ಸರಣಿ ವಶಪಡಿಸಿಕೊಳ್ಳುವತ್ತ ಕೊಹ್ಲಿ ಚಿತ್ತ

Kohli--01

ಜೋಹಾನ್ಸ್‍ಬರ್ಗ್, ಫೆ.9- ಆರು ಪಂದ್ಯಗಳ ಏಕದಿನ ಸರಣಿಯಲ್ಲಿ 3 ಪಂದ್ಯಗಳನ್ನೂ ಸೋತಿದ್ದರೂ ಕೂಡ ಎಬಿಡಿವಿಲಿಯರ್ಸ್‍ರ ಆನೆಬಲ ಹೊಂದಿರುವ ದಕ್ಷಿಣ ಆಫ್ರಿಕಾ ಸರಣಿ ಯನ್ನು ಜೀವಂತವಾಗಿಸಿಕೊಳ್ಳುವತ್ತ ಗಮನ ಹರಿಸಿದ್ದರೆ, ನಾಳಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವತ್ತ ಟೀಂ ಇಂಡಿಯಾ ಚಿತ್ತ ಹರಿಸಿದೆ.

ಎಬಿಡಿ ಆಗಮನ:
ಸರಣಿಯ ಆರಂಭದ ಮೂರು ಪಂದ್ಯಗಳ ವೇಳೆ ಕೈಬೆರಳಿನ ಗಾಯದಿಂದ ಟೂರ್ನಿಯಿಂದ ಹೊರಗುಳಿದಿದ್ದ ಸ್ಟಾರ್ ಬ್ಯಾಟ್ಸ್‍ಮನ್ ಎಬಿಡಿವಿಲಿಯರ್ಸ್ ತಂಡಕ್ಕೆ ವಾಪಸ್ಸಾಗಿರುವುದು ತಂಡದ ಬ್ಯಾಟಿಂಗ್‍ಗೆ ಕೊಂಚ ಶಕ್ತಿ ಬಂದಿದೆ. ನಾಳಿನ ಪಂದ್ಯವನ್ನು ಪಿಂಕ್ ಪಂದ್ಯ ವೆಂದೇ ಬಿಂಬಿಸಿದ್ದು ಆ ದಿನದಾಟದಲ್ಲಿ ಎಬಿಡಿ ಬ್ಯಾಟಿಂಗ್ ವೈಖರಿ ಜೋರಾಗಿರುತ್ತದೆ. ಈ ಹಿಂದೆ ಇದೇ ದಿನವೇ ವೆಸ್ಟ್‍ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲೇ 149 ರನ್ ಸಿಡಿಸಿದ್ದ ಎಬಿಡಿ , ಭಾರತ ವಿರುದ್ಧ ನಡೆದ ಪಂದ್ಯದಲ್ಲೂ 47 ಎಸೆತಗಳಲ್ಲಿ 77 ರನ್‍ಗಳನ್ನು ಸಿಡಿಸಿ ತಂಡ ಗೆಲುವಿನಲ್ಲಿ ಪಾತ್ರ ವಹಿಸಿದ್ದರು. ಈಗ ನಾಳಿನ ಪಂದ್ಯದಲ್ಲೂ ಅದೇ ರೀತಿಯ ರೋಚಕ ಆಟ ಪ್ರದರ್ಶಿಸಿ ತಂಡವನ್ನು ಸರಣಿಯಲ್ಲಿ ಜೀವಂತವಾಗಿಸುವ ಇರಾದೆಯೂ ಎಬಿಡಿವಿಲಿಯರ್ಸ್ ಮೇಲಿದೆ. ಎಬಿಡಿ ತಂಡದಲ್ಲಿ ಸ್ಥಾನ ಪಡೆದರೆ 3 ಪಂದ್ಯಗಳಿಂದಲೂ ರನ್ ಬರ ಅನುಭವಿಸಿರುವ ಡೇವಿಡ್‍ಮಿಲ್ಲರ್, ಕಾಯಾ ಜೋಂಡೋ ಇಬ್ಬರಲ್ಲಿ ಒಬ್ಬರು ಪಂದ್ಯದಿಂದ ಹೊರಗುಳಿಯಲಿದ್ದಾರೆ.

35ನೆ ಶತಕ ಸಿಡಿಸುವರೇ ವಿರಾಟ್:

ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ರನ್ ಗತಿಯನ್ನು ಹೆಚ್ಚಿಸಿಕೊಂಡಿರುವ ವಿರಾಟ್ ಕೊಹ್ಲಿ ಡರ್ಬನ್ ಹಾಗೂ ಕೇಪ್‍ಟೌನ್ ಪಿಚ್‍ಗಳಲ್ಲಿ ಕ್ಕಮವಾಗಿ 33 ಹಾಗೂ 34ನೇ ಶತಕಗಳನ್ನು ಸಿಡಿಸಿದ್ದು ಸೆಂಚೂರಿಯನ್ ಪಿಚ್‍ನಲ್ಲೂ ಸ್ಫೋಟಕ ಬ್ಯಾಟಿಂಗ್‍ನಿಂದ 35ನೆ ಶತಕ ಸಿಡಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ನಂಬರ್ 1 ಪಟ್ಟ ಗ್ಯಾರಂಟಿ:
ಸರಣಿಯ ಆರಂಭಿಕ 3 ಪಂದ್ಯಗಳನ್ನು ಗೆದ್ದುಕೊಂಡು ಐಸಿಸಿ ರ್ಯಾಂಕಿಂಗ್‍ನಲ್ಲಿ ನಂಬರ್ 1 ಪಟ್ಟ ಗಿಟ್ಟಿಸಿಕೊಂಡಿರುವ ಭಾರತ 4ನೆ ಪಂದ್ಯವನ್ನು ಗೆದ್ದು ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವತ್ತ ಕೊಹ್ಲಿ ಗಮನ ಹರಿಸಿದ್ದಾರೆ.ಸರಣಿಯುದ್ದಕ್ಕೂ ಸ್ಪಿನ್ನರ್‍ಗಳಾದ ಯಜುವೇಂದ್ರ ಚಹಾಲ್, ಕುಲ್‍ದೀಪ್‍ಯಾದವ್‍ರ ಬೌಲಿಂಗ್ ಜಾದೂವನ್ನು ಎದುರಿಸಿ ಹರಿಣಿಗಳು ಸರಣಿಯಲ್ಲಿ ಜೀವಂತವಾಗಿ ಉಳಿಯುವವರೇ ಎಂಬುದನ್ನು ಕಾದು ನೋಡಬೇಕಷ್ಟೇ.

Sri Raghav

Admin