ಸಿಡಿಲು ಬಡಿದು 4 ಶತಮಾನಗಳ ಹಳೆಯ ಆಲದ ಮರಕ್ಕೆ ಬೆಂಕಿ, ಅಪಶಕುನದ ಸಂಕೇತವೇ…?

Tree-Thunderstrome-1

ಮೈಸೂರು, ಮೇ 14- ಸಿಡಿಲು ಬಡಿದ ನಾಲ್ಕು ಶತಮಾನಗಳ ಹಳೆಯ ಆಲದ ಮರಕ್ಕೆ ಬೆಂಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೋರಸೆ ಗ್ರಾಮದಲ್ಲಿ ನಡೆದಿದೆ. ಬೃಹತ್ ಆಲದ ಮರಕ್ಕೆ ಅಪಾರವಾದ ಹಾನಿಯಾಗಿದೆ. ಮರಕ್ಕೆ ಬೆಂಕಿ ತಗುಲಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ.
ಇತಿಹಾಸ ಪ್ರಸಿದ್ಧವಾದ ಆಲದ ಮರಕ್ಕೆ ಬೆಂಕಿ ತಗುಲಿರುವುದು ಅಪಶಕುನದ ಸಂಕೇತವೆಂದೇ ಜನರು ಭಾವಿಸಿದ್ದಾರೆ.ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದಾಗ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದಾಗ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಿದರಾದರೂ ಆಲದ ಮರ ಭಾಗಶಃ ಸುಟ್ಟು ಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin