ಸಮಾಜವಾದಿ ಪಕ್ಷದಲ್ಲಿನ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ : ದೇವೇಗೌಡ
ದೊಡ್ಡಬಳ್ಳಾಪುರ, ಅ.26- ಸಮಾಜವಾದಿ ಪಕ್ಷಕ್ಕೆ 23 ವರ್ಷ ಗಳ ಇತಿಹಾಸವಿದೆ. ಪಕ್ಷದಲ್ಲಿ ಗೊಂದಲವಾಗುವುದು ಸಾಮಾನ್ಯ. ಸದ್ಯದಲ್ಲೇ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಪಕ್ಷದಲ್ಲಿ ತಲೆದೋರಿರುವ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ ಎಂಬಂತೆ ಅವರಿಗೆ ವಿಶ್ವಾಸ ತುಂಬಿದ್ದೇನೆ ಎಂದು ತಿಳಿಸಿದರು.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಅನಿವಾರ್ಯ ವಾಗಿದ್ದು, ರಾಜ್ಯ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಯಾಗ ಬೇಕಾದರೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ನಾಡಿನ ನೆಲ, ಜಲ, ಭಾಷೆ ಮುಂತಾದವುಗಳ ಬಗ್ಗೆ ಒಲವನ್ನು ಪ್ರಾದೇಶಿಕ ಪಕ್ಷಗಳು ಹೊಂದಿವೆ. ಆಗಾಗ್ಗೆ ರಾಜ್ಯದ ಬೆಳವಣಿಗೆಗೆ ಪ್ರಾದೇಶಿಕ ಪಕ್ಷಗಳು ಅತ್ಯವಶ್ಯಕ ಎಂದರು.ಸ್ಟೀಲ್ ಬ್ರಿಡ್ಜ್ ವಿಚಾರವಾಗಿ ಮಾತನಾಡಿದ ಅವರು, ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕುರಿತಂತೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯ ಮಾಡುತ್ತಿವೆ. ಹಾಗಾಗಿ ಸ್ಟೀಲ್ ಬ್ರಿಡ್ಜ್ ಸಂಬಂಧ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
► Follow us on – Facebook / Twitter / Google+