ಸಮಾಜವಾದಿ ಪಕ್ಷ ಸೇರಿದ ಕ್ರಿಕೆಟರ್ ಪ್ರವೀಣ್‍ಕುಮಾರ್ ಹೊಸ ಇನ್ನಿಂಗ್ಸ್ ಆರಂಭ

Spread the love

Praveen-Kumar

ಲಖನೌ, ಸೆ.11- ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿರುವ ಕ್ರಿಕೆಟಿಗ ಪ್ರವೀಣ್‍ಕುಮಾರ್ ಅವರು ಇಂದು ರಾಜಕೀಯ ವಲಯದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇಂದು ಅಧಿಕೃತವಾಗಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಯಾದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಪ್ರವೀಣ್, ನಾನು ಕ್ರಿಕೆಟ್ ಕ್ಷೇತ್ರದಲ್ಲಿ ಹಲವು ಏರುಪೇರುಗಳನ್ನು ಕಂಡಿದ್ದೇನೆ.
ಆದರೆ ರಾಜಕೀಯ ರಂಗದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿರುವ ಮಗು ಇದ್ದಂತೆ. ನನಗೆ ಈ ಕ್ಷೇತ್ರದ ಬಗ್ಗೆ ತಿಳುವಳಿಕೆ ಸಾಲದು. ಈ ಕ್ಷೇತ್ರದಲ್ಲಿ ನಾನು ಸಾಕಷ್ಟು ಪರಿಣಿತಿ ಹೊಂದಬೇಕಾಗಿದೆ. ಇನ್ನು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಪ್ರವೀಣ್ ಪ್ರತಿಕ್ರಿಯಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರನ್ನು ಪ್ರಶಂಸಿಸಿರುವ ಅವರು, ಪಕ್ಷದ ಬಲವರ್ಧನೆ ಮತ್ತು ಕಾರ್ಯಕರ್ತರ ಸಂಘಟನೆಗೆ ಪ್ರಯತ್ನಿಸುತ್ತೇನೆ ಮತ್ತು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು. ಉತ್ತರ ಪ್ರದೇಶ ಕ್ರಿಕೆಟ್ ತಂಡದಲ್ಲಿ ಆಟವಾಡುತ್ತಿದ್ದ ಇವರು 6 ಟೆಸ್ಟ್ ಪಂದ್ಯಗಳು ಮತ್ತು 68 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅವರ ಖಾತೆಯಲ್ಲಿ ಕ್ರಮವಾಗಿ 27 ಮತ್ತು 77 ವಿಕೆಟ್‍ಗಳಿವೆ.

► Follow us on –  Facebook / Twitter  / Google+

Sri Raghav

Admin