ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ಅವ್ಯವಹಾರ : ತನಿಖೆಗೆ ಆಗ್ರಹ

maluru

ಮಾಲೂರು, ಫೆ.28- ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಿಧ್ಯಾರ್ಥಿ ನಿಲಯಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂದು ದಲಿತ ನಾಗರೀಕ ಸಮಿತಿ ಕರ್ನಾಟಕದ ಬೆಂಗಳೂರು ವಿಭಾಗೀಯ ಸಂಚಾಲಕ ಪುರಸನಗಳ್ಳಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.  ಪಟ್ಟಣದ ತಾಪಂ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರಕಾರದ ವತಿಯಿಂದ ಬಡ ದಲಿತ ಶಿಕ್ಷಣದಿಂದ ವಂಚಿತರಾಗಿರುವ ದಲಿತ ಮಕ್ಕಳನ್ನು ಶೈಕ್ಷಣಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದೆ ಆದರೆ ಈ ವಿದ್ಯಾರ್ಥಿನಿ/ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿರುವಂತಹ ಸಂಬಂಧಿಸಿದ ಅಧಿಕಾರಿ ವರ್ಗ ಮತ್ತು ನೌಕರ ವರ್ಗ ಎಂದು ದೂರಿದರು.

ಸರಕಾರ ಮತ್ತು ಇಲಾಖೆಯನ್ನು ಹಗಲು ದರೋಡೆ ಮಾಡುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗಿದ್ದಾರೆ. ಜೆಎಸ್‍ಎಸ್ ವಿದ್ಯಾರ್ಥಿನಿಯಾದ ಕೆ.ಜಿ.ಲಾಂಚನ ಡೇ ಸ್ಕಾಲರ್ ಆಗಿದ್ದರೂ ಸಹ ಹಾಸ್ಟಲ್ ಕಾಲರ್ ಎಂದು ದಾಖಲಿಸಿರುವ ನಿಲಯದ ಮೇಲ್ವಿಚಾರಕಿ ಎ.ರೂಪ ಎಂಬುವವರ ಮೇಲೆ ದಲಿತ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣವನ್ನು ದಾಖಲಿಸಿಕೊಂಡು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲಾ ವಿದ್ಯಾರ್ಥಿನಿಲಯಗಳ ಕಾಮಗಾರಿಯನು ಪುನಃ ಪ್ರಾರಂಭಿಸಿ ಶೀಘ್ರವಾಗಿ ಮುಕ್ತಾಯಗೊಳಿಸಿ ಮೂಲಸೌಲಭ್ಯಗಳೊಂದಿಗೆ ಹಸ್ತಾಂತರಗೊಳಿಸಬೇಕು. ತಾಲ್ಲೂಕಿನಲ್ಲಿರುವ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಸೂಕ್ತ ಸರ್ಕಾರಿ ನಿವೇಶನಗಳನ್ನು ನೀಡಿ ಸರ್ಕಾರಿ ಕಟ್ಟಡಗಳನ್ನು ಕಟ್ಟಿಕೊಡಬೇಕು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸದರಿ ಕಟ್ಟಡವನ್ನು ಖಾಲಿಯಿರುವ ಸರಕಾರಿ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.ಸಮಿತಿ ರಾಜ್ಯಾಧ್ಯಕ್ಷ ಕೋಡೂರು ಗೋಪಾಲ್, ಇಂದುಮಂಗಲ ರವಿ, ಎಚ್.ವೈ.ನಾರಾಯಣಸ್ವಾಮಿ, ಮಾಲೂರು ಮಾರುತೇಶ್, ಮಾರಸಂದ್ರ ಮಂಜು, ಗಿರಿ, ನವೀನ್ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin