ಸಿರಿಯಾ ಗಡಿ ಬಳಿ ಇರಾಕ್ ವಾಯು ದಾಳಿಗೆ 200ಕ್ಕೂ ಹೆಚ್ಚು ಐಎಸ್ ಉಗ್ರರು ಬಲಿ

ISIS-01

ಬಾಗ್ದಾದ್, ಏ.2 – ಇರಾಕಿ ಯುದ್ಧ ವಿಮಾನಗಳು ಸಿರಿಯಾ ಗಡಿ ಬಳಿ ನಡೆಸಿದ ವಾಯು ದಾಳಿಗಳಲ್ಲಿ 100ಕ್ಕೂ ಹೆಚ್ಚು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳು ಹತರಾಗಿದ್ದಾರೆ. ಈ ಮಿಂಚಿನ ದಾಳಿಯಲ್ಲಿ ಐಎಸ್ ಉಪ ಮುಖ್ಯಸ್ಥ ಅಯದ್-ಅಲ್-ಜುಮೈಲಿ ಸಹ ಮೃತಪಟ್ಟಿದ್ದಾನೆ.  ಮೊಸುಲ್ ಪಟ್ಟಣದ ಹೊರಗೆ ಸಿರಿಯಾ ಗಡಿ ಬಳಿ ಬಾಝ್ ಪ್ರದೇಶದ ಮೂರು ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಇರಾಕಿ ಫೈಟರ್ ಜೆಟ್‍ಗಳು ನಿರಂತರ ದಾಳಿ ನಡೆಸಿದವು. ಈ ಕಾರ್ಯಾಚರಣೆಯಲ್ಲಿ 150-200 ಮಂದಿ ಐಎಸ್ ಭಯೋತ್ಪಾದಕರು ಕೂಡ ಹತರಾದರೆಂದು ಉನ್ನತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಸಿರಿಯಾ ಗಡಿ ಮೂಲಕ ಇರಾಕ್ ಒಳಗೆ ನುಸುಳಲು ಉಗ್ರರು ಯತ್ನಿಸುತ್ತಿದ್ದ ವೇಳೆಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಈ ದಾಳಿಯಲ್ಲಿ ಐಎಸ್ ಸೆಕೆಂಡ್-ಇನ್-ಕಮಾಂಡ್ ಅಯದ್ ಅಲ-ಜುಮೈಲಿ ಸಹ ಹತನಾಗಿದ್ದಾನೆ. ಈತ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿಯ ಬಲಗೈ ಬಂಟ ಮತ್ತು ಉಪ ನಾಯಕ. ಈತ ಮೃತಪಟ್ಟಿರುವುದನ್ನು ಸೇನಾ ಬೇಹುಗಾರಿಕೆ ಮೂಲಗಳು ದೃಢಪಡಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin