಂಡತಿಗೆ ಹೋಲಿಸಿ ಅವಮಾನ ಮಾಡಿದ್ದಾರೆ. ಈಗಾಗಲೇ ಕನ್ನಡಪರ ಸಂಘಟನೆಗಳು ಇದನ್ನು ಖಂಡಿಸಿ ಏ.28ರಂದು ಬಂದ್‍ಗೆ ಕರೆ ನೀಡಿದ್ದೇವೆ ಎಂದರು. [ ಇದನ್ನೂ ಓದಿ : ಬಾಹುಬಲಿ-2 ಚಿತ್ರಬಿಡುಗಡೆಗೆ ಅವಕಾಶ ನೀಡುವಂತೆ ಕನ್ನಡಿಗರಲ್ಲಿ ರಾಜಮೌಳಿ ಕಳಕಳಿ ಮನವಿ ]ನಿನ್ನೆ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಪತ್ರಿಕಾಗೋಷ್ಠಿಯಲ್ಲಿ ಸತ್ಯರಾಜ್ ಅವರ ಹೇಳಿಕೆ ಖಂಡಿಸಿ ಬಂದ್‍ಗೆ ಕರೆ ನೀಡಿದ್ದಾರೆ. ಏ.28ರಂದು ನಡೆಯುವ ಬೆಂಗಳೂರು ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಒಂದು ವೇಳೆ ರಾಜ್ಯದಲ್ಲಿ ಯಾರಾದರೂ ಚಿತ್ರ ಪ್ರದರ್ಶನ ಮಾಡಿದರೆ ಅವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin