ಸತ್ಯಾಗ್ರಹ ನಿರತ ದೇವೇಗೌಡರನ್ನು ಭೇಟಿಯಾದ ಮುಖ್ಯಮಂತ್ರಿ, ಉಪವಾಸ ಕೈಬಿಡುವಂತೆ ಮನವೊಲಿಕೆ

Spread the love

Siddaramaiha

K’taka CM Siddaramaiah meets Deve Gowda, who went on an indefinite hunger strike near Gandhi statue in Vidhana Soudh

ಬೆಂಗಳೂರು, ಅ.1-ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಿಕ್ಕಟ್ಟು ಪರಿಹಾರಕ್ಕೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಡೆಸುತ್ತಿದ್ದ ಸತ್ಯಾಗ್ರಹ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ವಿಧಾನಸೌಧ, ವಿಕಾಸಸೌಧದ ನಡುವೆ ಇರುವ ಮಹಾತ್ಮಗಾಂಧೀಜಿ ಪ್ರತಿಮೆ ಬಳಿ ಗೌಡರು ಇಂದು ಬೆಳಗಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.  ಇಂದು ಮಧ್ಯಾಹ್ನ ಮೈಸೂರು ಪ್ರವಾಸದಿಂದ ಮರಳಿದ ಮುಖ್ಯಮಂತ್ರಿ ಅವರು ಧರಣಿ ನಡೆಸುತ್ತಿರುವ ಗೌಡರನ್ನು ಭೇಟಿ ಉಪವಾಸ ಕೈಬಿಡುವಂತೆ ಮನವೊಲಿಸುವ ಪ್ರಯತ್ನವನ್ನು ಮಾಡಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು, ಪ್ರಧಾನಿ ನರೇಂದ್ರ ಮೋದಿಯವರು ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಪ್ರವೇಶಿಸಬೇಕು ಹಾಗೂ ಕರ್ನಾಟಕ-ತಮಿಳುನಾಡಿನ ವಾಸ್ತವ ಸ್ಥಿತಿ ಅರಿಯಲು ಕೇಂದ್ರಸರ್ಕಾರದಿಂದ ತಜ್ಞರ ತಂಡವನ್ನು ಕಳುಹಿಸಬೇಕು ಎಂದು ಗೌಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮಾಡಿದ ಮನವಿಯನ್ನು ಗೌಡರು ಪುರಸ್ಕರಿಸಲಿಲ್ಲ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಪ್ರವೇಶಿಸಬೇಕು ಹಾಗೂ ಕರ್ನಾಟಕ-ತಮಿಳುನಾಡಿನ ವಾಸ್ತವ ಸ್ಥಿತಿ ಅರಿಯಲು ಕೇಂದ್ರಸರ್ಕಾರದಿಂದ ತಜ್ಞರ ತಂಡವನ್ನು ಕಳುಹಿಸಬೇಕು ಎಂದು ಗೌಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮಾಡಿದ ಮನವಿಯನ್ನು ಗೌಡರು ಪುರಸ್ಕರಿಸಲಿಲ್ಲ ಎಂದು ತಿಳಿಸಿದರು.

► Follow us on –  Facebook / Twitter  / Google+

Sri Raghav

Admin