ಸಿಎಂ ಬರ್ತಾರೆ ಅಂತ ಹುತಾತ್ಮ ಯೋಧರ ಭಾವಚಿತ್ರಗಳನ್ನೇ ಕಿತ್ತೆಸೆದರು

Spread the love

CM-Tumakuru-v-01

ತುಮಕೂರು, ಆ.20- ಸಿಎಂ ಬರುತ್ತಿದ್ದಾರೆ ಎಂದು ಹುತಾತ್ಮ ವೀರ ಯೋಧರ ಭಾವಚಿತ್ರಗಳನ್ನೇ ಕಿತ್ತೆಸೆದಿರುವ ಘಟನೆ ನಡೆದಿದ್ದು, ಯುವಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಯುವಕರು ಸ್ಕೈ ವಾಕ್, ಲಿಫ್ಟ್ ಗೋಡೆಗಳ ಮೇಲೆ ಸ್ವತಂತ್ರ ಯೋಧರ ಭಾವಚಿತ್ರಗಳನ್ನು ಸಂದೀಪ್ ಉನ್ನಿ ಕೃಷ್ಣನ್ ಸೇರಿದಂತೆ ವೀರ ಯೋಧರ ಭಾವಚಿತ್ರ ಅಳವಡಿಸಿ ಗೌರವಿಸಿದ್ದರು.

ಪ್ರತಿ ನಿತ್ಯ ಕಾಲೇಜು ವಿದ್ಯಾರ್ಥಿಗಳು ಈ ವೀರ ಯೋಧರ ಭಾವಚಿತ್ರಗಳಿಗೆ ಸೆಲ್ಯೂಟ್ ಹೊಡೆದು ಹೋಗುತ್ತಿದ್ದರು. ಆದರೆ ನಿನ್ನೆ ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳು ಭಾವಚಿತ್ರಗಳನ್ನು ಕಿತ್ತೆಸೆದು ಅವಮಾನ ಮಾಡಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ವೀರ ಯೋಧರ ಕುಟುಂಬದವರ ಕ್ಷಮೆ ಕೇಳಬೇಕೆಂದು ಯುವಕರು ಒತ್ತಾಯಿಸಿದ್ದಾರೆ.

ಪ್ರತಿ ನಿತ್ಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಈ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಭಾವಚಿತ್ರಗಳನ್ನು ಕಿತ್ತೆಸೆದಿರುವ ಸ್ಕೈ ವಾಕ್ ಸಿಬ್ಬಂದಿಗಳು ನಗರದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಬರುವಾಗ ನಗರ ಸ್ವಚ್ಛವಾಗಿ ಕಾಣಲಿ ಎಂದು ವೀರ ಯೋಧರ ಭಾವಚಿತ್ರಗಳನ್ನು ತೆಗೆದಿದ್ದಾರೆ. ಆದರೆ ಸ್ವಾಗತ ಕೋರುವ ಫ್ಲೆಕ್ಸ್‍ಗಳು, ಬ್ಯಾನರ್‍ಗಳಿಂದ ಸ್ವಚ್ಛವಾಗಿ ಕಾಣುವುದೇ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sri Raghav

Admin