ಸಾರ್ವಜನಿಕರಿಗೆ 100 ಸೇವೆ ನೀಡಲು ಸರ್ಕಾರ ಸಿದ್ಧ : ಡಿ.ಕೆ.ಸುರೇಶ್
ಆನೇಕಲ್, ಸೆ.17- ಸರ್ಕಾರ ಯೋಜನೆಗಳು ರೈತರಿಗೆ ಸಿಗಬೇಕು ಎಂಬುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬಾಪೂಜಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ರೈತರ ಹಾಗೂ ಸಾರ್ವಜನಿಕರಿಗೆ ಸಂಬಂಧಪಟ್ಟ 100 ಸೇವೆಗಳನ್ನು ನೀಡಲು ಸಿದ್ದವಾಗಿದೆ ಇದು ದೇಶದಲ್ಲಿ ಪ್ರಥಮ ಕಾರ್ಯಕ್ರಮವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಗ್ರಾಮೀಣ ರಸ್ತೆಯ ವಿಶೇಷ ಅನುಧಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರು ಹಾಗೂ ಸಾರ್ವಜನಿಕರು ತಮ್ಮ ಜಮೀನಿನ ದಾಖಲೆಗಳು ಮತ್ತು ಸರ್ಕಾರದ ಯೋಜನೆಯನ್ನು ಪಡೆಯಬೇಕಾದರೆ ತಾಲ್ಲೂಕು ಕಚೇರಿಗೆ ಅಲೆಯ ಬೇಕಾಗಿತ್ತು.
ಜೊತೆಗೆ ಬಹಳಷ್ಟು ಸಮಯವನ್ನು ವ್ಯರ್ಥಮಾಡಬೇಕಿತ್ತು ಇದರ ಅನ್ವಯ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ನೀಡಿದ್ದು ಇದಕ್ಕೆಲ್ಲಾ ತಿಲಾಂಜಲಿ ಇಡಬೇಕು ಎಂಬುವ ಪರಿಕಲ್ಪನೆಯಲ್ಲಿ ಗ್ರಾಪಂ ಆವರಣದಲ್ಲಿ ಬಾಪೂಜಿ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ಸಾರ್ವಜನಿಕರಿಗೆ ಎಲ್ಲಾ ಸೇವೆಗಳನ್ನು ನೀಡಲು ಸರ್ಕಾರ ಸಿದ್ಧವಿದ್ದು, ಸರ್ಕಾರದ ಯೋಜನೆಗಳನ್ನು ಸದ್ಬಳಕೆಮಾಡಿಕೊಳ್ಳಬೇಕೆಂದು ಕರೆ ನೀಡಿದರು.m ಶಾಸಕ ಬಿ.ಶಿವಣ್ಣ ಮಾತನಾಡಿ, ಗ್ರಾಮಗಳ ಅಭಿವೃದ್ದಿಯಾದರೆ ದೇಶದ ಅಭಿವೃದ್ದಿ ಸಾಧ್ಯ ಎಂಬುವ ಪರಿಕಲ್ಪನೆಯಲ್ಲಿ ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ದಿಗೆ ಸುಮಾರು ಈ ಗಾಗಲೇ 16 ಕೋಟಿ ರೂ. ಅನುದಾನಬೇಡಿ ಡಿ ಅಭಿವೃದ್ದಿ ಪಡಿಸಿದ್ದೇವೆ.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಹಂತ-ಹಂತವಾಗಿ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡುತ್ತೇವೆ ಎಂದು ಹೇಳಿದರು.
ಪಂಚಾಯಿತಿ ಸದಸ್ಯ ಇಂಡ್ಲವಾಡಿ ಕೃಷ್ಣ ಮೂರ್ತಿ, ಮುಖಂಡ ಸಿ.ನಾಗರಾಜ್, ತಾಪಂ ಸದಸ್ಯ ಮಹದೇವ್, ಪಂಚಾಯಿತಿ ಅಧ್ಯಕ್ಷೆ ಮಂಗಳ ರೇಣುಕ ಪ್ರಸಾದ್, ಪಂಚಾಯಿತಿ ಸದಸ್ಯ ಇಂಡ್ಲವಾಡಿ ಕೃಷ್ಣ ಮೂರ್ತಿ, ಉಪಾಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಮುಖಂಡ ಮೆಣಸಿಗನಹಳ್ಳಿ ಮುನಿರಾಜು, ದೊಡ್ಡಹಾಗಡೆ ಹರೀಶ್ ಗೌಡ, ಮುರುಗೇಶ್ ಅರೇಹಳ್ಳಿ ಮಧು ಮತ್ತಿತರು ಹಾಜರಿದ್ದರು.