ಸಿಂಧು , ಸಾಕ್ಷಿ, ದೀಪಾ, ಜೀತು ರಾಯ್ ಗೆ ಖೇಲ್ ರತ್ನ ಪ್ರದಾನ

Khel-ratan-a

ನವದೆಹಲಿ, ಆ.29- ರಿಯೋ ಒಲಂಪಿಕ್ಸ್ನಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿದರು. ವಿವಿಧ ವಿಭಾಗಗಳ ಕ್ರೀಡಾ ಸಾಧಕರುಗಳಿಗೂ ದ್ರೋಣಾಚಾರ್ಯ, ಅರ್ಜುನ ಮತ್ತು ಧ್ಯಾನಚಂದ್ ಪ್ರಶಸ್ತಿಗಳನ್ನು ಸಹ ನೀಡಲಾಗಿದೆ.  ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾ ರಂಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ಪಿ.ಸಿಂಧೂ, ಕುಸ್ತಿ ಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜೀತು ರಾಯ್ ಅವರಿಗೆ ಪ್ರಣಬ್ ಮುಖರ್ಜಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಇದರೊಂದಿಗೆ ಆರು ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಗಳು, 15 ಸಾಧಕರಿಗೆ ಅರ್ಜುನ ಪ್ರಶಸ್ತಿಗಳು ಹಾಗೂ ಮೂವರಿಗೆ ಧ್ಯಾನ್ಚಂದ್ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಸಿಂಧು ಅವರ ಬಾಡ್ಮಿಂಟನ್ ಕೋಚ್ ಪುಲ್ಲೇಲ್ಲ ಗೋಪಿಚಂದ್, ಕನ್ನಡಿಗ ಪ್ರದೀಪ್ಕುಮಾರ್ (ಈಜು), ನಾಗಪುರಿ ರಮೇಶ್ (ಅಥ್ಲೆಟಿಕ್ಸ್), ಸಾಗರ್ ಮಲ್ ದಯಾಳ್ (ಬಾಕ್ಸಿಂಗ್), ಬಿಶ್ವೇಶ್ವರ ನಂದಿ (ಕುಸ್ತಿ) ಹಾಗೂ ರಾಜ್ಕುಮಾರ್ ಶರ್ಮ (ಕ್ರಿಕೆಟ್) ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಕೊಡ ಮಾಡಲಾಗಿದೆ.

ಅರ್ಜುನ ಪ್ರಶಸ್ತಿ ಸನ್ಮಾನಿತರು:

ಕ್ರಿಕೆಟ್ ಪಟು ಅಂಜಿಕ್ಯ ರೆಹಾನೆ, ಬಾಕ್ಸರ್ ಶಿವಥಾಪ, ಅಥ್ಲೀಟ್ ಲಲಿತಾ ಬಬರ್, ಹಾಕಿ ಆಟಗಾರರಾದ ವಿ.ಆರ್.ರಘುನಾಥ್ ಮತ್ತು ರಾಣಿ ರಾಮ್ಪಾಲ್ ಅರ್ಜುನ ಪ್ರಶಸ್ತಿಗಳನ್ನು ಪಡೆದವರಲ್ಲಿ ಪ್ರಮುಖರಾಗಿದ್ದಾರೆ.  ಸತ್ತಿ ಗೀತಾ (ಅಥ್ಲೆಟಿಕ್), ಸಿಲ್ವನಸ್ ಡುಂಗ್ ಡುಂಗ್ (ಹಾಕಿ) ಹಾಗೂ ರಾಜೇಂದ್ರ ಪ್ರಹ್ಲಾದ್ ಶೆಲ್ನೆ (ರೋಯಿಂಗ್) ಇವರು ಧ್ಯಾನ್ಚಂದ್ ಜೀವಿತಾವಧಿ ಸಾಧನೆ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Khel-r

Sri Raghav

Admin