ಸನ್​ ರೈಸರ್ಸ್​ ವಿರುದ್ಧ ಆರ್ಸಿಬಿಗೆ 14 ರನ್ ಭರ್ಜರಿ ಜಯ

RCB

ಬೆಂಗಳೂರು. ಮೇ.18 : ಬೆಂಗಳೂರಲ್ಲಿ ನೆನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಬೌಲರ್ ಗಳಾದ ಯಜುವೇಂದ್ರ ಚಹಾಲ್, ಯಜುವೇಂದ್ರ ಚಹಾಲ್ ಹಾಗೂ ಮೋಯಿನ್ ಅಲಿ ಒಂದೊಂದು ವಿಕೆಟ್ ಪಡೆದು ಮಿಂಚಿದ್ದರು. ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಮತ್ತೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತ್ತು. ಆರ್ಸಿಬಿ ಪರವಾಗಿ ಎಬಿ ಡಿವಿಲಿಯರ್ಸ್(69), ಮೋಯಿನ್ ಅಲಿ(65), ಕೋಲಿನ್ ಡಿ ಗ್ರ್ಯಾಂಡ್ ಹೋಮ್(40) ಹಾಗೂ ಸರ್ಫರಾಜ್ ಖಾನ್(22) ರನ್ ಗಳಿಸಿದ್ದರು. 219 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಗದಿತ ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಹೈದರಾಬಾದ್ ಪರವಾಗಿ ಕೇನ್ ವಿಲಿಯಮ್ಸನ್(81) ಮನೀಶ್ ಪಾಂಡೆ(62*) ಹಾಗೂ ಅಲೆಕ್ಸ್(37) ರನ್ ಗಳಿಸಿದರು. ಹೈದರಾಬಾದ್ ಪರವಾಗಿ ರಶಿದ್ ಖಾನ್ ಮೂರು ವಿಕೆಟ್, ಸಿದ್ದಾರ್ಥ್ ಕೌಲ್ ಎರಡು, ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್ :
ರಾಯಲ್ ಚಾಲೆಂಜರ್ಸ್ ಬೆಂಗಳೂರು : 218/6
ಸನ್ ರೈಸರ್ಸ್ ಹೈದರಾಬಾದ್ : 204/3

Sri Raghav

Admin