ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಲು ಒತ್ತಾಯ

toilate-room--chikkanayakan

ಚಿಕ್ಕನಾಯಕನಹಳ್ಳಿ, ಸೆ.23- ಪ್ರತಿದಿನ ನೂರಾರು ಜನರು ಬಳಸುವ ಖಾಸಗಿ ಬಸ್ ನಿಲ್ದಾಣದ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ ದಲಿತ ಸೇನೆಯ ಮಲ್ಲಿಕಾರ್ಜುನ್ ಒತ್ತಾಯಿಸಿದರು.ಪುರಸಭೆ ಗುತ್ತಿಗೆ ಆಧಾರದ ಮೇಲೆ ಪಡೆದ ಶೌಚಾಲಯದಿಂದ ಲಾಭಮಾಡಿಕೊಳ್ಳುತ್ತಿರುವ ಟೆಂಡರ್‍ದಾರರು ಇದರ ಸ್ವಚ್ಛತೆಯ ಕಡೆ ಗಮನಹರಿಸುತ್ತಿಲ್ಲ ಎಂದು ದೂರಿದರು.ಪಟ್ಟಣದ ಖಾಸಗಿ ಬಸ್‍ನಿಲ್ದಾಣದ ಬಳಿ ಇರುವಂತಹ ಸಾರ್ವಜನಿಕ ಶೌಚಾಲಯ ಬಳಸಲು ಯೋಗ್ಯವಿಲ್ಲದಂತಿದೆ, ಕೆಟ್ಟವಾಸನೆಯಿಂದ ಜನರು ಓಡಾಡಲು ತೊಂದರೆಯಾಗುತ್ತಿದೆ ಕೂಡಲೇ ಇದರ ಸ್ವಚ್ಛತೆ ಕ್ರಮವಹಿಸಬೇಕು ಎಂದು ಅವರು ಒತ್ತಾಯವಾಗಿದೆ.ಶೌಚಾಲಯದ ಸ್ವಚ್ಛತೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಇಂಜಿನಿಯರ್ ಚಂದ್ರಶೇಖರ್, ಇದರ ಸ್ವಚ್ಛತೆಯ ಬಗ್ಗೆ ಟೆಂಡರ್‍ದಾರರಿಗೆ ಹಲವು ಬಾರಿ ಹೇಳಿದ್ದರು ಕ್ರಮಕೈಗೊಂಡಿಲ್ಲ. ಕೂಡಲೇ ಇದರ ಸ್ವಚ್ಛತೆಯ ಕಡೆ ಗಮನಹರಿಸಿ ಪೆನಾಯಿಲ್, ಬ್ಲೀಚಿಂಗ್ ಪೌಡರ್‍ಗಳನ್ನು ಬಳಸಿ ಸ್ವಚ್ಚಪಡಿಸುವಂತೆ ತಿಳಿಸುವುದಾಗಿ ಹೇಳಿದರು.

 

► Follow us on –  Facebook / Twitter  / Google+

Sri Raghav

Admin