ಸಿನಿಮಾ ಥಿಯೇಟರ್ ನಲ್ಲಿ ಯುವತಿಯ ಮೊಬೈಲ್ ಕದ್ದು ಧರ್ಮದೇಟು ತಿಂದ..!
ಮೈಸೂರು, ಏ.16- ಸಿನಿಮಾ ವೀಕ್ಷಿಸಿ ಹೊರ ಬರುತ್ತಿದ್ದ ಯುವತಿಯೊಬ್ಬಳ ಕೈನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಚೋರನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಪ್ರಭಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಬರುತ್ತಿದ್ದ ಯುವತಿಯೊಬ್ಬಳ ಕೈನಿಂದ ದುಬಾರಿ ಬೆಲೆ ಬಾಳುವ ಮೊಬೈಲ್ನ್ನು ಕಿತ್ತುಕೊಂಡು ಚೋರ ಓಡುವಾಗ ನೆರವಿಗಾಗಿ ಆಕೆ ಕೂಗಿಕೊಂಡಿದ್ದಾಳೆ. ತಕ್ಷಣ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಹಿಡಿದು ಚೆನ್ನಾಗಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments