ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಖಿಲೇಶ್ ಪುನರಾಯ್ಕೆ

Spread the love

Akhilesh-YAdav--02

ಅಗ್ರಾ (ಉತ್ತರಪ್ರದೇಶ), ಅ.5- ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಸ್‍ಪಿ ಮುಖಂಡ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಐದು ವರ್ಷಗಳ ಅವಧಿಗೆ ಇಂದು ಸರ್ವಾನುಮತದಿಂದ ಪುನರಾಯ್ಕೆಯಾದರು. ಆಗ್ರಾದಲ್ಲಿ ನಡೆದ ಪಕ್ಷದ 10ನೇ ರಾಷ್ಟ್ರೀಯ ಸಮಾವೇಶದಲ್ಲಿ ಹಿರಿಯ ಮುಖಂಡ ರಾಮ್ ಗೋಪಾಲ್ ಯಾದವ್ ಈ ವಿಷಯ ಪ್ರಕಟಿಸಿದರು.  ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಲು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ.

44 ವರ್ಷದ ಅಖಿಲೇಶ್ ಐದು ವರ್ಷಗಳ ಕಾಲ ಅಂದರೆ 2022ರವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2019ರಲ್ಲಿ ಲೋಕಸಭೆ ಮತ್ತು 2022ರ ವಿಧಾನಸಭೆಗಳಿಗೆ ಮತದಾನ ನಡೆಯಲಿದ್ದು ಇವರ ಸಾರಥ್ಯದಲ್ಲಿ ಎಸ್‍ಪಿ ಚುನಾವಣೆ ಎದುರಿಸಲಿದೆ ಎಂದಿದ್ದಾರೆ.

Facebook Comments

Sri Raghav

Admin