ಸಿದ್ದರಾಮಯ್ಯನವರ ಸೋದರಿ ನಿಧನ : ಸಿಎಂ ಕಾರ್ಯಕ್ರಮಗಳು ರದ್ದು

Siddaramaiah-Sister--02

ಬೆಂಗಳೂರು,ಅ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಸಹೋದರಿ ಚಿಕ್ಕಮ್ಮ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಚಿಕ್ಕಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.  ಮೃತರ ಪಾರ್ಥೀವ ಶರೀರದ ಅಂತ್ಯಕ್ರಿಯೆ ದೇವೇಗೌಡನ ಹುಂಡಿಯಲ್ಲಿ ನೆರವೇರಲಿದೆ.   ಅಂತ್ಯಕ್ರಿಯೆ ವೇಳೆ ಮುಖ್ಯಮಂತ್ರಿಗಳು ಉಪಸ್ಥಿತರಿರುವರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ಅಧಿಕೃತ ಕಾರ್ಯಕ್ರಮಗಳು ರದ್ಧಾಗಿವೆ.

Sri Raghav

Admin