ಸಮಾಜವಾದಿ ಪಕ್ಷದ ಸೈಕಲ್ ಈಗ ಪಂಕ್ಚರ್ ಆಗಿದೆ : ರಾಹುಲ್ ಲೇವಡಿ
ನವದೆಹಲಿ, ಸೆ. 18-ಉತ್ತರಪ್ರದೇಶದಲ್ಲಿ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಹೊಗೆಯಾಡುತ್ತಿರುವ ಕೌಟುಂಬಿಕ ಅಧಿಕಾರ ಕಚ್ಚಾಟದ ಪ್ರಹಸನವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಲಾಂಛನ ಸೈಕಲ್. ಅದು ಈಗ ಪಂಕ್ಚರ್ ಆಗಿದೆ. ಸೈಕಲ್ ಚಕ್ರಕ್ಕೆ ಪಂಕ್ಚರ್ ಹಾಕಿ ಸರಿ ಮಾಡಬಹುದು. ಆದರೆ ಎಸ್ಪಿ ಸೈಕಲ್ಗೆ ಪಂಕ್ಚರ್ ಹಾಕಿ ಸರಿ ಮಾಡಲು ಸಾಧ್ಯವಿಲ್ಲ ಎಂದು ಕುಟುಕಿಯಾಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಂಕ್ಚರ್ ಆಗಿರುವ ಸೈಕಲ್ ಏರಿ ಸವಾರಿ ಮಾಡಲು ಹೊರಟಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ರಾಹುಲ್ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಪಾಲ್ ಅವರ ಬಳಿಯಿದ್ದ ಮಹತ್ವದ ಖಾತೆಗಳನ್ನು ಅಖಿಲೇಶ್ ಯಾದವ್ ಕಿತ್ತುಕೊಂಡಿದ್ದಾರೆ ಹಾಗೂ ಪಂಕ್ಚರ್ ಆದ ಚಕ್ರದಿಂದ ಏನೂ ಪ್ರಯೋಜನವಿಲ್ಲ ಎಂದು ಅದನ್ನು ಎಸೆದಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
► Follow us on – Facebook / Twitter / Google+