ಸಿಂಧೂ ಜಲ ಒಪ್ಪಂದ ಉಲ್ಲಂಘಿಸಿದರೆ ಕಾನೂನು ಕ್ರಮ : ಭಾರತಕ್ಕೆ ಪಾಕ್ ವಾರ್ನಿಂಗ್

Spread the love

Pakistan-Warning

ಇಸ್ಲಾಮಾಬಾದ್, ಅ.21- ಒಂದೆಡೆ ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿರುವ ಪಾಕಿಸ್ತಾನ ಇನ್ನೊಂದೆಡ ಭಾರತದ ವಿರುದ್ಧ ಕಾನೂನು ಸಮರಕ್ಕೂ ಕುತಂತ್ರ ರೂಪಿಸುತ್ತಿದೆ. ಸಿಂಧೂ ಜಲ ಒಪ್ಪಂದ ಸೇರಿದಂತೆ ಯಾವುದೇ ದ್ವಿಪಕ್ಷೀಯ ಒಡಂಬಡಿಕೆಗಳನ್ನು ಉಲ್ಲಂಘಿಸಿದಲ್ಲಿ ಭಾರತದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಸಿಂಧು ಜಲ ಒಪ್ಪಂದ ಸೇರಿದಂತೆ ಇತರ ಒಡಂಬಡಿಕೆಗಳ ಬಗ್ಗೆ ತೀವ್ರ ನಿಗಾವಹಿಸಿದೆ. ಯಾವುದೇ ಒಪ್ಪಂದ ಉಲ್ಲಂಘನೆಯಾದಲ್ಲಿ ಕಾನೂನು ಸಮರಕ್ಕೆ ಸಜ್ಜಾಗಲಿದೆ ಎಂದು ವಿದೇಶಾಂಗ ಕಾರ್ಯಾಲಯದ ವಕ್ತಾರ ನಫೀಸ್ ಝಕಾರಿಯಾ ಹೇಳಿಕೆಯನ್ನು ಉಲ್ಲಂಘಿಸಿ ಪಾಕ್‍ನ ಪ್ರಮುಖ ಆಂಗ್ಲ ದೈನಿಕ ಡಾನ್ ವರದಿ ಮಾಡಿದೆ.

ಭಯೋತ್ಪಾದನೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದ ರದ್ದುಗೊಳಿಸಲು ಭಾರತವು ಗಂಭೀರವಾಗಿ ಪರಿಶೀಲಿಸುತ್ತಿರುವ ಬೆನ್ನಲ್ಲೆ ಇಸ್ಲಾಮಾಬಾದ್ ಈ ಎಚ್ಚರಿಕೆ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin