ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಆನೆಗೆ ಕೊನೆಗೂ ಚಿಕಿತ್ಸೆ

elephant-attack

ರಾಮನಗರ,ಅ.21-ಜಿಲ್ಲೆಯ ಮಂಚನಬೆಲೆ ಸಮೀಪ ಹಳ್ಳಕ್ಕೆ ಬಿದ್ದು 50 ದಿನಗಳಿಂದ ಸಾವುಬದುಕಿನ ನಡುವೆ ಹೋರಾಟ ನಡೆಸಿದ ಕಾಡಾನೆಗೆ ಕೊನೆಗೂ ಜಿಲ್ಲಾ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿನ ಮಂಚನಬೆಲೆ ಡ್ಯಾಂನ ಹಳ್ಳವೊಂದಕ್ಕೆ ಕಳೆದ ಆಗಸ್ಟ್ 30ರಂದು ಕಾಡಾನೆ ಆಯಾತಪ್ಪಿ ಬಿದ್ದು ಒಂದು ಕಾಲಿಗೆ ತೀವ್ರ ಗಾಯ ಮಾಡಿಕೊಂಡು ಹಳ್ಳದಿಂದ ಹೊರಬರಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಹಳ್ಳದಿಂದ ಕ್ರೇನ್ ಮೂಲದ ಹೊರತೆಗೆದು ಆನೆ ತಜ್ಞರಾದ ಅಸ್ಸಾಂನ ಡಾ.ಕುಶಾಲ್‍ಕುಮಾರ್ ಮತ್ತು ಕೇರಳದ ಅರುಣ್ ಜಕಾಲಿ ಎಂಬುವರು ಚಿಕಿತ್ಸೆ ನೀಡುತ್ತಿದ್ದಾರೆ. ಆನೆಗೆ ಚಿಕಿತ್ಸೆ ನೀಡುವ ಸಲುವಾಗಿ ಬೇರೆ ಕ್ಯಾಂಪ್‍ನಿಂದ ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಸ್ಥಳೀಯರು ಕುತೂಹಲದಿಂದ ಆನೆಗೆ ಚಿಕಿತ್ಸೆ ನೀಡುತ್ತಿರುವುದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.

 

► Follow us on –  Facebook / Twitter  / Google+

Sri Raghav

Admin