ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

12

ಮುದ್ದೇಬಿಹಾಳ,ಮಾ.17- ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ಗೊಟಖಿಂಡಕಿ ಗ್ರಾಮದ ಮಲ್ಲಣ್ಣ ಹುಣಶ್ಯಾಳ ಕುಟುಂಬಕ್ಕೆ ಸರಕಾರದಿಂದ 4 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತದೆ ಎಂದು ತಹಸೀಲ್ದಾರ್ ಎಂ.ಎಸ್. ಬಾಗವಾನ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮುಂಚೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟರೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ಅದನ್ನು ಹೆಚ್ಚಿಸಲಾಗಿದೆ. ಗೊಟಖಂಡಕಿ ರೈತ ಮೃತಪಟ್ಟ ಕುರಿತು ಸರಕಾರಕ್ಕೆ ಈಗಾಗಲೇ ವರದಿ ಕಳಿಸಿದ್ದು ಪರಿಹಾರ ಬಂದ ತಕ್ಷಣ ಅವರ ಕುಟುಂಬಕ್ಕೆ ವಿತರಿಸಲಾಗುತ್ತದೆ ಎಂದು ಹೇಳಿದರು.ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಮನೆಗಳು ಸೇರಿದಂತೆ ತುಂಬಗಿ ಗ್ರಾಮದಲ್ಲಿ 10 ಮನೆಗಳ ಪತ್ರಾಸ್ ಹಾರಿ ಹೋಗಿವೆ. ಹೂವಿನಹಳ್ಳಿಯಲ್ಲಿ ನಾಲ್ಕು ಮನೆಗಳ ಪತ್ರಾಸ್ ಹಾರಿ ಹೋಗಿವೆ.

13
ತಾಲೂಕಿನ ತಂಗಡಗಿ ಭಾಗದಲ್ಲಿ ಎರಡು ವಿದ್ಯುತ್ ಕಂಬಗಳು ಧರೆಗುರಳಿದ್ದು ಅವನ್ನು ಈಗಾಗಲೇ ದುರಸ್ತಿ ಮಾಡಿಸಲಾಗಿದೆ ಎಂದು ಹೆಸ್ಕಾಂ ಎಇಇ ಹಾದಿಮನಿ ಮಾಹಿತಿ ನೀಡಿದ್ದಾರೆ ಎಂದು ತಹಸೀಲ್ದಾರ್ ಹೇಳಿದರು.ತಾಲೂಕಿನಲ್ಲಿ ಬುಧವಾರ 43 ಮೀ.ಮೀ ನಷ್ಟು ಮಳೆಯಾಗಿದ್ದು ಹೋಬಳಿಯಲ್ಲಿ 10 ಮಿಮೀ., ತಾಳಿಕೋಟಿಯಲ್ಲಿ 3ಮಿಮೀ., ಢವಳಗಿಯಲ್ಲಿ 19ಮಿಮೀ ಹಾಗೂ ನಾಲತವಾಡ ಹೋಬಳಿಯಲ್ಲಿ 11.2ಮಿಮೀನಷ್ಟು ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin