ಸದ್ದು-ಗದ್ದಲದಲ್ಲಿ ಅಂತ್ಯಗೊಂಡ ತಾಪಂ ಸಾಮಾನ್ಯ ಸಭೆ

Spread the love

KOLEGALA--SABHA

ಕೊಳ್ಳೇಗಾಲ, ಸೆ.23- ತಾಪಂ ಸಾಮಾನ್ಯ ಸಭೆ ಮುಕ್ತಾಯ ಹಂತದಲ್ಲಿ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಭಾರಿ ಸದ್ದು-ಗದ್ದಲದ ನಡುವೆ ಅಂತ್ಯಗೊಂಡಿತು.ನಿನ್ನೆ ತಾಪಂ ಸಬಾಂಗಣದಲ್ಲಿ ರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಹಾಜರಿದ್ದ ಧನಗೆರೆ ಕ್ಷೇತ್ರದ ಸದಸ್ಯ ಸುರೇಶ್ ಮಾತನಾಡಿ, ಸ್ಥಾಯಿ ಸಮಿತಿ ಆಯ್ಕೆಯಲ್ಲಿ ಭಾರಿ ತಾರತಮ್ಯ ಮಾಡಿದ್ದು, ಬಿಜೆಪಿ ಸದಸ್ಯರಿಗೆ ಅನ್ಯಾಯ ಮಾಡಿದ್ದಿರಿ. ತಾಪಂನ ಒಟ್ಟು ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ ಆದರೆ ಪ್ರತಿ ವಿಚಾರದಲ್ಲಿ ಬಿಜೆಪಿಯನ್ನು ಕಡೆಗಣಿಸುತ್ತಿದೆ. ಈ ಭಾರಿ ರಚಿಸಿರುವ ಸ್ಥಾಯಿ ಸಮಿತಿಗಳಲ್ಲೂ ಬಿಜೆಪಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದರು.
ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದ ಸಾಕಷ್ಟು ಪ್ರಮುಖ ವಿಷಯಗಳನ್ನು ಮರೆಮಾಚಿ ನಿಮಗೆ ಇಷ್ಟ ಬಂದ ಹಾಗೆ ಕಾರ್ಯಕ್ರಮಗಳನ್ನು ತಿದ್ದಲಾಗಿದೆ. ಸಾಮಾನ್ಯ ಸಭೆ ಯಾಕೆ ನಡೆಸ ಬೇಕು. ಅಷ್ಟೆ ಅಲ್ಲದೇ ಕಳೆದ 3 ತಿಂಗಳ ಹಿಂದೆ 13 ನೇ ಹಣ ಕಾಸಿನ ಅನುದಾನದಡಿ 3 ಲಕ್ಷ ರೂ ಡ್ರಾ ಮಾಡಲಾಗಿದೆ. ಇದಕ್ಕೆ ಕಚೇರಿಯ ವ್ಯವಸ್ಥಾಪಕ ಕೃಷ್ಣರಾಜೇ ಅರಸ್‍ರವರ ತಂತ್ರಗಾರಿಕೆಯೇ ಕಾರಣ ಎಂದು ಆರೋಪಿಸಿದರು. ಕೆಲವು ಗಂಭೀರ ವಿಚಾರಗಳ ಕುರಿತು ಬಿಜೆಪಿ ಸದಸ್ಯರು ಗಂಭೀರ ಆರೋಪ ಮಾಡಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ -ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸಭೆ ಗದ್ದಲದ ಗೂಡಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜು, ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ಪ್ರೇಮ್‍ಕುಮಾರ್ ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಸದಸ್ಯರುನ್ನು ಓಲೈಸಬೇಕಾಯಿತು.

 

► Follow us on –  Facebook / Twitter  / Google+

 

 

Facebook Comments

Sri Raghav

Admin