ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ
ಬೆಂಗಳೂರು,ಜೂ.23-ಇಂದಿರಾ ಕಾಂಗ್ರೆಸ್, ಅರಸು ಕಾಂಗ್ರೆಸ್, ಸೋನಿಯಾ ಕಾಂಗ್ರೆಸ್, ರಾಹುಲ್ ಕಾಂಗ್ರೆಸ್ ಮಸುಕಾಗಿ ಸಿದ್ದು ಕಾಂಗ್ರೆಸ್ ಅಷ್ಟೆ ವಿಜೃಂಭಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಪ್ರೆಸ್ಕ್ಲಬ್ನಲ್ಲಿ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೈಕಮಾಂಡ್ ವೀಕಾಗಿದೆ. ಎಸ್ ಕಾಂಗ್ರೆಸ್ ಅಂದರೆ, ಸಿದ್ದರಾಮಯ್ಯ ಕಾಂಗ್ರೆಸ್ ಅಷ್ಟೆ ವಿಜೃಂಭಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಸಾಂಸ್ಕøತಿಕ ಮತ್ತು ಬೌದ್ಧಿಕವಾಗಿ ದಿವಾಳಿಯಾಗಿವೆ. ಇಂತಹ ಪರಿಸ್ಥಿತಿಯ ಬಗ್ಗೆ ನೂತನ ಉಸ್ತುವಾರಿಯಾದ ವೇಣುಗೋಪಾಲ್ ಅವರ ಗಮನಕ್ಕೆ ತಂದರೆ ನೀವಿಬ್ಬರೂ ಕುರುಬರು ನೀವೇ ಸರಿಪಡಿಸಿಕೊಳ್ಳಿ ಎಂದು ಉಡಾಫೆಯಾಗಿ ಹೇಳುತ್ತಾರೆ. ನಾನು ಕಳೆದ ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ ಬಿಡುತ್ತೇನೆ ಎಂದು ಹೇಳಿದ್ದೆ. ಕನಿಷ್ಠ ಒಬ್ಬರಾದರೂ, ಸೌಜನ್ಯಕ್ಕಾದರೂ ಯಾಕೆ…? ಏನು ಎಂದು ಕೇಳಲಿಲ್ಲ… ಖಗೆರ್ಯವರಾಗಲಿ, ಪರಮೇಶ್ವರ್ ಅವರಾಗಲಿ ಯಾರೂ ಕೂಡ ಏನೊಂದು ಕೇಳಿಲಿಲ್ಲ. ಅನಾಥ ಪ್ರಜ್ಞೆ ಕಾಡುತ್ತಿದೆ. ನಾನು ಯಾವುದೇ ಅಧಿಕಾರವನ್ನು ಕೇಳಿರಲಿಲ್ಲ. ಹಿರಿಯರಾದ ನಮ್ಮ ಸಲಹೆ ಕೇಳಿ ಎಂದು ಹೇಳಿದ್ದೆ ಅಷ್ಟೆ ಎಂದರು.
< Eesanje News 24/7 ನ್ಯೂಸ್ ಆ್ಯಪ್ >