ಸಿಂಗಪುರ್ ನದಿ ಉತ್ಸವದಲ್ಲಿ ನೀರಿನ ಮೇಲೆ ಮಾನವ ಬಲೆ ನಿರ್ಮಾಣ

Spread the love
ಸಿಂಗಪುರ್ ನದಿ ಉತ್ಸವದಲ್ಲಿ ನೀರಿನ ಮೇಲೆ ಮಾನವ ಬಲೆ ನಿರ್ಮಾಣ ಪ್ರದರ್ಶನವು ವಿಶೇಷ ಗಮನ ಸೆಳೆಯಿತು. ಏನಿದು ಹ್ಯುಮನ್ ನೆಟ್ ಪರ್ಫಾರ್ಮೆನ್ಸ್..?ಹಗ್ಗಗಳಿಗೆ ಹೊಂದಿಕೊಂಡಿದ್ದ ಬಿಳಿ ಜಂಪ್‍ಸೂಟ್‍ಗಳಲ್ಲಿದ್ದ 42 ಸಾಹಸಿಗರನ್ನು ಕ್ಲಾರ್ಕ್ ಕ್ವಾಯೇ ನದಿಯ ಮೇಲೆ 30 ಮೀಟರ್‍ಗಳ ಬಲೆಯ ಮೇಲೆ ಎತ್ತರಿಸಿ ನಿಲ್ಲಿಸಲಾಯಿತು. ಸಂಗೀತಕ್ಕೆ ಅನುಗುಣವಾಗಿ ಅವರು ಮಾನವ ಬಲೆಗಳನ್ನು ರೂಪಿಸಿ ಗಮನ ಸೆಳೆದರು. ನದಿ ಉತ್ಸವದಲ್ಲಿ 14 ವರ್ಷದಿಂದ 50 ವರ್ಷಗಳ ವಯೋಮಾನದ ಸ್ಪರ್ಧಿ ಗಳು ಭಾಗವಹಿಸಿದ್ದರು. ಮಾನವ ಬಲೆ ನಿರ್ಮಾಣಕ್ಕಾಗಿ ಇವರು ಹಲವಾರು ದಿನಗಳಿಂದ ದಿನಕ್ಕೆ ಕನಿಷ್ಠ ನಾಲ್ಕು ಗಂಟೆಗಳ ಕಾಲ ತಾಲೀಮು ನಡೆಸಿದ್ದರು.ಈ ಸಾಹಸ ಪ್ರದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದ ಎರಿಕ್ ಓಹ್ ಎಂಬ ಪ್ರದರ್ಶಕನು ಇದೊಂದು ರೋಮಾಂಚನಕಾರಿ ಅನುಭವ ಎಂದು ಉದ್ಗರಿಸಿದ.ವಿಶ್ವ ವಿಖ್ಯಾತ ಸ್ಪಾನಿಶ್ ಥಿಯೇಟ್ರಿಕಲ್ ಗ್ರೂಪ್ ಲಾ ಫುರಾ ಡೆಲ್ಸ್ ಬೌಸ್ ಈ ಪ್ರದರ್ಶನದ ಹಿಂದಿನ ರೂವಾರಿ ಮೂರು ದಿನಗಳ ಸಿಂಗಪುರ್ ನದಿ ಉತ್ಸವದ ಸಂದರ್ಭದಲ್ಲಿ ಮಾನವ ಬಲೆ ನಿರ್ಮಾಣ ಪ್ರದರ್ಶನವನ್ನು 50ನೇ ವರ್ಷಾಚರಣೆ ಅಂಗವಾಗಿ ದೇಶದ ಪ್ರವಾಸೋದ್ಯಮ ಮಂಡಳಿ ಪ್ರಾಯೋಜಿಸಿತ್ತು.

Facebook Comments

Sri Raghav

Admin