ಸರೇನಾಗೆ 307ನೆ ಗ್ರ್ಯಾನ್‍ಸ್ಲಾಮ್ ಗೆಲುವಿನ ಹೆಗ್ಗಳಿಕೆ

Spread the love

Serena

ನ್ಯೂಯಾರ್ಕ್, ಸೆ.4- ಇಲ್ಲಿ ನಡೆಯುತ್ತಿರುವ ಯುಎಸ್ ಚಾಂಪಿಯನ್‍ಶಿಪ್‍ನಲ್ಲಿ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸರೇನಾ ವಿಲಿಯಮ್ಸ್ ದಾಖಲೆಯ 307ನೇ ಗ್ರ್ಯಾನ್‍ಸ್ಲಾಮ್ ಪಂದ್ಯಗಳ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದ್ದಾರೆ.  ಮಹಿಳೆಯರ ಸಿಂಗಲ್ಸ್ ವಿಭಾಗ ದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ಮಾರ್ಟಿನ್ ನವ್ರಾಟಿಲೋವಾ ನಂತರ ಸರೇನಾ ದಾಖಲೆಯ 307 ಗ್ರ್ಯಾನ್ ಸ್ಲಾಮ್ ಪಂದ್ಯಗಳನ್ನು ಜಯಿಸಿ ನೂತನ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ, ಅಮೆರಿಕದ ಆಟಗಾರ್ತಿ ಸಿಂಗಲ್ಸ್‍ನಲ್ಲಿ ಒಟ್ಟು 22 ಗ್ರ್ಯಾನ್‍ಸ್ಲಾಮ್‍ಗಳನ್ನು ಜಯಿಸಿದ್ದು, ಇನ್ನೂ ಎರಡು ಗ್ರ್ಯಾನ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಖ್ಯಾತ ಆಟಗಾರ್ತಿ ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾನ್‍ಸ್ಲಾಮ್ ದಾಖಲೆಯನ್ನು ಮುರಿಯಲಿದ್ದಾರೆ.

ದಾಖಲೆ ಏಳನೇ ಯುಎಸ್ ಪ್ರಶಸ್ತಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಸರೇನಾ ವಿಲಿಯಮ್ಸ್ ಕಜಕಿಸ್ತಾನ ಆಟಗಾರ್ತಿ ಯುರೊಸ್ಲಾವಾ ಶವೆಡವಾ ವಿರುದ್ಧ ಸೆಣಸಲಿದ್ದಾರೆ.
ನೂತನ ದಾಖಲೆ ಬಗ್ಗೆ ಮಾತನಾಡಿದ ಸರೇನಾ, ಇದೊಂದು ಅದ್ಭುತವಾದ ಪಂದ್ಯವಾಗಿತ್ತು.   ಎದುರಾಳಿ ಆಟಗಾರ್ತಿ ಚಾಣಾಕ್ಷ ಪ್ರದರ್ಶನ ನೀಡಿದರು. ಆದರೆ, ಅದಕ್ಕೆ ವಿರುದ್ಧವಾಗಿ ತಾಳ್ಮೆಯಿಂದ ಆಟವಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಂತಿಮವಾಗಿ ಗೆಲುವಿನ ನಗೆ ಬೀರಿದೆ.

► Follow us on –  Facebook / Twitter  / Google+

Facebook Comments

Sri Raghav

Admin