ಸಿಯಾಚಿನ್ ಗೆ ತೆರಳಿ ಯೋಧರಿಗೆ ರಾಖೀ ಕಟ್ಟಿ ‘ರಕ್ಷಾ ಬಂಧನ’ ಆಚರಿಸಿದ ಇರಾನಿ

smriti

ಹೊಸದಿಲ್ಲಿ ಆ.18 : ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಜಮ್ಮು ಕಾಶ್ಮೀರದ ಸಿಯಾಚಿನ್ ಹಿಮಪರ್ವತದಲ್ಲಿ ದೇಶದ ಗಡಿಯನ್ನು ಕಾಯುತ್ತಿರುವ ಯೋಧರಿಗೆ ರಾಖೀ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದರು.   ಭಾರತದ ಗಡಿಗಳನ್ನು ಕಾಯುತ್ತಿರುವ ಯೋಧರನ್ನು ನಾವು ಭಾವನಾತ್ಮಕವಾಗಿ ತಲುಪಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯ ಪ್ರಕಾರ ಸ್ಮತಿ ಇರಾನಿ ಅವರಿಂದು ಭಾರತೀಯ ವಾಯು ಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಸಿಯಾಚಿನ್ ಗೆ ತೆರಳಿ ಅಲ್ಲಿ ಸುಮಾರು 20 ಮಂದಿ ಸೇನಾ ಜವಾನರಿಗೆ ರಾಖೀ ಕಟ್ಟಿದರು ಮತ್ತು ಅಲ್ಲಿದ್ದ ಎಲ್ಲ ಜವಾನರಿಗೆ ಸಂಪದಭಿವೃದ್ಧಿ ಹಾಗೂ ಆಯುರಾರೋಗ್ಯ ಭಾಗ್ಯವನ್ನು ಹಾರೈಸಿದರು.  ಈ ಸಂದರ್ಭದಲ್ಲಿ ಸೇನಾ ಜವಾನರಿಗೆ ಹಂಚಲೆಂದೇ ದಿಲ್ಲಿಯಲ್ಲಿನ ತಮ್ಮ ಮನೆಯಲ್ಲಿ ವಿಶೇಷವಾಗಿ ತಯಾರಿಸಿ ತಂದಿದ್ದ ಸಿಹಿ ತಿಂಡಿಯನ್ನು ಸ್ಮತಿ ಅವರು ಅಕ್ಕರೆಯಿಂದ ಜವಾನರಿಗೆ ಹಂಚಿ ಸಂಭ್ರಮಿಸಿದರು.

► Follow us on –  Facebook / Twitter  / Google+

Sri Raghav

Admin

Comments are closed.