ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕ್ ಸೆರೆಹಿಡಿದ ಯೋಧ ಬಾಬುಲಾಲ್ ಚವಾಣ್ ಬಿಡುಗಡೆಗೆ ಭಾರತ ಒತ್ತಾಯ

Spread the love

Chandu-babulal-Chowhan

ನವದೆಹಲಿ, ನ.1- ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಹಾರಕ್ಕಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಸೆರೆ ಹಿಡಿಯಲ್ಪಟ್ಟ ಯೋಧ ಚಂದು ಬಾಬುಲಾಲ್ ಚವಾಣ್ ಸುರಕ್ಷಿತ ಬಿಡುಗಡೆಗಾಗಿ ಭಾರತವು ವಿಭಿನ್ನ ತಂತ್ರ ಅನುಸರಿಸಿದೆ. ಯೋಧನ ತ್ವರಿತ ಬಿಡುಗಡೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೇಲೆ ಒತ್ತಡ ಹೇರುವ ಮೂಲಕ ರಾಜತಾಂತ್ರಿಕ ಕ್ರಮಕ್ಕೆ ಭಾರತ ಮುಂದಾಗಿದೆ. ಚವಾಣ್‍ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಈವರೆಗೆ ಭಾರತೀಯ ಸೇನೆಯ ಡಿಜಿಎಂಒ (ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು) ರಣಬೀರ್ ಸಿಂಗ್ ಪಾಕಿಸ್ತಾನದ ಸಹವರ್ತಿ ಮೇಲೆ ಒತ್ತಡ ಹೇರಿದ್ದರು. ಈಗ ರಾಜತಾಂತ್ರಿಕ ಪಟ್ಟು ಹಾಕಿರುವ ಸರ್ಕಾರವೂ ಯೋಧನನ್ನು ಭಾರತಕ್ಕೆ ಒಪ್ಪಿಸುವಂತೆ ಪಾಕ್ ವಿದೇಶಾಂಗ ಸಚಿವಾಲಯದ ಮೇಲೆ ಒತ್ತಡ ಹಾಕಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಡಿಜಿಎಂಓ ಜೊತೆಗೆ ಭಾರತ ವಿದೇಶಾಂಗ ವ್ಯವಹಾರ ಇಲಾಖೆಯೂ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿರುವುದರಿಂದ ಪಾಕಿಸ್ತಾನದ ಮೇಲೆ ಸಹಜವಾಗಿ ಒತ್ತಡ ಹೆಚ್ಚಾಗಿದೆ.

37ನೇ ರಾಷ್ಟ್ರೀಯ ರೈಫಲ್ಸ್‍ನ ಸಿಪಾಯಿ ಚವಾಣ್, ಸೆ.29ರಂದು ಮೆಂಧಾರ್ ಸೆಕ್ಟರ್‍ನಲ್ಲಿ ಆಕಸ್ಮಿಕವಾಗಿ ನಾಪತ್ತೆಯಾಗಿದ್ದರು. ಆ ನಂತರ ಅವರು ಪಾಕಿಸ್ತಾನ ಸೈನಿಕರಿಗೆ ಸೆರೆ ಸಿಕ್ಕಿರುವುದು ತಿಳಿದು ಬಂದಿತು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಯೋಧನ ಬಿಡುಗಡೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಡಿಜಿಎಂಇಗೆ ಸೂಚನೆ ನೀಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin