ಸಾಲದ ಕಂತು ಮರುಪಾವತಿಸದ ಮಹಿಳೆ ಮೇಲೆ ಲೇವಾದೇವಿದಾರನಿಂದ ಲೈಂಗಿಕ ದೌರ್ಜನ್ಯ

Rape-aಮೈಸೂರು, ಮಾ.11-ಸಾಲದ ಕಂತು ಮರುಪಾವತಿಸದ ಮಹಿಳೆ ಮೇಲೆ ಲೇವಾದೇವಿದಾರನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.ಶ್ರೀರಂಗಪಟ್ಟಣದ 25 ವರ್ಷದ ಗೃಹಿಣಿಯೊಬ್ಬರು ರಾಮನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಪತಿಯಿಂದ ದೂರವಾಗಿದ್ದ ಈ ಗೃಹಿಣಿ ಪೊಷಕರೊಂದಿಗೆ ವಾಸವಿದ್ದರು.ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ರಾಮನಗರದ ಲೇವಾದೇವಿದಾರ ಶೇಖರ್ ಎಂಬಾತನಿಂದ ಈ ಮಹಿಳೆ 22 ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದ್ದು, ಪ್ರತಿವಾರ ಬಡ್ಡಿ ಸಹಿತಿ 2 ಸಾವಿರ ರೂ. ಕಂತು ಪಾವತಿಸುತ್ತಿದ್ದರು.ಕಳೆದ ತಿಂಗಳು ಹಣ ಮರುಪಾವತಿಸಲು ಈ ಗೃಹಿಣಿಗೆ ಸಾಧ್ಯವಾಗಿರಲಿಲ್ಲ. ಹಣ ಕೇಳುವ ಸಲುವಾಗಿ ಈಕೆ ಮನೆಗೆ ಬಂದಾಗ ಸದ್ಯ ಹಣ ಕೊಡಲು ಸಾಧ್ಯವಿಲ್ಲ. ಮುಂದಿನ ತಿಂಗಳು ಕೊಡುವುದಾಗಿ ಹೇಳಿದ್ದಾರೆ.

ಇದಕ್ಕೆ ಒಪ್ಪದ ಆತ ಗೃಹಿಣಿಯನ್ನು ರಾಮನಗರದ ತನ್ನ ಮನೆಗೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಲಾಗಿದ್ದು, ಈ ವೇಳೆ ಪ್ರಜ್ಞೆ ಕಳೆದುಕೊಂಡಿದ್ದನ್ನು ನೋಡಿ ಹೆದರಿದ ಈ ಲೇವಾದೇವಿದಾರ ಪುನಃ ಆಕೆಯನ್ನು ವಾಪಸ್ ಮನೆಗೆ ಕರೆತಂದು ಬಿಟ್ಟಿದ್ದಾನೆ ಎನ್ನಲಾಗಿದೆ.ಈ ವಿಷಯ ತಿಳಿದ ಜನಸಂಗ್ರಾಮ ಪರಿಷತ್‍ನ ಸದಸ್ಯರು ಗೃಹಿಣಿ ಮನೆಗೆ ತೆರಳಿ ಆಕೆಯನ್ನು ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಸಂಬಂಧ ನೊಂದ ಗೃಹಿಣಿ ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin