ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಫಲಕ ಹಾಕಲು ಒತ್ತಾಯಿಸಿ ಮನವಿ

13

ರಾಮದುರ್ಗ,ಫೆ.15- ತಾಲೂಕಿನ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಹಿತಿ ಫಲಕ ಹಾಕಬೇಕು. ತಹಶೀಲ್ದಾರ ಕಚೇರಿಯಲ್ಲಿ ಬರ ಪರಿಹಾರ ಕುರಿತು ನಾಮಪಲಕಗಳನ್ನು ಹಾಕಬೇಕು. ಒಂದು ವೇಳೆ ಹಾಕದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾ ಘಟಕದ ಆಧ್ಯಕ್ಷ ಜಗದೀಶ ದೇವರಡ್ಡಿ ಎಚ್ಚರಿಕೆ ನೀಡಿದರು.ಪಟ್ಟಣದ ಕಳಸಾ ಬಂಡೂರಿ, ಬರ ಪರಿಹಾರ ಮತ್ತು ತಾಲೂಕಿನ ಕಛೇರಿಗಳಲ್ಲಿ ಮಾಹಿತಿ ಫಲಕ ಹಾಕಬೇಕೆಂದು ನಿನ್ನೆ ಉಭಯ ಸಂಘಟನೆಗಳ ಪಧಾಧಿಕಾರಿಗಳು ತಹಶೀಲ್ದಾರ ಕೆ. ನೀತಿನ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ರೈತರಗೆ ದೊರೆಯಬೇಕಾದ ಬೆಳೆ ಪರಿಹಾರ ರೈತರಿಗೆ ಸಮರ್ಪಕವಾಗಿ ದೊರೆಯದೆ ಸಾಕಷ್ಟು ಅವ್ಯವಹಾರವಾಗಿದೆ. ಅದನ್ನು ಸರಿ ಪಡಿಸಬೇಕು. ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಮಾಡಬೇಕೆಂದು ಹೋರಾಟ ಮಾಡುತ್ತಿರುವ ರೈತರ ಮೇಲೆ ಅನ್ಯಾಯವಾಗಿ ಇಲ್ಲಸಲ್ಲದ ಆರೋಪ ಮಾಡಿ ಕ್ರಿಮಿನಲ್ ಕೇಸ್ ದಾಖಲೆ ಮಾಡಿದ್ದಾರೆ. ರೈತರನ್ನು ಗಡಿಪಾರು ಮಾಡುವಂಥ ಹುನ್ನಾರ ನಡೆಯುತ್ತಿದೆ. ಜಿಲ್ಲಾ ಆಡಳಿತ ತಕ್ಷಣ ಸೂಕ್ತ ಕ್ರಮ ತಗೆದುಕೊಂಡು ರೈತರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸತತ ಬರಗಾಲ ಆವರಿಸಿ ಬಿತ್ತಿದ ಬೆಳೆ ಸರಿಯಾಗಿ ಬರದ ಕಾರಣ ಕೃಷಿ ಪತ್ತಿನ ಸಂಘಗಳಲ್ಲಿ ರೈತರು ಸಾಲ ತುಂಬಬೇಕು ಎಂದು ನೋಟಿಸು ನೀಡುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿ ಆತ್ಮಹತ್ಯ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಸೂಕ್ತ ಕ್ರಮ ತಗೆದುಕೊಳ್ಳಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕುಡಿಯುವ ನೀರಿನ ಸಮಸ್ಯ ಉಲ್ಬಣಿಸದಂತೆ ತಾಲೂಕಾ ಆಡಳಿತ ಕ್ರಮ ತಗೆದುಕೊಳ್ಳಬೇಕು. ಜಾನುವಾರು ಗಳಿಗೆ ಗೋಶಾಲೆಗಳನ್ನು ಪ್ರಾರಂಭಿಸಬೇಕು. ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕು, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಗಳಲ್ಲಿ ಉತಾರಗಳು ಸಿಗುವಂತಾಗಬೇಕು ಎಂದು ಮನವಿ ಸಲ್ಲಿಸಿದರು.ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ ಬರ ಪರಿಹಾರ, ಕುಡಿಯುವ ನೀರು ಪೂರೈಸುವ ವೇಳೆಯಲ್ಲಿ ಸಾಕಷ್ಟು ಅವ್ಯವಹಾಗಳು ನಡೆದಿವೆ. ತಾಲೂಕಾ ಆಡಳಿತ ಸಂಪೂರ್ಣ ಲಂಚದಲ್ಲಿ ಮುಳುಗಿ ಹೋಗಿದೆÉ. ಎಲ್ಲವನ್ನು ಸರಿ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಯಲ್ಲಪ್ಪ ದೊಡಮನಿ, ಹಸಿರು ಸೇನೆ ತಾಲೂಕಾ ಆಧ್ಯಕ್ಷ ಶಿವಾನಂದ ದೊಡವಾಡ, ಉಪಾಧ್ಯಕ್ಷ ಸುರೇಶ ಗುಂಜೇರಿ, ಮಾರುತಿ ಕುಂಬಾರ ಸೇರಿದಂತೆ ಅನೇಕರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin