ಸಿರಿಯಾ ನಿರಾಶ್ರಿತರಿಗೆ ಬ್ರಿಟನ್ ಸರ್ಕಾರದಿಂದ 1 ಶತಕೋಟಿ ಪೌಂಡ್ ನೆರವು

Siriya--002

ಲಂಡನ್, ಏ. 5 – ಯುದ್ಧ ಪೀಡಿತ ಸಿರಿಯಾದ ನಿರಾಶ್ರಿತರ ನೆರವಿಗಾಗಿ ಸರ್ಕಾರದ ಖಜಾನೆಯಿಂದ ಒಂದು ಶತ ಕೋಟಿ ಪೌಂಡ್ (1.24 ಶತಕೋಟಿ ಡಾಲರ್) ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಬ್ರಿಟನ್ ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.  ಕಳೆದ ಆರು ವರ್ಷಗಳಿಂದಲೂ ಯುದ್ಧ ಪೀಡಿತ ಸಿರಿಯಾದಲ್ಲಿ ಮಕ್ಕಳು-ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಅಂಥವರಿಗೆ ಆಹಾರ-ಔಷಧ ಮತ್ತಿತರೆ ಅಗತ್ಯ ವಸ್ತುಗಳನ್ನು ಒದಗಿಸುವುದಕ್ಕಾಗಿ ಒಂದು ಶತ ಕೊಟಿ ಪೌಂಡ್ ಬಿಡುಗಡೆ ಮಾಡಿದ್ದು, ಈ ನೆರವಿನಲ್ಲಿ 160 ಮಿಲಿಯನ್ ಪೌಂಡ್‍ಗಳ ಹೊಸ ಹಣವೂ ಸೇರಿದೆ ಎಂದು ಮೂಲಗಳು ಹೇಳಿವೆ.

ನಿನ್ನೆ ನಡೆದ ಅಂತಾರಾಷ್ಟ್ರೀಯ ದಾನಿಗಳ ಸಭೆಯಲ್ಲಿ ಲಂಡನ್ ಈ ವಿಷಯ ಪ್ರಕಟಿಸಿದ್ದು, ವಿಶ್ವದ ಇನ್ನೂ ಹಲವು ದಾನಿ ರಾಷ್ಟ್ರಗಳು ಉದಾರವಾಗಿ ನಿರಾಶ್ರಿತರಿಗಾಗಿ ಹೆಚ್ಚಿನ ಹಣ ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಲಾಯಿತು. ಅಲ್ಲದೆ ಸಿರಿಯಾದಲ್ಲಿ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸುವುದಕ್ಕೂ ಜಾಗತಿಕ ಸಮುದಾ ಸಹಕರಿಸಲಿದೆ ಎಂಬ ಆಶಾವಾದವನ್ನೂ ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಸದ್ಯ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಥೆರೇಸಾ ಮೆ ಅವರು ಸ್ವದೇಶಕ್ಕೆ ಹಿಂದಿರುಗಿದ ನಂತರ ಸಿರಿಯಾ ನಿರಾಶ್ರಿತರ ನೆರವಿಗೆ ಇನ್ನೂ ಹೆಚ್ಚಿನ ಪ್ರಮಾಣದ ನಿಧಿಗಳನ್ನೂ ವಿವಿಧ ರೂಪಗಳಲ್ಲಿ (ಇಲಾಖೆಗಳು, ಸಂಘ-ಸಂಸ್ಥೆಗಳ ಮೂಲಕ) ನೀಡುವರೆಂಬ ಅಭಿಪ್ರಾಯಗಳು ಸಭೆಲ್ಲಿ ವ್ಯಕ್ತವಾದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin