ಸಾಂಸ್ಕೃತಿಕ  ರಾಯಭಾರಿ ಎಂ.ಪಿ. ಪ್ರಕಾಶ್

10

ಹೂವಿನಹಡಗಲಿ,ಫೆ.7- ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರು ಮುತ್ಸದ್ಧಿ ರಾಜಕಾರಣಿ ಅಲ್ಲದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ  ಕ್ಷೇತ್ರಕ್ಕೆ ಒತ್ತು ನೀಡಿ, ಪ್ರೋತ್ಸಾಹಿಸುವ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ರಂಗತಜ್ಞ ಶರಬೇಂದ್ರ ಸ್ವಾಮಿ  ಅಭಿಪ್ರಾಯಪಟ್ಟರು.ಪಟ್ಟಣದ ರಂಗಭಾರತಿ ಕಲಾಮಂದಿರದಲ್ಲಿ ರಂಗಭಾರತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ  ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜು ರಂಗಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಂ.ಪಿ. ಪ್ರಕಾಶ ಅವರು ಹುಟ್ಟುಹಾಕಿದ ರಂಗಭಾರತಿಯ ಸಂಸ್ಥೆಯಲ್ಲಿ ಗ್ರಾಮೀಣ ರಂಗಭೂಮಿ ಪರಂಪರೆಯ ಹಿನ್ನೆಲೆಯುಳ್ಳ ರಂಗಭೂಮಿಯ ಸೊಗಡಿನ ಕಲೆಯನ್ನು ಗಟ್ಟಿಗೊಳಿಸಿ, ಬೆಳೆಸುವುದು ಅವರ ಕನಸಾಗಿತ್ತು. ಮುಂಬರುವ ದಿನಗಳಲ್ಲಿ ರಂಗಭೂಮಿ ಉಳಿಯಬೇಕಾದರೆ ಚಿಣ್ಣರು, ಯುವಕರು ರಂಗಭೂಮಿ ಕಲೆಯಲ್ಲಿ ತಮ್ಮನ್ನು ಸ್ವಇಚ್ಛೆಯಿಂದ ತೊಡಗಿಸಿಕೊಂಡಾಗ ಮಾತ್ರ ಸಕ್ರೀಯವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಜನಪದ ರಂಗಭೂಮಿ ಶ್ರೀಮಂತವಾಗಿದ್ದು, ಬಯಲಾಟ, ಸಣ್ಣಾಟ, ಕಣ್ಮರೆಯಾಗುತ್ತಿರುವುದು ವಿಷಾಧನೀಯವಾಗಿದ್ದು, ಕಾಲೇಜು ರಂಗೋತ್ಸವದ ಮೂಲಕ ಹೊಸರಂಗಭೂಮಿ ಹುಟ್ಟಿಗೆ ವಿದ್ಯಾರ್ಥಿ ಯುವಶಕ್ತಿ ಕಾರಣರಾಗಬಲ್ಲರು, ಯುವ ಪೀಳಿಗೆ ತನ್ಮೂಲಕ ಸಾಂಸ್ಕೃತಿಕ  ಭೂಮಿಕೆಯ ಛಲ ಹೊಂದಲು ಮುಂದಾಗಬೇಕೆಂದು ಕರೆ ನೀಡಿದರು.ರಂಗಭಾರತಿಯ ಹಿರಿಯ ಸದಸ್ಯ ಟಿ. ಪರಮೇಶ್ವರಪ್ಪ ಮಾತನಾಡಿ, ರಂಗಭಾರತಿಯು 53 ವರ್ಷಗಳ ಇತಿಹಾಸ ಹೊಂದಿದ್ದು, ಅನೇಕ ರಂಗಭೂಮಿ ಚಟುವಟಿಕೆಗಳು ಚಿಣ್ಣರಮೇಳ, ನಾಟಕೋತ್ಸವ, ಜನಪದ ಉತ್ಸವ, ಅಲ್ಲದೆ, ಕಲೆ, ಸಾಹಿತ್ಯ, ಕ್ರೀಡೆಯಂತಹ ಚಟುವಟಿಕೆಗಳನ್ನು ಆಯೋಜಿಸಿ ಉತ್ತೇಜನಾ ನೀಡುತ್ತಾ ಬಂದಿದೆ ಎಂದರು. ರಂಗಭಾರತಿಯನ್ನು ಹುಟ್ಟುಹಾಕಿ, ಗಟ್ಟಿ ನೆಲೆಯನ್ನ ರಂಗಕಲೆಗೆ ಕಲ್ಪಿಸಿ, ಎಂ.ಪಿ. ಪ್ರಕಾಶ್‍ರನ್ನು ಸ್ಮರಿಸಿ, ಮಲ್ಲಿಗೆ ನಾಡಾದ ಹೂವಿನಹಡಗಲಿಯನ್ನು ಮುತ್ಸದ್ಧಿ ರಾಜಕಾರಣದ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸಿ, ರಾಜ್ಯ ಮತ್ತು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತಹ ಶ್ಲಾಘನೀಯ ಕಾರ್ಯ ಮಾಡಿದ್ದು, ಅವರ ಕುಟುಂಬವರ್ಗ ಅವರ ಕಲೆ ಸಾಂಸ್ಕೃತಿಕ  ಲೋಕದ ಕನಸನ್ನು ರಂಗಭಾರತಿ ಸಂಸ್ಥೆಯ ಮೂಲಕ ಆಯೋಜಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್‍ಆರ್‍ಎಂಪಿಪಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಬೋನಿಗೆ ಬಿದ್ದವರು ಹಾಗೂ ಕೂಡ್ಲಿಗಿಯ ಎಸ್‍ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವೀರಸಿಂಧೂರ ಲಕ್ಷ್ಮಣ, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಂದ ವಿಚಾರಿಸು ನಾಟಕ ರಂಗಸ್ಪರ್ಧೆಯಲ್ಲಿ ನಾಟಕ ಪ್ರಸ್ತುತ ಪಡಿಸಿದರು.
ರಂಗಭಾರತಿಯ ವೀಣಾ ಮಹಾಂತೇಶ್, ಸುಮಾ ವಿಜಯ, ತೀರ್ಪುಗಾರರಾಗಿ ಡಾ. ಶಶಿಧರ ನರೇಂದ್ರ, ಪದ್ಮಾ ಕೊಡಗು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Sri Raghav

Admin