ಸರಣಿ ಜಯದ ಸಂತಸ ವರ್ಣಿಸಲಾಗುತ್ತಿಲ್ಲ : ವಿರಾಟ್

Spread the love

Virat-Kohli

ಮುಂಬೈ, ಡಿ.12- ತಂಡದ ಆಟಗಾರರ ಸಾಮಥ್ರ್ಯವನ್ನು ಪೂರ್ಣವಾಗಿ ಬಳಸಿಕೊಂಡೇ ಎದುರಾಳಿಗಳ ಆತ್ಮಬಲ ಕುಸಿದಿರುವುದನ್ನು ಅರಿತು ಸ್ಪಿನ್ನರ್‍ಗಳನ್ನು ದಾಳಿಗಿಳಿಸಿ ಪಂದ್ಯವನ್ನು ಜಯಗಳಿಸಿರುವುದಾಗಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್‍ಕೊಹ್ಲಿ ಹೇಳಿದ್ದಾರೆ.  ವಾಂಖೇಡೆ ಕ್ರೀಡಾಂಗಣದಲ್ಲಿ ಆಂಗ್ಲರ ವಿರುದ್ಧ ಸರಣಿ ಜಯ ಸಾಧಿಸಿರುವುದನ್ನು ವರ್ಣಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಇಡೀ ತಂಡ ಆತ್ಮಬಲದಿಂದ ಆಟವಾಡಿ ಈ ಅಮೋಘ ಸರಣಿಯನ್ನು ತಮ್ಮ ವಶಕ್ಕೆ ಪಡೆದಿದ್ದೇವೆ ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಥಮ ಇನ್ನಿಂಗ್ಸ್‍ನಲ್ಲಿ 400ರನ್‍ಗಳನ್ನು ಕಲೆ ಹಾಕಿದಾಗ ಇದು ಸವಾಲಿನ ಮೊತ್ತ ಎಂದು ಭಾವಿಸಿದ್ದೆವು. ಆದರೆ ವಿರಾಠ್‍ಕೊಹ್ಲಿ ಅವರ ಅದ್ಭುತ ಆಟ ಮತ್ತು ಅವರ ಬೌಲರ್‍ಗಳ ಉತ್ತಮ ಪ್ರದರ್ಶನ ನಾವು ಸೊಲು ಕಂಡಿದ್ದೇವೆ. ಎಲ್ಲಿ ತಪ್ಪಾಯಿತು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಕೊನೆಯ ಪಂದ್ಯದತ್ತ ಹೆಚ್ಚು ಒತ್ತು ಕೊಟ್ಟು ಜಯಕ್ಕೆ ಪ್ರಯತ್ನಿಸುತ್ತೇವೆ ಎಂದು ಇಂಗ್ಲೆಂಡ್ ತಂಡದ ನಾಯಕ್ ಕುಕ್ ಪ್ರತಿಕ್ರಿಯಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin