ಸಿದ್ದು ಲ್ಕೆಕ್ಕಾಚಾರ (Live)

Spread the love

Siddaramaiah-Budget--01

ಸಿದ್ದು ಲ್ಕೆಕ್ಕಾಚಾರ (Live) ]

ಬೆಂಗಳೂರು, ಫೆ.16- ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ, ಮೃತ ರೈತರ 1 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿಗೆ ಒತ್ತು ನೀಡುವ, ಸರ್ವರನ್ನೂ ಸಮಾಧಾನಪಡಿಸುವ ಜನಪ್ರಿಯವಾದ 2018-19ನೆ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ಮಂಡಿಸಿದರು. ಮುಂದಿನ ವಿಧಾನಸಭಾ  ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದ ಎಲ್ಲ ವರ್ಗದವರನ್ನು ಸಮಾಧಾನ ಪಡಿಸುವ ಕಸರತ್ತನ್ನು ನಡೆಸಿರುವ ಮುಖ್ಯ ಮಂತ್ರಿಗಳು ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ಕಳೆದ 5 ವರ್ಷಗಳ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ ಸಿದ್ದರಾಮಯ್ಯನವರು ಸಿಎಂ ಆಗಿ 6ನೇ ಮತ್ತು ಹಣಕಾಸು ಸಚಿವರಾಗಿ 13ನೆ ಮುಂಗಡಪತ್ರ ಮಂಡಿಸುತ್ತಿರುವುದಾಗಿ ಘೋಷಿಸಿದರು.  2018-19ನೇ ಸಾಲಿನಲ್ಲಿ 2,90,181 ಕೋಟಿ ರೂ. ಅಂದಾಜು ವೆಚ್ಚ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ ಮುಂದಿನ ಆರ್ಥಿಕ ಸಾಲಿಗೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ ಎಂದು ಹೇಳಿದರು.
ರಾಜಸ್ವ ಹೆಚ್ಚುವರಿಯನ್ನು 127ಕೋಟಿ ರೂ.ನಿಂದ ಅಂದಾಜು ಮಾಡಲಾಗಿದ್ದು, ವಿತ್ತೀಯ ಕೊರತೆಯನ್ನು 35,127 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.49ರಷ್ಟಾಗಿರುತ್ತದೆ. ಮುಂದಿನ ಆರ್ಥಿಕ ಸಾಲಿನ ಅಂತ್ಯದಲ್ಲಿ 2,86,790 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಯು ರಾಜ್ಯದ ಆಂತರಿಕ ಉತ್ಪನ್ನದ ಶೇ.20.36ರಷ್ಟಾಗಿರುತ್ತದೆ ಎಂದು ಎಂದಾಜು ಮಾಡಲಾಗಿರುತ್ತದೆ ಎಂದರು.

ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು 1,03,444 ಕೊಟಿ ರೂ.ಗಳಾಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8,163 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 36,215 ಕೋಟಿ ರೂ.ಗಳನ್ನು ಹಾಗೂ ಸಹಾಯಧನ ರೂಪದಲ್ಲಿ ಕೇಂದ್ರ ಸರ್ಕಾರದಿಂದ 14,942 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ ಎಂದು ಹೇಳಿದ್ದಾರೆ.  ಹಣಕಾಸು ಸಾಮಥ್ರ್ಯ ಮತ್ತು ಸ್ಪರ್ಶ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 16,760 ಕೋಟಿ ರೂ.ಗಳನ್ನು ಕ್ರೋಢೀಕರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿ ಇಲಾಖೆಯ 5 ವರ್ಷಗಳ ಸಾಧನೆ ಬಣ್ಣಿಸಿ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ರಾಜ್ಯ ಸರ್ಕಾರಿ ನೌಕರರ ವೇತನ ಆಯೋಗದ ಶಿಫಾರಸಿನ ಅನುಷ್ಠಾನದಿಂದ ಉಂಟಾಗುವ ಹೊರೆಯನ್ನಷ್ಟೇ ಉಲ್ಲೇಖಿಸಿದ್ದು, ಖಚಿತ ನಿರ್ಧಾರ ಪ್ರಕಟಿಸಿಲ್ಲ.

ಎಲ್ಲ ವರ್ಗದ ರೈತರಿಗೆ ಅನ್ವಯವಾಗುವಂತೆ ಹನಿ ನೀರಾವರಿಗೆ ಶೇ.90ರಷ್ಟು ಸಹಾಯಧನ, ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಸಹಕಾರ ಸಂಘ ಸ್ಥಾಪನೆ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಿಕೆ, ಖುಷ್ಕಿ ಭೂಮಿ ರೈತರ ನೆರವಿಗಾಗಿ ರೈತ ಬೆಳಕು ಎಂಬ ವಿಶಿಷ್ಟ ಯೋಜನೆಯನ್ನು ಪ್ರಕಟಿಸಿದ್ದಾರೆ.
ಹಾವು ಕಡಿತ ಹಾಗೂ ಆಕಸ್ಮಿಕ ಮರಣ ಹೊಂದಿದ ರೈತ ಹಾಗೂ ಕುಟುಂಬದವರಿಗೆ ಪರಿಹಾರ ಧನವನ್ನು ದ್ವಿಗುಣಗೊಳಿಸಿದ್ದಾರೆ. ಅಪರೂಪದ ಹಣ್ಣುಗಳಾದ ಲಿಚ್ಚಿ, ಆ್ಯಪರ್‍ಬರ್, ನೇರಳೆ, ಸ್ಟ್ರಾಬೆರಿ, ಸೀತಾಫಲ, ಸೀಬೆ ಬೆಳೆಗಳ ತಳಿ ಅಭಿವೃದ್ಧಿಗೆ ಉತ್ತೇಜನ ನೀಡಿದ್ದಾರೆ. ಐದು ವರ್ಷದ ಅವಧಿಗೆ ಅನ್ವಯವಾಗುವಂತೆ ರಾಜ್ಯ ಮೇವು ಭದ್ರತಾ ನೀತಿಯನ್ನು ರೂಪಿಸುವುದಾಗಿ ಪ್ರಸ್ತಾಪಿಸಿದ್ದಾರೆ.

ಕುರಿ, ಮೇಕೆ ಸಾಕಾಣಿಕೆದಾರರಿಗೆ ರಕ್ಷಣೆಗಾಗಿ ಟೆಂಟ್, ಕಬ್ಬಿಣದ ಬೇಲಿ ನಿರ್ಮಿಸಿಕೊಳ್ಳಲು 4 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದಾರೆ.
16 ಜಿಲ್ಲೆಗಳಲ್ಲಿ ಸುಸಜ್ಜಿತ ರೋಗ ತಪಾಸಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದು, ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೂ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರು-ಮೈಸೂರು ಕಾರಿಡಾರ್‍ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜಿಸಲಾಗಿದ್ದು, ಚನ್ನಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೈವ್ ಮ್ಯೂಸಿಯಂ ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ. ಕೃಷಿಪತ್ತಿನ ಸಹಕಾರ ಸಂಸ್ಥೆಗಳಲ್ಲಿ ಬೆಳೆಸಾಲ ಪಡೆದ ರೈತರು ನಿಧನರಾಗಿದ್ದರೆ, 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆ, ವಸತಿ ರಹಿತ 1 ಸಾವಿರ ಹಮಾಲರಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಸ್ತಾಪ ಮಾಡಿದ್ದಾರೆ.

ಹಲವು ಏತ ನೀರಾವರಿ ಯೋಜನೆಗಳು ಸೇರಿದಂತೆ ಜಲ ಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ.ಗಳನ್ನು ಒದಗಿಸಲಾಗಿದೆ.  ಅಂತರ್ಜಲ ಅಭಿವೃದ್ಧಿಪಡಿಸಲು ಚೆಕ್‍ಡ್ಯಾಂಗಾಗಿ 50 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಪುನಶ್ಚೇತನಗೊಳಿಸಲು 10 ಕೋಟಿ ರೂ. ಒದಗಿಸಲಾಗಿದೆ. ವನ್ಯ ಪ್ರಾಣಿ ಹಾವಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ನೀಡಿರುವ 5 ಲಕ್ಷ ಪರಿಹಾರದ ಜತೆಗೆ 5 ವರ್ಷಗಳವರೆಗೆ 2 ಸಾವಿರ ಮಾಸಾಶನ ನೀಡುವ ಹೊಸ ಯೋಜನೆ ಪ್ರಕಟಿಸಿದ್ದಾರೆ.

# ಶಿವಮೊಗ್ಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರು,ಫೆ.16-ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಾಗಿದೆ. ಸುಮಾರು 7.81 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಕಟಿಸಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ ಸಾವಿರ ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್‍ಗಳ ನಿರ್ಮಾಣ, ಗದಗ, ಕೊಪ್ಪಳ ಮತ್ತು ಚಾಮರಾಜನಗರದಲ್ಲಿ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ 100 ಕೋಟಿ, ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 90 ಕೋಟಿ ಅನುದಾನವನ್ನು ಸಹ ನೀಡಲಾಗಿದೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 15ಕೋಟಿ ರೂ. ವೆಚ್ಚದಲ್ಲಿ ಒಂದು ಪೆಟ್ ಸಿಟಿ, ಸ್ಕ್ಯಾನ್ ಸೌಲಭ್ಯ, ಮೈಸೂರಿನಲ್ಲಿರುವ ನರ್ಸಿಂಗ್ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಗದಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‍ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭವಾಗಲಿದೆ. ಗುಲ್ಬರ್ಗದ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್ ಪ್ರಾರಂಭ. ಹಾಸನ, ಮೈಸೂರು, ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ 2177 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

#  ಅಲ್ಪಸಂಖ್ಯಾತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 800 ಕೋಟಿ
ಬೆಂಗಳೂರು,ಫೆ.16-ಅಲ್ಪಸಂಖ್ಯಾತರ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 800 ಕೋಟಿ ಅನುದಾನ ಒದಗಿಸಿದೆ. ಒಟ್ಟು ಈ ಬಾರಿಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 2221 ಕೋಟಿ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 15 ಕೋಟಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಜೆಇಇ, ನೀಟ್, ಗೇಟ್, ಜಿಎಂಎಟಿ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ಎನ್‍ಇಟಿ ಪಠ್ಯಪುಸ್ತಕಗಳ ವಿತರಣೆ, ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಮಾದರಿಯಲ್ಲಿ ಮಾಸಿಕ ತರಬೇತಿ ಭತ್ಯೆಯನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‍ಗಳಲ್ಲಿ ಒಂದನೇ ವರ್ಷದ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳಿಗೆ 25 ಸಾವಿರ, ಬಿಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪ್ರೋತ್ಸಾಹಧನ, ನದಾಫ್, ಪಿಂಜಾರ್ ಸಮುದಾಯದ ಸಂಘಗಳಿಗೆ ಎರಡು ಕೋಟಿ, ಬ್ಯಾರಿ ವೆಲ್ಫೇರ್ ಅಸೋಸಿಯೇಷನ್‍ಗೆ ಎರಡು ಕೋಟಿ, ಮೈಸೂರಿನಲ್ಲಿ ಹಿರಿಯ ರಾಜಕಾರಣಿ ದಿವಂಗತ ಅಜೀತ್ ಸೇಠ್ ಸಮುದಾಯ ಭವನ ನಿರ್ಮಾಣಕ್ಕೆ ಮೂರು ಕೋಟಿ ಅನುದಾನವನ್ನು ಒದಗಿಸಲಾಗಿದೆ. ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ ತಲಾ 25 ದಾಖಲಾತಿಗಳನ್ನು ಹೆಚ್ಚಿಸಲಾಗುವುದು. ಎಲ್ಲ ಮೆಟ್ರಿಕ್ ಪೂರ್ವದ ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪರಸ್ಪರ ಪ್ರವೇಶ ನೀಡಿ, ಹಾಸ್ಟೆಲ್‍ಗಳನ್ನು ಮೇಲ್ದರ್ಜೆಗೇರಿಸುವ ಆಶ್ವಾಸನೆ ನೀಡಲಾಗಿದೆ.

# ಸಬ್‍ರಿಸ್ಟ್ರಾರ್ ದಾಖಲೆಗಳ ಡಿಜಿಟಲೀಕರಣಕ್ಕೆ ‘ಸುರಭಿ’ ಯೋಜನೆ ಜಾರಿ
ಬೆಂಗಳೂರು, ಫೆ.16-ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಡಿಯಲ್ಲಿ ಪಾರಂಪರಿಕ ಹಾಗೂ ಕಾನೂನಾತ್ಮಕ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಜ್ ಮಾಡಿ ಸಂರಕ್ಷಿಸಿಡಲು ಸುರಭಿ(ಸೂಕ್ಷ್ಮ ರಕ್ಷಣಾ ಅಭಿಲೇಖಗಳು) ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ ಮುಂದಿನ ವರ್ಷ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 10,400ಕೋಟಿ ರೂ. ಗಳ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದಾರೆ. ಕಳೆದ ವರ್ಷ 9ಸಾವಿರ ಕೋಟಿ ರೂ. ಗುರಿ ನಿಗದಿಪಡಿಸಿದ್ದು, ಜನವರಿ ಅಂತ್ಯದವರೆಗೆ 7537.28 ಕೋಟಿ ರೂ.ಗಳಿಗಿಂತಲೂ 7291.58 ಕೋಟಿ ವಸೂಲಿ ಮಾಡಿ ಶೇ. 100.75ರಷ್ಟು ಸಾಧನೆ ಮಾಡಲಾಗಿದೆ.

# ಅಬಕಾರಿ ಸುಂಕ ಶೇ.8ರಷ್ಟು ಹೆಚ್ಚಳ 
ಮದ್ಯದ ಮೇಲಿನ 2ರಿಂದ 18ನೇ ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.8ರಷ್ಟು ಹೆಚ್ಚಿಸುವುದಾಗಿ ಹೇಳಿದ್ದಾರೆ. 499ರೂ. ಮೇಲ್ಪಟ್ಟ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.8ರಷ್ಟು ಹೆಚ್ಚಿಸುತ್ತಿರುವುದರಿಂದ ಮದ್ಯದ ಬೆಲೆಯು ಹೆಚ್ಚಾಗುತ್ತಿದೆ.  ಸುಪ್ರೀಂಕೋರ್ಟ್ ಹೆದ್ದಾರಿಯಿಂದ 500ಮೀಟರ್ ಅಂತರದೊಳಗಿನ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಆದೇಶಿಸಿರುವುದರಿಂದ ಸುಮಾರು ಮೂರು ಸಾವಿರ ಅಂಗಡಿಗಳು ನಷ್ಟಕ್ಕೊಳಗಾದವು. ಸುಪ್ರೀಂಕೋರ್ಟ್ ತೀರ್ಪನ್ನು ಬದಲಾವಣೆ ಮಾಡಿ ಅವಕಾಶ ನೀಡಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಿದ್ದರಿಂದ ಸುಮಾರು ಒಂದೂವರೆ ಸಾವಿರ ಕೋಟಿ ಆದಾಯ ಸಂಗ್ರಹಣೆ ಕುಂಠಿತವಾಗಿದೆ. 18,050 ಕೋಟಿ ಬದಲಾಗಿ 17600ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಜನವರಿ ಅಂತ್ಯದವರೆಗೆ 14572 ಕೋಟಿ ಸಂಗ್ರಹವಾಗಿದೆ ಎಂದು ವಿವರಿಸಿದರು. ಅಬಕಾರಿ ಇಲಾಖೆಗೆ ಮುಂದಿನ ಆರ್ಥಿಕ ವರ್ಷದಲ್ಲಿ 18750 ಕೋಟಿ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ.  ಸಾರಿಗೆ ಇಲಾಖೆಯಿಂದ 6006ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿತ್ತು. ಈ ವರ್ಷ 6600ಕೋಟಿಗಳ ತೆರಿಗೆ ಸಂಗ್ರಹ ಮಾಡುವ ಗುರಿ ನಿಗದಿಪಡಿಸಲಾಗಿದೆ.

# ಲಘು ವಿಮಾನದ ಇಂಧನಕ್ಕೆ ರಿಯಾಯ್ತಿ:
ಲಘು ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಇದರಿಂದ ದೂರದೂರುಗಳಿಗೆ ಸಂಪರ್ಕ ಕಲ್ಪಿಸುವ ಲಘು ವಿಮಾನಗಳ ಪ್ರಯಾಣ ದರ ಕಡಿಮೆಯಾಗುವ ನಿರೀಕ್ಷೆ ಇದೆ. ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಅಜೀವಿಕೆಗಳು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಹಿರಿಯ ನಾಯಕರಿಗೆ ನೀಡುತ್ತಿರುವ ವಿನಾಯ್ತಿಯಿಂದ ಕಂಪೆನಿಗಳು, ಸಂಸ್ಥೆಗಳು, ಹಿಂದು ಅವಿಭಕ್ತ ಕುಟುಂಬ, ನಿಗಮ, ಸೊಸೈಟಿ, ಕ್ಲಬ್‍ಗಳು, ಅಸೋಸಿಯೇಷನ್‍ಗಳನ್ನು ಹೊರತುಪಡಿಸಲು ತೀರ್ಮಾನಿಸಲಾಗಿದೆ.
ಜಿಎಸ್‍ಟಿ ನೋಂದಣಿಗೆ ನಿಗದಿಪಡಿಸಿರುವ ವಹಿವಾಟು ಮಿತಿಗೆ ಪೂರಕವಾಗಿ ಕೆಲವು ವರ್ಗದ ವ್ಯಕ್ತಿಗಳಿಗೆ ವಿಧಿಸುವ ವೃತ್ತಿತೆರಿಗೆ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.

# ಕೆನೆಪದರ ಆದಾಯದ ಮಿತಿ 8 ಲಕ್ಷದವರೆಗೆ ಹೆಚ್ಚಳ
ಬೆಂಗಳೂರು,ಫೆ.16-ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯದ ಮಿತಿಯನ್ನು ಆರು ಲಕ್ಷದಿಂದ 8 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 750 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿವಿಗಳಿಗೆ ಕಳಿಸುವ ಗುರಿ ಹೊಂದಿರುವ ಸರ್ಕಾರ ಪ್ರಸಕ್ತ ವರ್ಷದಲ್ಲಿ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಆಶ್ವಾಸನೆ ನೀಡಿದೆ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇದನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಎರಡು ಸಾವರ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರತಿಷ್ಟಿತ ಸಂಸ್ಥೆಗಳ ಮೂಲಕ ವಿಶೇಷ ಕೋಚಿಂಗ್, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ ಜೆಇಇ, ನೀಟ್, ಗೇಟ್, ಜಿಎಂಎಟಿ ಇತ್ಯಾದಿಗಳ ಪೂರ್ವ ಪರೀಕ್ಷೆಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲು ಸರ್ಕಾರ ಮುಂದಾಗಿದೆ.  ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಫೆಲೋಶಿಪ್‍ನ್ನು 5000 ದಿಂದ 10 ಸಾವಿರದವರೆಗೆ ಹೆಚ್ಚಳ ಮಾಡಲಾಗಿದೆ. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಆಹಾರ ವೆಚ್ಚಕ್ಕಾಗಿ ನೀಡಲಾಗುತ್ತಿದ್ದ ತಿಂಗಳ ವೇತನವನ್ನು 750 ರಿಂದ 1500 ಹಾಗೂ 850ರಿಂದ 1600 ರೂ.ಗೆ ಹೆಚ್ಚಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸುಚಿ ಸಂಭ್ರಮ ಕಿಟ್‍ನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ಸಹ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.

ಖಾಸಗಿ ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದ ವೆಚ್ಚಕ್ಕಾಗಿ 700ರಿಂದ 800 ರೂ. ಹೆಚ್ಚಳ, ವಿದ್ಯಾಸಿರಿ ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಕೆ, ಡಾ.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪುನರ್ ಸಂಘಟನೆ, ಹಿಂದುಳಿದ ವರ್ಗಗಳ ಸಂಘಸಂಸ್ಥೆಗಳು ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳ ಮೂಲಸೌಕರ್ಯ ಅಭಿವೃದ್ದಿಗೆ 5 ಲಕ್ಷ, ಸವಿತಾ ಸಮಾಜ , ತಿಗಳ, ಮಡಿವಾಳ,ಕುಂಬಾರರ ಆರ್ಥಿಕಾಭಿವೃದ್ದಿಗೆ 100 ಕೋಟಿ ಅನುದಾನ ನೀಡಲಾಗಿದೆ.   ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರು ಸ್ವಯಂ ಉದ್ಯೋಗ ಕೈಗೊಳ್ಳಲು ಶೇ.6ರ ಬಡ್ಡಿದರದಲ್ಲಿ 10 ಲಕ್ಷ ಸಾಲ ಸೌಲಭ್ಯ ಸೇರಿದಂತೆ ಪ್ರಸಕ್ತ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 3172 ಕೋಟಿ ಅನುದಾನ ನೀಡಿದೆ.

# ಅಲ್ಪಸಂಖ್ಯಾತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 800 ಕೋಟಿ
ಬೆಂಗಳೂರು,ಫೆ.16-ಅಲ್ಪಸಂಖ್ಯಾತರ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 800 ಕೋಟಿ ಅನುದಾನ ಒದಗಿಸಿದೆ. ಒಟ್ಟು ಈ ಬಾರಿಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 2221 ಕೋಟಿ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 15 ಕೋಟಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಜೆಇಇ, ನೀಟ್, ಗೇಟ್, ಜಿಎಂಎಟಿ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ಎನ್‍ಇಟಿ ಪಠ್ಯಪುಸ್ತಕಗಳ ವಿತರಣೆ, ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಮಾದರಿಯಲ್ಲಿ ಮಾಸಿಕ ತರಬೇತಿ ಭತ್ಯೆಯನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ.  ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‍ಗಳಲ್ಲಿ ಒಂದನೇ ವರ್ಷದ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳಿಗೆ 25 ಸಾವಿರ, ಬಿಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪ್ರೋತ್ಸಾಹಧನ, ನದಾಫ್, ಪಿಂಜಾರ್ ಸಮುದಾಯದ ಸಂಘಗಳಿಗೆ ಎರಡು ಕೋಟಿ, ಬ್ಯಾರಿ ವೆಲ್ಫೇರ್ ಅಸೋಸಿಯೇಷನ್‍ಗೆ ಎರಡು ಕೋಟಿ, ಮೈಸೂರಿನಲ್ಲಿ ಹಿರಿಯ ರಾಜಕಾರಣಿ ದಿವಂಗತ ಅಜೀತ್ ಸೇಠ್ ಸಮುದಾಯ ಭವನ ನಿರ್ಮಾಣಕ್ಕೆ ಮೂರು ಕೋಟಿ ಅನುದಾನವನ್ನು ಒದಗಿಸಲಾಗಿದೆ.  ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ ತಲಾ 25 ದಾಖಲಾತಿಗಳನ್ನು ಹೆಚ್ಚಿಸಲಾಗುವುದು. ಎಲ್ಲ ಮೆಟ್ರಿಕ್ ಪೂರ್ವದ ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪರಸ್ಪರ ಪ್ರವೇಶ ನೀಡಿ, ಹಾಸ್ಟೆಲ್‍ಗಳನ್ನು ಮೇಲ್ದರ್ಜೆಗೇರಿಸುವ ಆಶ್ವಾಸನೆ ನೀಡಲಾಗಿದೆ.

# ಶಿವಮೊಗ್ಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರು,ಫೆ.16-ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಾಗಿದೆ. ಸುಮಾರು 7.81 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಕಟಿಸಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ ಸಾವಿರ ಹಾಸಿಗೆ ಸಾಮಥ್ರ್ಯದ ಹೆಚ್ಚುವರಿ ವಾರ್ಡ್‍ಗಳ ನಿರ್ಮಾಣ, ಗದಗ, ಕೊಪ್ಪಳ ಮತ್ತು ಚಾಮರಾಜನಗರದಲ್ಲಿ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ 100 ಕೋಟಿ, ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 90 ಕೋಟಿ ಅನುದಾನವನ್ನು ಸಹ ನೀಡಲಾಗಿದೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 15ಕೋಟಿ ರೂ. ವೆಚ್ಚದಲ್ಲಿ ಒಂದು ಪೆಟ್ ಸಿಟಿ, ಸ್ಕ್ಯಾನ್ ಸೌಲಭ್ಯ, ಮೈಸೂರಿನಲ್ಲಿರುವ ನರ್ಸಿಂಗ್ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಗದಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‍ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭವಾಗಲಿದೆ. ಗುಲ್ಬರ್ಗದ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್ ಪ್ರಾರಂಭ. ಹಾಸನ, ಮೈಸೂರು, ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ 2177 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

# ಬಜೆಟ್ ನಲ್ಲಿ ಬೆಂಗಳೂರಿಗೆ 2500 ಕೋಟಿ ರೂ.ಗಳ ಬಂಪರ್ ಕೊಡುಗೆ
ಬೆಂಗಳೂರು, ಫೆ.16- ಕಳೆದ ಬಜೆಟ್‍ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 2441 ಕೋಟಿ ರೂ.ಗಳನ್ನು ಮೀಸಲಿರಿಸಿದ್ದ ಸರ್ಕಾರ ಈ ಬಾರಿಯ ಆಯವ್ಯಯದಲ್ಲೂ ನಗರಾಭಿವೃದ್ಧಿಗೆ 2500 ಕೋಟಿ ರೂ.ಗಳ ಬಂಪರ್ ಕೊಡುಗೆ ಘೋಷಿಸಿದೆ. ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದ್ದು, ಒಟ್ಟಾರೆ 2018-19ನೆ ಸಾಲಿನಲ್ಲಿ 150 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ತೀರ್ಮಾನಿಸಲಾಗಿದೆ.

88 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಆರಂಭಿಕ ಹಂತದಲ್ಲಿ 40 ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.  150 ಕಿಲೋ ಮೀಟರ್ ಉದ್ದದ ಬೃಹತ್ ನೀರುಗಾಲುವೆ ಅಭಿವೃದ್ಧಿ, 250 ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಪಾಲಿಕೆಗೆ ಸೇರಿರುವ 110 ಹಳ್ಳಿಗಳ ರಸ್ತೆ ಅಭಿವೃದ್ಧಿ, ಪಾಲಿಕೆ ವ್ಯಾಪ್ತಿಯ 100 ಕಿಲೋ ಮೀಟರ್ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ ಹಾಗೂ ವಾಹನ ದಟ್ಟಣೆ ನಿಲ್ಲಿಸಲು 8 ಜಂಕ್ಷನ್‍ಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ವೈಟ್‍ಫೀಲ್ಡ್ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸಲು ಐಟಿಪಿಎಲ್‍ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.

ಹಳೆ ವಿಮಾನ ನಿಲ್ದಾಣ ರಸ್ತೆಯ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗೆ ಸಂಬಂಧಿಸಿದಂತೆ ಎಚ್‍ಎಎಲ್ ಸಂಸ್ಥೆಯವರು ನೀಡಿರುವ ಸ್ವತ್ತಿಗೆ ಬದಲಾಗಿ ಎನ್‍ಎಎಲ್ ವಿಂಡ್ ಟನಲ್ ರಸ್ತೆ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.  ನಗರದಲ್ಲಿ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟಿನ್‍ಗಳ ನಿರ್ವಹಣೆಗೆ ವಾರ್ಷಿಕ 120 ಕೋಟಿ ರೂ.ಗಳನ್ನು ಒದಗಿಸಲಾಗಿದೆ.   ಕಳೆದ ವರ್ಷದ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದ್ದ 650 ಕೋಟಿ ರೂ. ವೆಚ್ಚದ 60.76 ಕಿಲೋ ಮೀಟರ್ ಉದ್ದದ 48 ರಸ್ತೆಗಳನ್ನು ಟೆಂಡರ್ ಶೂರ್ ಮಾದರಿಯಡಿ ಅಭಿವೃದ್ಧಿಪಡಿಸುವ ಕಾರ್ಯವನ್ನು 2018ರ ವೇಳೆಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ.
ಡಾ.ರಾಜ್‍ಕುಮಾರ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಮೇಕ್ರಿ ಸರ್ಕಲ್‍ನಿಂದ ಓಪ್ ಫಾರಂ ಮತ್ತು ಹೊರವರ್ತುಲ ರಸ್ತೆಗಳಲ್ಲಿ 51.36 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಸಿಗ್ನಲ್‍ಮುಕ್ತ ಕಾರಿಡಾರ್‍ಗಳನ್ನಾಗಿ ಪರಿವರ್ತಿಸುವ 440 ಕೋಟಿ ರೂ. ವೆಚ್ಚದ 12 ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಯನ್ನು 2018ರ ಅಂತ್ಯಕ್ಕೆ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.

ಅದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಬೇಕಾದ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ 500 ಕೋಟಿ ರೂ.ಗಳ ಅನುದಾನದೊಂದಿಗೆ ರಾಜ್ಯದ 500 ಕೋಟಿ ರೂ.ಗಳ ಪಾಲನ್ನು ಸೇರಿಸಿ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ. ಈ ಯೋಜನೆಯಡಿ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶೂರ್ ಮಾದರಿಯಲ್ಲಿ ಅಭಿವೃದ್ಧಿ, ಐತಿಹಾಸಿಕ ಕೆಆರ್ ಮಾರುಕಟ್ಟೆ ಪ್ರದೇಶದ ಪುನಶ್ಚೇತನ, ಶಿವಾಜಿನಗರದಲ್ಲಿ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್ ಉದ್ಯಾನ ಅಭಿವೃದ್ಧಿ, ಸ್ವತಂತ್ರ್ಯ ಪಾಳ್ಯ, ಹಲಸೂರು ಕೆರೆ, ಸ್ಯಾಂಕಿ ಕೆರೆಗಳ ಅಭಿವೃದ್ಧಿ ಹಾಗೂ ಕೆಸಿ ಜನರಲ್ ಆಸ್ಪತ್ರೆಯ ನವೀಕರಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ.   ಗಾಂಧಿಬಜಾರ್, ಗಾಂಧಿನಗರ, ಡಿಸ್ಪೆನ್ಸರಿ ರಸ್ತೆ, ರೇಸ್‍ಕೋರ್ಸ್, ಶೇಷಾದ್ರಿ ರಸ್ತೆ, ಕೋರಮಂಗಲ 4ನೆ ಬಡಾವಣೆ, ಜಯನಗರ ಕಾಂಪ್ಲೆಕ್ಸ್ ಹಾಗೂ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕರ ಕಟ್ಟಡ ನಕ್ಷೆ, ಖಾತಾ ಬದಲಾವಣೆ, ನೀರು ಮತ್ತು ವಿದ್ಯುತ್ ಸಂಪರ್ಕ, ರೋಡ್ ಕಟಿಂಗ್ ಅನುಮತಿ ಇತ್ಯಾದಿ ನಾಗರಿಕರ ಸೇವೆಗಳಿಗೆ ಸ್ವಯಂಚಾಲಿತ ಆನ್‍ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

# ನಗರ ಪ್ರದೇಶಗಳಲ್ಲಿ ಈ ವರ್ಷ 250 ಅಂಗನವಾಡಿ ಕೇಂದ್ರಗಳ ಪ್ರಾರಂಭ

ಬೆಂಗಳೂರು,ಫೆ.16-ನಗರ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ 250 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ. ಸುಮಾರು 17.5 ಕೋಟಿ ರೂ. ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರಗಳು ನಗರಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಜೊತೆಗೆ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆ ಮಾಡಲು 10 ಕೋಟಿ ರೂ. ವೆಚ್ಚದಲ್ಲಿ 100 ಸಂಚಾರಿ ಅಂಗನವಾಡಿ ಕೇಂದ್ರ ಹಾಗೂ ಶಿಶುಪಾಲನ ಕೇಂದ್ರಗಳನ್ನು ಸಹ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಯವ್ಯಯದಲ್ಲಿ ಪ್ರಕಟಿಸಿದ್ದಾರೆ.

ಮಕ್ಕಳ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿದ್ದು, ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಈ ಬಾರಿ ಪ್ರತ್ಯೇಕ ನಿರ್ದೇಶನಾಲಯ ಆರಂಭ, ಇಲಾಖೆಯಲ್ಲಿರುವ ಮೇಲ್ವಿಚಾರಕಿಯರ ಕಾರ್ಯ ದಕ್ಷತೆ ಹೆಚ್ಚಿಸಲು 2503 ಮೇಲ್ಚಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು ಬಡ್ಡಿ ರಹಿತವಾಗಿ 50 ಸಾವಿರ ರೂ. ಸಾಲ ಸೌಲಭ್ಯ, ಇಂಧನ ವೆಚ್ಚಕ್ಕಾಗಿ ಮಾಸಿಕ ಒಂದು ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅಂಗನವಾಡಿಯಲ್ಲಿರುವ ಮಕ್ಕಳ ಪೌಷ್ಠಿಕ ಮಟ್ಟವನ್ನು ಮಾಪನ ಮಾಡಲು ನ್ಯೂಟ್ರಿಷ್ಯನ್ ಸರ್ವೆಯನ್ನು ನಡೆಸಲಾಗುವುದು. ಎಸ್ಸಿ-ಎಸ್ಟಿ ಉಪಯೋಜನೆಯಡಿ 1000 ಅಂಗನವಾಡಿ ಕಟ್ಟಡಗಳನ್ನು ಉನ್ನತೀಕರಿಸಲು 20 ಕೋಟಿ, ಎಚ್‍ಐವಿ, ಏಡ್ಸ್‍ನಿಂದ ಬಾಧಿತರಾದ ಕುಟುಂಬಗಳು ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯರ ಪೋಷಣೆಗಾಗಿ ವಿಭಾಗೀಯ ಮಟ್ಟದಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ಕೋಟಿ ಅನುದಾನ ನೀಡಿದ್ದಾರೆ.

ಬಾಲಮಂದಿರಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ದತೆಗಾಗಿ ಕೌಶಲ್ಯ ತರಬೇತಿ ಪಡೆಯಲು ಒಂದು ಕೋಟಿ, ಆಯ್ದ 10 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ನ್ಯಾಯಾಲಯಗಳನ್ನು ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನಾಗಿ ಪರಿವರ್ತಿಸಲು ಒಂದು ಕೋಟಿ ಒದಗಿಸಿದ್ದಾರೆ. ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನವನ್ನು 200 ರೂ. ಹೆಚ್ಚಳ ಮಾಡಲಾಗಿದೆ. ಶೇ.75ಕ್ಕೂ ಕಡಿಮೆ ಅಂಗವೈಕಲ್ಯತೆ ಹೊಂದಿರುವ ವಿಕಲಚೇತನರಿಗೆ ಮಾಸಾಶನವನ್ನು 100 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5371 ಕೋಟಿ ಅನುದಾನ ಒದಗಿಸಿದ್ದಾರೆ.

# ‘ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ’ ಪ್ರಕಟ
ಬೆಂಗಳೂರು,ಫೆ.16-ಬೆಂಗಳೂರು ಮಹಾನಗರದಲ್ಲಿ ಜಾರಿಯಲ್ಲಿರುವ ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.  ಈ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಸಾವಿರ ಎಕರೆ, ಮಹಾನಗರ ಪಾಲಿಕೆಗಳಲ್ಲಿ 500 ಎಕರೆ, ನಗರಸಭೆ-ಪುರಸಭೆ ಪ್ರದೇಶಗಳಲ್ಲಿ 250 ಎಕರೆ, ಪಟ್ಟಣ ಪ್ರದೇಶಗಳಲ್ಲಿ 100 ಜಮೀನುಗಳನ್ನು ವಸತಿ ಯೋಜನೆಗಾಗಿ ಮೀಸಲಿಡಲಾಗಿದೆ.
ರಾಜ್ಯದಲ್ಲಿರುವ ಕೊಳಗೇರಿಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವುದನ್ನು ಅಂದಾಜಿಸಲಾಗಿದ್ದು, ಇವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಿಸ್ತೃತವಾದ ಮಾರ್ಗಸೂಚಿಗಳನ್ನು ಜಾರಿ ಮಾಡುವುದಾಗಿ ತಿಳಿಸಿದರು.   ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆಗೆ 3942 ಕೋಟಿ ಅನುದಾನವನ್ನು ನೀಡಲಾಗಿದೆ.

#  ರಾಷ್ಟ್ರಕವಿ ಸ್ಮಾರಕವಾಗಿ ಕುವೆಂಪು ಅವರ ನಿವಾಸ ಉದಯರವಿ ಅಭಿವೃದ್ಧಿ

ಬೆಂಗಳೂರು, ಫೆ.16-ಮಹಾಕವಿ ಕುವೆಂಪು ಅವರ ಮೈಸೂರಿನ ನಿವಾಸ ಉದಯರವಿಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.   ತಮ್ಮ ಬಜೆಟ್ ಭಾಷಣದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದ ಅವರು. ಜನಪದ ಮತ್ತು ಸಾಂಸ್ಕøತಿಕ ಕಲೆಗಳನ್ನು ಪರಿಚಯಿಸುವ ಉದ್ಧೇಶದಿಂದ ಜನಪದ ಸಾಂಸ್ಕøತಿಕ ಭಾರತ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ಕನ್ನಡದ ನವೋದಯ ಕಾವ್ಯದ ಪ್ರವರ್ತಕ ಡಾ. ಗೋಪಾಲಕೃಷ್ಣ ಅಡಿಗರ ಜನ್ಮ ದಿನೋತ್ಸವದ ಸ್ಮರಣಾರ್ಥ ಕಟ್ಟುವೆವು ನಾವು ಹೊಸ ನಾಡೊಂದನ್ನು ಎಂಬ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.  ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ ಮತ್ತು ರಂಗ ಶಿಕ್ಷಣಕ್ಕಾಗಿ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪಿಸಲಾಗುವುದು. ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ವಿವಿಧ ಅಕಾಡೆಮಿಗಳ ಅನುದಾನವನ್ನು ಹೆಚ್ಚಿಸಲಾಗುವುದು ಎಂದು ಅವರು ವಿವರಿಸಿದರು.   2018-19ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿ 425 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

# ಅಸಂಘಟಿತ ಕಾರ್ಮಿಕರಿಗೆ ನೂತನ ಪಿಂಚಣಿ ಯೋಜನೆ
ಬೆಂಗಳೂರು, ಫೆ.16-ಅಸಂಘಟಿತ ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೂ ಸಹ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗುವುದು. ಇದರೊಂದಿಗೆ 25 ಕೋಟಿ ರೂ. ವೆಚ್ಚದಲ್ಲಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 2018-19ನೇ ಸಾಲಿನ ಬಜೆಟ್ ಭಾಷಣದಲ್ಲಿ ಕಾರ್ಮಿಕ ವರ್ಗದ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಪ್ರಸ್ತಕ ಸಾಲಿನಲ್ಲಿ ಕಾರ್ಮಿಕ ಇಲಾಖೆಗೆ 531 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 1 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ಸಮ್ಮಾನ ದಿನ ಆಚರಿಸಲಾಗುವುದು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ತಮ್ಮ ಸರ್ಕಾರವು ಕಳೆದ 5 ವರ್ಷಗಳಲ್ಲಿ ಕಾರ್ಮಿಕ ರಾಜ್ಯ ವಿಮಾ ಇಲಾಖೆಗೆ 1339 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಕಳೆದ ಸಾಲಿನಲ್ಲಿ 30.73 ಲಕ್ಷ ವಿಮಾದಾರರಿಗೆ ಕಾರ್ಮಿಕ ರಾಜ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು. 4 ಕೋಟಿಗೂ ಅಧಿಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಎರಡೂ ವರ್ಗದ ಕಾರ್ಮಿಕರಿಗಾಗಿ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಖಾನೆ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಏರಿಸಲಾಗಿದೆ. ಕಟ್ಟಡ ಕಾರ್ಮಿಕರ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು 50,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಅಡಿ ಪರಿಹಾರ ಮೊತ್ತವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

#  ಮದುವೆಯಾಗುವ ಪರಿಶಿಷ್ಟ ಜಾತಿ ಯುವಕ-ಯುವತಿಯರಿಗೆ ಬಜೆಟ್ ನಲ್ಲಿ ಬಂಪರ್ ಗಿಫ್ಟ್..!
ಬೆಂಗಳೂರು,ಫೆ.16-ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಯುವಕರು ಬೇರೊಂದು ಸಮುದಾಯದ ಹುಡುಗಿಯನ್ನು ವಿವಾಹ ಮಾಡಿಕೊಂಡರೆ ಮೂರು ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಲಾಗಿದೆ. ಇದೇ ರೀತಿ ಪರಿಶಿಷ್ಟ ಜಾತಿಯ ಹುಡುಗಿ ಬೇರೊಂದು ಜಾತಿಯ ಯುವಕನನ್ನು ವಿವಾಹವಾದರೆ ಹಾಲಿ ಇರುವ ಮೂರು ಲಕ್ಷ ಪ್ರೊತ್ಸಾಹಧನದ ಬದಲಿಗೆ 5 ಲಕ್ಷ ಹಣವನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದರು. ಪರಿಶಿಷ್ಟ ಜಾತಿಯ ಯುವಕ, ಬೇರೊಂದು ಸಮುದಾಯದ ಯುವತಿಯನ್ನು ಮದುವೆಯಾದರೆ ಈ ಹಿಂದೆ ಎರಡು ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಹಣವನ್ನು ಮೂರು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಇದೇ ರೀತಿ ಪರಿಶಿಷ್ಟ ಜಾತಿಯ ಯುವತಿ ಅನ್ಯ ಜಾತಿಯ ಯುವಕನನ್ನು ವಿವಾಹವಾದರೆ ಹಿಂದೆ ನೀಡಲಾಗುತ್ತಿದ್ದ ಮೂರು ಲಕ್ಷ ಪ್ರೋತ್ಸಾಹ ಧನವನ್ನು 5 ಲಕ್ಷದವರೆಗೆ ಹೆಚ್ಚಳ ಮಾಡುವ ಮೂಲಕ ಸಿದ್ದರಾಮಯ್ಯ ಈ ಸಮುದಾಯದ ಒಲವು ಗಳಿಸಲು ಯತ್ನಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವೈದ್ಯಕೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲು ಎಸ್ಸೆಸ್ಸೆಲ್ಸಿ ಸೇರಿದಂತೆ ಮತ್ತಿತರ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿಹೆಚ್ಚು ಅಂಕ ಪಡೆದಿರುವ 100 ಬಾಲಕರು ಹಾಗೂ 100 ಬಾಲಕಿಯರಿಗೆ ಬೆಂಗಳೂರಿನಲ್ಲಿ ವಿಶೇಷ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‍ಸಿ, ಎನ್‍ಐಟಿ ಸೇರಿದಂತೆ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಒಂದು ಲಕ್ಷ ರೂ. ಪ್ರೋತ್ಸಾಹಧನವನ್ನು ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ನಗರ ಸಾರಿಗೆ ಸಂಸ್ಥೆಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ರೀತಿಯಲ್ಲಿ ಬಿಬಿಎಂಪಿ, ಮಹಾನಗರಪಾಲಿಕೆ, ಪುರಸಭೆಗಳಲ್ಲಿ ಪೌರಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿದೆ. ಇದೇ ರೀತಿ ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಕೃಷಿ, ಯಂತ್ರೋಪಕರಣ, ನೀರಾವರಿ ಸೌಲಭ್ಯ, ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ ಜಮೀನುಗಳಲ್ಲಿ ಸೋಲಿಗ, ಜೇನುಕುರುಬ, ಇತರೆ ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಉತ್ತೇಜನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ,ಹಿರಿಯ ಮುತ್ಸದ್ದಿಗಳಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಪ್ರಭಾಕರ್, ಕೆ.ಎಚ್.ಪ್ರಭಾಕರ್ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡಲಾಗಿದೆ.

ಎಸ್ಸಿ- ಎಸ್ಟಿ ಗುತ್ತಿಗೆದಾರರಿಗೆ ಕೆಟಿಪಿಟಿ ಕಾಮಗಾರಿಗಳಿಗೆ ನಿಗದಿಪಡಿಸಿರುವ 50 ಲಕ್ಷವರೆಗಿನ ಮಿತಿಯನ್ನು ಒಂದು ಕೋಟಿಗೆ ಹೆಚ್ಚಳ ಮಾಡಿದ್ದರೆ, ಗುರು ಮಾತಂಗ ಮಹರ್ಷಿಗಳ ಸ್ಮರಣಾರ್ಥವಾಗಿ ಹಂಪಿಯಲ್ಲಿ ಸ್ಮಾರಕ ಭವನ ತಲೆಎತ್ತಲಿದೆ. ಮಂಗಳೂರಿನ ವಿಕಾಸಸೌಧ ಪಕ್ಕದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಪೂರ್ತಿ ಭವನವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗುವುದು. ಕರ್ನಾಟಕ ಖಾದಿ ಮಂಡಳಿ ವತಿಯಿಂದ ಬಿಪಿಎಲ್ ಕುಟುಂಬಗಳ ಮರುಪಾವತಿಗಾಗಿ ಸಾಲ ಮನ್ನಾ, ಆಶ್ರಮ ಶಾಲೆ, ಮೆಟ್ರಿಕ್‍ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ನೀಡಲಾಗುತ್ತಿದ್ದ ಹಣವನ್ನು 1300, 1500 ಹಾಗೂ 1600 ರೂ.ಗೆ ಹೆಚ್ಚಿಸಲಾಗಿದೆ. ಹುಣಸೂರು ಹಾಗೂ ಎಚ್‍ಡಿಕೋಟೆಯಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ, ಸೋಲಿಗ, ಜೇನುಕುರುಬ, ಕಾಡುಕುರುಬ, ಇರುಳಿಗ, ಕೊರಗ, ಎರವ, ಅಸಲರು, ಹಕ್ಕಿಪಿಕ್ಕಿ, ಸಿದ್ದಿ ಇತ್ಯಾದಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

# ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ
ಬೆಂಗಳೂರು, ಫೆ.16- ಆರನೇ ವೇತನ ಆಯೋಗ ನೀಡಿರುವ ಶಿಫಾರಸುಗಳನ್ನು ಸಂಪೂರ್ಣ ಜಾರಿಗೊಳಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಸುಮಾರು 12 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ವೇತನ ಪರಿಷ್ಕರಣೆಯಾಗಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಪರ್ ಕೊಡುಗೆಯನ್ನು ನೀಡಿದ್ದು, ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಗಳಿಸುವ ಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ವೇತನ ಹೆಚ್ಚಳವನ್ನು ನೇರ ಹಾಗೂ ಸ್ಪಷ್ಟವಾಗಿ ಘೋಷಿಸದೆ ಪರೋಕ್ಷವಾಗಿ 6ನೇ ವೇತನ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.

ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಿ ನೌಕರರು ಸಲ್ಲಿಸಿದ್ದ ಬೇಡಿಕೆಯನ್ನು ಪರಿಶೀಲಿಸಲು ಕಳೆದ ಆಯವ್ಯಯದಲ್ಲಿ 6ನೇ ವೇತನ ಆಯೋಗವನ್ನು ಘೋಷಿಸಲಾಗಿತ್ತು. 2017ರ ಜೂನ್‍ನಲ್ಲಿ ಆಯೋಗವನ್ನು ರಚಿಸಲಾಗಿದೆ. ಆಯೋಗ ತನ್ನ ಮೊದಲ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಒಟ್ಟಾರೆ ಶೇ.30ರಷ್ಟು ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಇದರಿಂದ ರಾಜ್ಯದಲ್ಲಿರುವ 5.93ಲಕ್ಷ ನೌಕರರು ಹಾಗೂ 5.73ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ವೇತನ ಆಯೋಗದ ಅವಧಿಯನ್ನು 2018ರ ಏಪ್ರಿಲ್ 30ರವರೆಗೂ ವಿಸ್ತರಿಸಲಾಗಿದೆ. ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಆಯೋಗದ ಎಲ್ಲಾ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರಿಂದ 10,508 ಕೋಟಿ ರೂ.ಗಳು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿರುವ ಸಿದ್ದರಾಮಯ್ಯ, ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲಗಳ ಕೊರತೆಯಾಗದಂತೆ ಆರ್ಥಿಕ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

# ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಘೋಷಣೆ
ಬೆಂಗಳೂರು, ಫೆ.16- ವೃತ್ತಿ ನಿರ್ವಹಣೆ ವೇಳೆ ಅಪಘಾತ ಅಥವಾ ಅವಘಡಗಳಿಗೆ ಒಳಗಾಗಿ ನಿಧನರಾಗುವ ಪತ್ರಕರ್ತರ ಕುಟುಂಬಗಳಿಗೆ 5 ಲಕ್ಷ ವರೆಗಿನ ಜೀವ ವಿಮೆ ಖಾತರಿ ನೀಡುವ ಮಾಧ್ಯಮ ಸಂಜೀವಿನಿ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ರಾಜೀವ್ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲಕ ಪತ್ರಕರ್ತರ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಲಾಗುವುದು. ಡಾ.ರಾಜ್‍ಕುಮಾರ್ ಪುಣ್ಯಭೂಮಿ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪಿಸಲಾಗುವುದು. ಪತ್ರಿಕೆಗಳನ್ನು ಮನೆ ಮನೆಗಳಿಗೆ ಹಂಚಿ ಅನಿಶ್ಚಿತ ಬದುಕು ಸಾಗಿಸುವ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ಕ್ಷೇಮ ನಿಧಿ ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ 5ಕೋಟಿ ರೂ.ಗಳ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜೇನುಗೂಡು ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಿತ್ರ ನಿರ್ಮಿಸುವ ನಿರ್ಮಾಪಕರಿಗೆ 20 ಲಕ್ಷ ಸಹಾಯಧನ ಮತ್ತು ಕಥಾ ಲೇಖಕರಿಗೆ 5 ಲಕ್ಷ ವಿಶೇಷ ಸಹಾಯಧನವನ್ನು ಪ್ರತಿ ವರ್ಷ 8 ಚಿತ್ರಗಳಿಗೆ ನೀಡಲಾಗುವುದು ಎಂದು ಹೇಳಿರುವ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 239 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದಾರೆ. ಕಳೆದ 5 ವರ್ಷದಲ್ಲಿ ಪತ್ರಕರ್ತರ ಮಾಸಾಶನವನ್ನು 3ರಿಂದ 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಮೃತ ಪತ್ರಕರ್ತರ ಕುಟುಂಬದ ಮಾಸಶನವನ್ನು 1ರಿಂದ 3 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ರಾಜೀವ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

# ಪೊಲೀಸ್ ನೇಮಕಾತಿಗೆ ಹೊಸ ಮಂಡಳಿ ರಚನೆ

ಬೆಂಗಳೂರು, ಫೆ.16- ಪೊಲೀಸ್ ನೇಮಕಾತಿಗಳನ್ನು ನಡೆಸಲು ಶಾಶ್ವತವಾದ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸುವುದು ಹಾಗೂ ಐದು ಕೋಟಿ ರೂ. ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್‍ಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.25ಕ್ಕೆ ಹೆಚ್ಚಿಸುವುದಾಗಿಯೂ ಹೇಳಿರುವ ಅವರು, ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಶಾಲೆಗಳ ಸಾಮಥ್ರ್ಯವನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 3200 ಮಂದಿ ತರಬೇತಿ ಸಾಮಥ್ರ್ಯ ಇರುವ 5ಸಾವಿರ ಮಂದಿಗೆ ಹಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಸಾಹಸ, ಶೌರ್ಯಗಳನ್ನು ಗೌರವಿಸಲು ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಮತ್ತು ನಿಯಂತ್ರಿಸಲು ಐದು ಕೋಟಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು. [ ಸಿದ್ದು ಲ್ಕೆಕ್ಕಾಚಾರ (ಐive) ]

ಪೊಲೀಸ್ ವ್ಯವಸ್ಥೆ ಇನ್ನಷ್ಟು ನಾಗರಿಕ ಸ್ನೇಹಿ ಆಗಲು ಸಾಫ್ಟ್‍ವೇರ್‍ಗಳನ್ನು ಅಳವಡಿಸಲಾಗುವುದು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಬ್ರಾಡ್‍ಬ್ಯಾಂಡ್ ಒದಗಿಸಲಾಗುವುದು. ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವೀಸ್ ಸೆಂಟರ್‍ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಬಾಕಿ ಉಳಿದಿರುವ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಕಾರಾಗೃಹಗಳು ಮತ್ತು ನ್ಯಾಯಾಲಯಗಳಿಗೆ ವೀಡಿಯೋ ಲಿಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನಲ್ಲಿ 85 ಕೋಟಿ ವೆಚ್ಚದ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಿಸಲಾಗುವುದು. ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಿ ಪುನರ್‍ವಸತಿಗೆ ನೆರವಾಗಲು ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅತ್ಯುನ್ನತ ಭದ್ರತಾ ವಿಭಾಗವನ್ನು ಸ್ಥಾಪಿಸಲು 100 ಕೋಟಿ ಖರ್ಚು ಮಾಡಲಾಗುವುದು.

ಈಗಾಗಲೇ 213 ಅಗ್ನಿ ಶಾಮಕ ಠಾಣೆ ಸ್ಥಾಪಿಸುವ ಮೂಲಕ 176 ತಾಲ್ಲೂಕುಗಳ ಪೈಕಿ 174 ತಾಲ್ಲೂಕುಗಳಲ್ಲಿ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಲಾಗಿದೆ. ಹೊಸ 50 ತಾಲ್ಲೂಕುಗಳಿಗೂ ಕೆಎಸ್‍ಎಎಫ್‍ಇ ಎರಡನೇ ಹಂತದ ಯೋಜನೆಯಲ್ಲಿ ಮುಂದಿನ ಐದು ವರ್ಷದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ.
ನಿವೃತ್ತಿಯ ನಂತರ ಪುನರ್ ವಸತಿ ಒದಗಿಸುವ ಸಲುವಾಗಿ ರಾಜ್ಯದ ಮಾಜಿ ಸೈನಿಕರ ದತ್ತಾಂಶವನ್ನು ಸಿದ್ದಪಡಿಸಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಜೋಡಣೆ ಮಾಡಲಾಗುವುದು ಎಂದು ಹೇಳಿರುವ ಸಿಎಂ, ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಆದ ನೇಮಕಾತಿಗಳು, ವಸತಿ ಗೃಹ ನಿರ್ಮಾಣ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ. ಈ ಸಾಲಿನಲ್ಲಿ ಗೃಹ ಇಲಾಖೆಗೆ 6647ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

ಯಾವುದಕ್ಕೆ ಎಷ್ಟೆಷ್ಟು ..? 

 • ಒಟ್ಟು ಬಜೆಟ್ 2,91,181ಕೋಟಿ ಬಜೆಟ್
 • ಕೃಷಿ, ಹೈನುಗಾರಿಕೆಗೆ ಮುಂದೆ
 • ಐದು ವರ್ಷದಲ್ಲಿ 1.5 ಲಕ್ಷ ಉದ್ಯೋಗ ಭರ್ತಿ ಮಾಡಲಾಗಿದೆ.
 • ಹೊಸ ಸ್ಮಾರ್ಟ್ ಆ್ಯಪ್‍ನೀತಿ ಜಾರಿ
 • ಯುವ ಪೀಳಿಗೆಗೆ ಉದ್ಯೋಗ
 • ಹೂಡಿಕೆ ಆಕರ್ಷಣೆ ರಾಜ್ಯ
 • ಪ್ರಮುಖ ಕ್ಷೇತ್ರಗಳಲಿ 1.5 ಲಕ್ಷ ಉದ್ಯೋಗ
 • ಸಣ್ಣ ನಿರಾವರಿಗೆ 2.090 ಕೋಟಿ ಅನುದಾನ
 • ಪಶುಸಂಗೋಪನೆ 2,245 ಕೋಟಿ
 • ಜಲ 15,229ಕೋಟಿ
 • ಸಹಕಾರ 663 ಕೋಟಿ ಅನುದಾನ
 • ಕೃಷಿಗ 5080 ಕೋಟಿ ನುದಾ
 • ಸಹಕಾರ 1,663 ಕೋಟಿ
 • ಮೀನುಗಾರಿಕೆಗೆ 337
 • ತೋಟಗಾರಿಕೆ 1,091ಕೋಟಿ
 • ರೇಷ್ಮೆ 429 ಕೋಟಿ
 • 30 ಲಕ್ಷ ಫಲಾನುಭವಿಗೆ ಅನಿಲ ಭಾಗ್ಯ
 • ವಿದ್ಯಾಸಿರಿ ಯೋಜನೆ 1 ಲಕ್ಷಕ್ಕೆ ಹೆಚ್ಚಳ
 • ಸಿಖ್. ಜೈನ್| ಅಭಿವೃದ್ಧಿಗೆ 80 ಕೋಟಿ
 • ರೈತರಿಗೆ ಶೇ.3 ರಬಡ್ಡಿ ದರದಲ್ಲಿ 10 ಲಕ್ಷ ಸಾಲ
 • ನಿಧನ ಹೊಂದಿದ ರೈತರ 1 ಲಕ್ಷ ವರೆಗಿನ ಸಾಲ ಮನ್ನಾ
 • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ಮನ್ನಾ
 • ಶೇಂಗಾ ಬೆಳಗೆಗಾರರಿಗೆ 50 ಕೋಟಿ ವಿಶೇಷ ಪ್ಯಾಕೇಜ್
 • ಸಿರಿ ಧಾನ್ಯ ಬೆಳೆಗೆ 24 ಕೊಟಿ ಪ್ಯಾಕೇಜ್
 • ಚಾಮರಾಜನಗರದಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ
 • ವಿಜಯಪುರದಲ್ಲಿ ಮುದ್ದೆ ಬಿಹಾಹಳದಲ್ಲಿ ನೂತನ ಕೃಷಿ ಕಾಲೇಜು
 • ಜಿಕೆವಿಕೆಯಲ್ಲಿ ನಂಜಂಡಪ್ಪಸ್ವಾಮಿ ಸಂಧೋಧನೆ ಪೀಠ ಸ್ಥಾಪನೆ
 • ಕೃಷಿ ಭಾಗ್ಯ ಯೋಜನೆಗೆ 600 ಕೋಟಿ
 • ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ
 • ಸಾವಯವ ಕೃಷಿಗೆ ಹೆಚ್ಚು ಆದ್ಯತೆ
 • ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ
 • ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ
 • ಮೈಸೂವು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪನೆ
 • ರೈತರ ಬೆಳಕು ಜಾರಿರ
 • ರೈತರಿಗೆ ನೇರ ಆದಾಯ ಒದಗಿಸುವ ರೈರತರಬೆಳಕು 70 ಲಕ್ಷ ರೈತರ ಬೆಳಕು ಯೋಜನೆ ಯಿಂದ ಅನುಕೂಲ
 • ನೀರಾವರಿ ಇಲಾಖೆಗೆ ಹೆಚ್ಚು ಒತ್ತು
 • ಗರಿಷ್ಟ 10 ಸವಿರ ರೂ. ವರೆಗೆ ಸಾಹಯ ಧನ
 • ಪ್ರತಿ ವರ್ಷ 5 ಸಾವಿರ ರೂ. ಮಾಸಾಸನ
 • ಕೆ.ಆರ್.ಪುರಂನಲ್ಲಿ ನೀರು ಸಂಸ್ಕರಣಾ ಘಟಕ
 • ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ನೀರು
 • ಹಾವು ಕಚ್ಚಿ ಮೃತಪಟ್ಟವರಿಗೆ 2 ಲಕ್ಷ ಪರಿಹಾರ
 • ಸಿರಿ ಧಾನ್ಯ ಬೆಳೆಗೆ 60 ಸಾವಿರ ಹೆಕ್ಟರ್ ವಿಸಸ್ತರ್ಣೇ
 • ಹುಲ್ಲು ಬಣವೆಗೆ ಬೆಂಕಿ ಬಿದ್ದರೆ 20 ಸಾವಿರ ಪರಿಹಾರ
 • 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

#  ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ‘ಬಸ್‍ ಪಾಸ್ ಭಾಗ್ಯ’

Bus-Pass
ಬೆಂಗಳೂರು, ಫೆ.16- ರಾಜ್ಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ವರ್ಷದಿಂದ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣಕ್ಕೆ ನೀಡುವ ಸೌಲಭ್ಯದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೂರದ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚ ಭರಿಸಲು ತೊಡಕಾಗಬಾರದು ಎಂಬ ಕಾರಣದಿಂದ ಈಗ ನೀಡುತ್ತಿರುವ ರಿಯಾಯ್ತಿ ಬಸ್ ಪಾಸ್‍ಗಳ ಬದಲಾಗಿ 2018-19ನೇ ಸಾಲಿನಿಂದ ಸಂಪೂರ್ಣ ಉಚಿತ ಬಸ್ ಪಾಸ್‍ಗಳನ್ನು ನೀಡಲಾಗುವುದು. ಸುಮಾರು 19.60 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಸಿಎಂ ಹೇಳಿದ್ದಾರೆ.

ಧಾರವಾಡ, ಬೆಂಗಳೂರಿನಲ್ಲಿರುವ ಭಾರೀ ವಾಹನಗಳ ಚಾಲಕರ ತರಬೇತಿ ಸಂಸ್ಥೆಗಳಲ್ಲಿ ನೂರು ಮಹಿಳೆಯರಿಗೆ, 200 ಪರಿಶಿಷ್ಟ ಜಾತಿ, ಪಂಗಡದವರಿಗೆ ಮತ್ತು ಬೆಂಗಳೂರು ಮಹಾನಗರ ಸಂಸ್ಥೆಯಲ್ಲಿರುವ ತರಬೇತಿ ಶಾಲೆಯಲ್ಲಿ ಸಾವಿರ ಮಹಿಳಾ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ತರಬೇತಿ ನೀಡಲಾಗುವುದು.
ದೇಶದಲ್ಲೇ ಪ್ರಥಮಬಾರಿಗೆ ನಗರಗಳ ಸಂಚಾರಕ್ಕೆ ಕೆಎಸ್‍ಆರ್‍ಟಿಸಿಯಿಂದ 10 ಡಬ್ಬಲ್‍ಡಕ್ಕರ್ ಬಸ್‍ಗಳನ್ನು ಖರೀದಿಸಿ ನೀಡಲಾಗುವುದು. 30 ಬಸ್ ನಿಲ್ದಾಣ, 8 ಬಸ್ ಘಟಕಗಳು, 325 ಬಸ್ ತಂಗುದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ಸುಮಾರು 13 ಸಾವಿರ ಯುವಜನರಿಗೆ ಚಾಲನೆ ಮತ್ತು ಮ್ಯಾಕಾನಿಕಲ್ ತರಬೇತಿ ನೀಡುವ ಕೌಶಲ್ಯ ಹಾಗೂ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು. ನಿರ್ಭಯ ಯೋಜನೆಯಡಿ ಬಿಎಂಟಿಸಿ ಸಾವಿರ ಬಸ್‍ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.  ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಸ್ಥಳಗಳಿಗಷ್ಟೇ ಇರುವ ಪ್ಲೈಬಸ್‍ಗಳ ಸೇವೆಯನ್ನು ಇನ್ನೂ 7 ಸ್ಥಳಗಳಿಗೆ ವಿಸ್ತರಿಸಲಾಗುವುದು. ಭಾರೀ ಚಾಲನಾ ತರಬೇತಿ ಪಡೆದ 200 ಮಂದಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಸರಕು ಸಾಗಾಣಿಕೆ ವಾಹನ ಖರೀದಿಸಲು ಕರ್ನಾಟಕ ಹಣಕಾಸು ನಿಗಮ ಹಾಗೂ ದೇವರಾಜು ಅರಸು ಟ್ರಕ್ ಟರ್ಮಿನಲ್ ನಿಯಮದಿಂದ ಶೂನ್ಯ ಬಡ್ಡಿ ದರದಲ್ಲಿ 15 ಲಕ್ಷ ಸಾಲ ಕೊಡಿಸಲಾಗುವುದು. ಇದರ ಬಡ್ಡಿ ಸಹಾಯಧನಕ್ಕಾಗಿ ಎರಡೂವರೆ ಕೋಟಿಯನ್ನು ಈ ಬಜೆಟ್‍ನಲ್ಲಿ ಮೀಸಲಿಡಲಾಗಿದೆ.  ದೇವರಾಜು ಅರಸು ಟ್ರಕ್ ಟರ್ಮಿನಲ್ ಮುಖಾಂತರ ಸಾರ್ವಜನಿಕ ಸಹಭಾಗಿತ್ವದಲ್ಲಿ ಮೈಸೂರಿನ ನಂಜನಗೂಡು ವರ್ತೂಲ ರಸ್ತೆಯಲ್ಲಿ 6.5 ಎಕರೆ ಪ್ರದೇಶದಲ್ಲಿ 45 ಕೋಟಿ ವೆಚ್ಚದ ಎರಡನೇ ಹಂತದ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು.

ಧಾರವಾಡದ ಅಂಚಟಗೇರಿ ಗ್ರಾಮದ 56.13 ಎಕರೆಯಲ್ಲಿ 110 ಕೋಟಿ ವೆಚ್ಚ ಮಾಡಿ ಟರ್ಮಿನಲ್ ಲಾಜೆಸ್ಟಿಕ್ ಪಾರ್ಕ್ ವೇರ್ ಹೌಸ್ ನಿರ್ಮಿಸಲಾಗುವುದು. ಯಶವಂತ ಟ್ರಕ್ ಟರ್ಮಿನಲ್‍ನಲ್ಲಿ 40 ಕೋಟಿ ವೆಚ್ಚದ ಮಲ್ಟಿಲೆವಲ್ ಕಟ್ಟಡ ನಿರ್ಮಾಣ ಮತ್ತು ಮೂಲ ಸೌಲಭ್ಯ ಉನ್ನತ್ತೀಕರಣ ಮಾಡಲಾಗುವುದು.
ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ವೆಚ್ಚ ಮಾಡಿ ಟ್ರಕ್ ಟರ್ಮಿನಲ್ ಮತ್ತು ಹೈವೇ ಹೆದ್ದಾರಿ ಸೌಲಭ್ಯ ಕೇಂದ್ರ ನಿರ್ಮಿಸಲಾಗುವುದು. ಒಟ್ಟಾರೆ ಸಾರಿಗೆ ಇಲಾಖೆಗೆ 2208ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

# ದಾಖಲೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13ನೇ ಹಾಗೂ ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.  ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಆಯವ್ಯಯ ಮಂಡನೆಗೆ ಆಹ್ವಾನ ನೀಡಿದ ಕೂಡಲೇ ಮುಖ್ಯಮಂತ್ರಿ ಅವರ ದಾಖಲೆ ಬಜೆಟ್ ಮಂಡನೆಯನ್ನು ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.  ಮುಖ್ಯಮಂತ್ರಿ ಅವರು ಆಯವ್ಯಯ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಅತಿ ಹೆಚ್ಚು ಬಜೆಟ್ ಮಂಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬಿಜೆಪಿ ಶಾಸಕ ಸಿ.ಟಿರವಿ, ಬಜೆಟ್ ಮಂಡನೆ ಆಗಲಿ ನಂತರ ಪ್ರತಿಕ್ರಿಯೆ ನೀಡಿ ಎಂದರು.  ಆಯವ್ಯಯ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ವಿಧಾನಸಭೆಯ ಕೊನೆ ಅಧಿವೇಶನಕ್ಕೆ ನಾವು-ನೀವೆಲ್ಲಾ ಸಾಕ್ಷೀಭೂತರಾಗಿದ್ದೇವೆ. 4 ದಶಕಗಳಲ್ಲಿ 5 ವರ್ಷ ಅವಧಿ ಪೂರ್ಣಗೊಳಿಸುವ ಮೂಲಕ ರಾಜ್ಯದ ಜನತೆಯ ಸುಭದ್ರ ಸರ್ಕಾರದ ಆಶಯವನ್ನು ಸಹಕಾರಗೊಳಿಸಿದ ಹೆಮ್ಮೆ ನಮ್ಮದು ಎಂದು ಹೇಳಿದರು.  ಮುಖ್ಯಮಂತ್ರಿ ಆಗಿ 6ನೇ ಸೇರಿದಮತೆ ಒಟ್ಟು 13 ಆಯವ್ಯಯ ಪತ್ರ ಮಂಡಿಸಿದ ಭಾಗ್ಯ ಒದಗಿ ಬಂದಿರುವುದು ಪ್ರಜಾಪ್ರಭುತ್ವದ ನಿಜವಾದ ಸೌಂದಯ್ಯ. ಸಾಮಾನ್ಯ ರೈತನ ಮಗನಿಗೂ ಇಂಥದೊಂದು ಭಾಗ್ಯ ಒದಗಿದೆ. ಇದಕ್ಕಾಗಿ ದೇಶದ ಸಂವಿಧಾನಕ್ಕೂ ಮತ್ತು ಅದನ್ನು ರೂಪಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೂ ತಲೆ ಬಾಗುತ್ತೇನೆ ಎಂದು ಹೇಳಿದರು.

# ‘ಆರೋಗ್ಯ ಕರ್ನಾಟಕ’ ಎಂಬ ಹೊಸ ಯೋಜನೆ ಘೋಷಣೆ

ಬೆಂಗಳೂರು,ಫೆ.16- ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಒದಗಿಸುವ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಎಂಬ ವಿನೂತನ ಯೋಜನೆಯನ್ನು ಈ ಬಾರಿಯ ಬಜೆಟ್‍ನಲ್ಲಿ ಪ್ರಕಟಿಸಿದೆ. ಈ ನೂತನ ಯೋಜನೆಯು ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದ್ದು, ವರ್ಷದ ಅಂತ್ಯದೊಳಗೆ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ಮುಂದಿನ ಏಳು ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಸೌಲಭ್ಯ ಒದಗಿಸಲು ಪ್ರತಿ ಐದು ಸಾವಿರ ಜನಸಂಖ್ಯೆಗೆ ಇರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ,9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಯನ್ನು ಬಲಪಡಿಸಲು ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಡಿತಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಉತ್ತಮ ತಾಂತ್ರಿಕ ಸೇವೆಗಳನ್ನು ಬಳಸುವುದಾಗಿ ಸಿಎಂ ತಿಳಿಸಿದ್ದಾರೆ.  ಸಾಂಕ್ರಾಮಿಕ ಕಾಯಿಲೆಗಳನ್ನು ಶೀಘ್ರ ಪತ್ತೆಹಚ್ಚಿ ನಿರ್ಮೂಲನೆ ಮಾಡಲು ತುರ್ತು ಕ್ರಮ, ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆ , ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ರಾಜ್ಯ ಆರೋಗ್ಯ ಪರಿಷತ್ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.   ಈ ಬಾರಿಯ ಬಜೆಟ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6645 ಕೋಟಿ ಅನುದಾನವನ್ನು ಒದಗಿಸಲಾಗಿದೆ.

#  ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆಗೆ 14,268 ಕೋಟಿ ರೂ.

ಬೆಂಗಳೂರು, ಫೆ.16-ಗಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 2018-19ನೇ ಸಾಲಿನಲ್ಲಿ ಒಟ್ಟು 14,268 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಈ ಇಲಾಖೆಗೆ ನೀಡಿರುವ ಅನುದಾನಗಳು ಮತ್ತು ಯೋಜನೆಗಳ ಬಗ್ಗೆ ವಿವರಿಸಿದರು.  ರಾಷ್ಟ್ರದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಗದಗ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಐದು ಸ್ನಾತಕೋತ್ತರ ಕೋರ್ಸ್‍ಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು. 2013-14ನೇ ಸಾಲಿನಿಂದ ರಾಜ್ಯದ 16 ಜಿಲ್ಲೆಗಳು, 97 ತಾಲ್ಲೂಕುಗಳು, 3,500 ಗ್ರಾಮ ಪಂಚಾಯಿತಿಗಳು ಮತ್ತು 18,107 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಮೂಲಕ ಒಟ್ಟು 37,63 ಲಕ್ಷ ಶೌಚಾಲಯಗಳನ್ನು ನಿರ್ಮಿಸಿ ಶೇ.87ರಷ್ಟು ಸಾಧನೆ ಮಾಡಿ ಕರ್ನಾಟಕ ರಾಷ್ಟ್ರಮಟ್ಟದಲ್ಲೇ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಹೆಮ್ಮೆಯಿಂದ ಹೇಳಿಕೊಂಡರು.

ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ 2013-14ರಿಂದ ಗ್ರಾಮೀಣ ಜನರು ಹಂಗಿನ ಬದುಕಿನಿಂದ ಹಕ್ಕಿನ ಬದುಕು ನಡೆಸುವಂತೆ ಮಾಡಲು 32.93 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿ, 14.90 ಲಕ್ಷ ಆಸ್ತಿಗಳ ರಚನೆಗೆ 11,037 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆ ಅಡಿ ಈವರೆಗೆ 4,832 ಕೋಟಿ ರೂ. ವೆಚ್ಚದಲ್ಲಿ 9,983 ಕಿ.ಮೀ. ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗಿದೆ. ಸುವರ್ಣ ಗ್ರಾಮ ಯೋಜನೆ ಅಡಿ 1,954 ಕೋಟಿ ರೂ. ವೆಚ್ಚದಲ್ಲಿ 3,220 ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. 1,000 ಕೋಟಿ ರೂ. ವೆಚ್ಚದಲ್ಲಿ 875 ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಈ ಸಾಲಿನಿಂದ ಆರಂಭಗೊಂಡಿದೆ ಎಂದು ಅವರು ಹೇಳಿದರು.   ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಗೌರವಧನವನ್ನು ಕ್ರಮವಾಗಿ 35,000 ರೂ, 15,000 ರೂ. ಮತ್ತು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

# ಪದವಿಗಳಿಗೆ ಪ್ರವೇಶ ಕೋರುವ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕಕ್ಕೆ ವಿನಾಯ್ತಿ

ಬೆಂಗಳೂರು,ಫೆ.16-ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿರುವ ರಾಜ್ಯ ಸರ್ಕಾರ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಕೋರುವ ಎಲ್ಲಾ ವಿದ್ಯಾರ್ಥಿನಿಯರ ಪೂರ್ಣ ಶುಲ್ಕಕ್ಕೆ ವಿನಾಯ್ತಿ ನೀಡಲು ನಿರ್ಧರಿಸಿದೆ. ಇನ್ನು ಮುಂದೆ ಸರ್ಕಾರಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪೂರ್ಣ ಶುಲ್ಕ ವಿನಾಯ್ತಿ ನೀಡಲು 95 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.
ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಈ ಯೋಜನೆಯಿಂದ 3.7 ಲಕ್ಷ ವಿದ್ಯಾರ್ಥಿನಿಯರು ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಉನ್ನತ ಶಿಕ್ಷಣವನ್ನು ಉತ್ಕøಷ್ಟಗೊಳಿಸಲು ಚಿಕ್ಕಮಗಳೂರಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆಯ ಜಮಖಂಡಿಯಲ್ಲಿ ರಾಣಿ ಚೆನ್ನಮ್ಮ ವಿವಿಯ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ತಲಾ ಒಂದು ಕೋಟಿ ರೂ. ಅನುದಾನ ಘೋಷಿಸಿದರು.  ಸಾಮಾಜಿಕ , ಸಮಾನತೆಯ ಹರಿಕಾರ ಬಸವಣ್ಣನವರ ಚಿಂತನೆಗಳನ್ನು ನಾಡಿನಾದ್ಯಂತ ಪಸರಿಸಲು ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರಕ್ಕೆ ಎರಡು ಕೋಟಿ ರೂ. ಒದಗಿಸಲಾಗಿದೆ.
ಇದಲ್ಲದೆ ಧಾರವಾಡದಲ್ಲಿರುವ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ ಒಂದು ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು , ಪ್ರಸಕ್ತ ವರ್ಷ ಉನ್ನತ ಶಿಕ್ಷಣ ಇಲಾಖೆಗೆ 4514 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

# ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ

ಬೆಂಗಳೂರು,ಫೆ.16- ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೆಚ್ಚುತ್ತಿರುವ ಅನಾಹುತವನ್ನು ತಪ್ಪಿಸಲು ಸರ್ಕಾರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಂತ ಹಂತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು.  ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ಆಯವ್ಯಯ ಮಂಡಿಸಿದ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಶಾಲಾ ಮಕ್ಕಳ ಸುರಕ್ಷತೆಯೇ ನಮ್ಮ ಸರ್ಕಾರದ ಪ್ರಥಮ ಕರ್ತವ್ಯ ಎಂದು ಹೇಳಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರತಿ ತಾಲ್ಲೂಕಿನ ಒಂದು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಅತ್ಯುತ್ತಮ ಎಸ್‍ಡಿಎಂಸಿ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ನೂರು ವರ್ಷಗಳನ್ನು ಪೂರೈಸಿದ 100 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ ಅವುಗಳನ್ನು ಹಂತ ಹಂತವಾಗಿ ಅಭಿವೃದ್ದಿಗೊಳಿಸಲಾಗುವುದು.    ಶಾಲೆ ಹಂತಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಜ್ಞಾನ ಸಮಿತಿ ರಚನೆ, ಅಗಸ್ತ್ಯ ಫೌಂಡೇಷನ್ ಸಹಭಾಗಿತ್ವದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಪ್ರಸಕ್ತ ವರ್ಷ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಬಜೆಟ್‍ನಲ್ಲಿ 22, 350 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

ಪ್ರಸಕ್ತ ವರ್ಷ ಒಂದೇ ಸೂರಿನಡಿ ವಿದ್ಯಾಭ್ಯಾಸ ಕಲ್ಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ 12ನೇ ತರಗತಿಯವರೆಗೆ 176 ಸಂಯೋಜಿತ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷ 100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಐದು ಲಕ್ಷದಂತೆ ಐದು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭ ಮಾಡುವುದಾಗಿ ಘೋಷಿಸಿದರು.  ಅಲ್ಲದೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ವಿಶ್ವ ಭಾತೃತ್ವ, ಸೇವಾ ಮನೋಭಾವ, ಶಾಂತಿ-ಶಿಸ್ತು, ಸಂಯಮ ಬೆಳೆಸಲು ಭಾರತ್ ಮತ್ತು ಸ್ಕೌಟ್ ಮತ್ತು ಗೈಡ್ಸ್ ಘಟಕಗಳನ್ನು ಎಲ್ಲೆಡೆ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ.

# ಬಜೆಟ್ ಹೈಲೈಟ್ಸ್ : ನೂತನ ಮೂಲಸೌಲಭ್ಯ ನೀತಿ ಜಾರಿಗೆ ಭರಸೆ : 
ಬೆಂಗಳೂರು, ಫೆ.16- ಸರಕುಸಾಗಣಿಕೆ ಮತ್ತು ಪ್ರಯಾಣಿಕರ ಸಾರಿಗೆಯನ್ನು ಹೆಚ್ಚು ಸಮರ್ಪಕವಾಗಿ ಮತ್ತು ಶೀಘ್ರವಾಗಿ ರಸ್ತೆ ಸಾಂದ್ರತೆಯನ್ನು ಕಡಿಮೆಗೊಳಿಸಿ ನಿರ್ವಹಿಸಲು ರೋಲ್ ಆನ್ ಮತ್ತು ರೋಲ್ ಆಫ್ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ ಭಾಷಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 601 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಹೇಳಿರುವ ಅವರು, ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಹಳೆಯ ಸಾಧನೆಗಳನ್ನೇ ಹೆಚ್ಚು ವೈಭವೀಕರಿಸಿದ್ದಾರೆ.

ಮಲ್ಟಿಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಹಾಗೂ ಸಮುದ್ರ ವಿಮಾನ ಸೇವೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತು ಕಾರ್ಯಸಾಧತಾ ಅಧ್ಯಯನವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೋಲಾರದಲ್ಲಿ 1461 ಕೊಟಿ ರೂ. ವೆಚ್ಚದ ರೈಲ್ವೆ ಕೋಚ್ ಪ್ಯಾಕ್ಟರಿ ಸ್ಥಾಪಿಸಲು 2014ರಲ್ಲಿ ಮಾಡಿಕೊಂಡಿರುವ ಒಪ್ಪಂದಂತೆ ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಚಿತವಾಗಿ ಭೂಮಿಯನ್ನೂ ನೀಡಲಿದೆ. ಈ ವರ್ಷ ಯೋಜನೆಯನ್ನು ಆರಂಭಿಸುವಂತೆ ರೈಲ್ವೆ ಮಂತ್ರಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಮೂಲಸೌಲಭ್ಯ ನೀತಿಯು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ. ಕೈಗಾರಿಕೆ, ಸಾಮಾಜಿಕ ಹಾಗೂ ಆರ್ಥಿಕ ವಲಯಗಳ ಬೆಳವಣಿಗೆಳನ್ನು ಪರಿಗಣಿಸಿ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳನ್ನು ವಿಶೇಷ ವಾಹಕ ಸಂಸ್ಥೆ ಜಂಟಿ ವಲಯ ಕಂಪೆನಿ ಇತ್ಯಾದಿಗಳ ಮೂಲಕ ಅನುಷ್ಠಾನಗೊಳಿಸುವ ಸಾಧ್ಯತೆಗಳನ್ನು ಅಳವಡಿಸಿ ಹೊಸ ಮೂಲ ಸೌಲಭ್ಯ ನೀತಿಯನ್ನು ರೂಪಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಕಳೆದ ಐದು ವರ್ಷದಲ್ಲಿ ಯಾದಗಿರಿ ರೈಲ್ವೆ ಕೋರ್ಚ್ ಕಾರ್ಖಾನೆ ಪೂರ್ಣಗೊಳಿಸಲಾಗಿದೆ. ಬೆಂಗಳೂರು ಮತ್ತು ಬೀದರ್, ಕಲಬುರ್ಗಿ ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸಲಾಗಿದೆ. 8ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣಾ ಕಾಮಗಾರಿ ಪೂರ್ಣಗೊಳಿಸಿ ಕಾರ್ಯ ಆರಂಭಿಸಲಾಗಿದೆ. ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‍ವೇ ವಿಸ್ತರಣಾ ಕಾಮಗಾರಿ ಪ್ರಗತಿಯಲ್ಲಿದೆ.
ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಕಿರು ವಿಮಾನ ನಿಲ್ದಾಣ ಹಾಗೂ ಕರಾವಾರ, ಕೊಡಗು, ಬಾಗಲಕೋಟೆ, ವಿಜಯಪುರಗಳಲ್ಲಿ ಹೆಲಿಪ್ಯಾಡ್ ಮತ್ತು ಹೆಲಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಅನುಮೋದಿಸಲಾಗಿದೆ.

ಮೈಸೂರು-ಚನ್ನೈ, ಬಳ್ಳಾರಿ-ಹೈದರಾಬಾದ್ ವಿಮಾನ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಪ್ರಾದೇಶಿಕ ಸಂಪರ್ಕ ಯೋಜನೆಯ ಎರಡನೇ ಸುತ್ತಿನ ಬಿಡ್ಡಿಂಗ್‍ನಲ್ಲಿ ಹುಬ್ಬಳ್ಳಿ ಮತ್ತು ಕೊಪ್ಪಳದ ಬಾಲ್ದೋಟಾ ವಿಮಾನ ನಿಲ್ದಾಣಗಳು ಆಯ್ಕೆಯಾಗಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 407 ಎಕರೆ ಜಮೀನಿನಲ್ಲಿ 935 ಕೊಟಿ ಖರ್ಚು ಮಾಡಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಕನ್ವೆಷನ್ ಸೆಂಟರನ್ನು ಮಂಜೂರು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Sri Raghav

Admin