ಸಿಲಿಂಡರ್ ಸ್ಫೋಟದಿಂದ ಮೂರಂತಸ್ತಿನ ಕಟ್ಟಡ ಕುಸಿದು ನಾಲ್ವರ ಸಾವು

Building

ಬೆಂಗಳೂರು. ಅ16 : ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಮನೆಯೊಂದು ಕುಸಿದುಬಿದ್ದು ನಾಲ್ವರು  ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಈಜಿಪುರದ ಗುಂಡಪ್ಪ ಲೇಔಟ್’ನಲ್ಲಿ ನಡೆದಿದೆ. ಮೃತರನ್ನು ಶರವಣ (44), ಅಶ್ವಿನಿ (22) ಹಾಗೂ ಸಂಜನಾ ಎಂದು ಗುರುತಿಸಲಾಗಿದೆ.   ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜೆಸಿಬಿಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದರಂತೆ ಈವರೆಗೂ ಆರು ಜನರ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ.

ಕಟ್ಟಡದ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಗಣೇಶ್ ಎಂಬುವವರಿಗೆ ಸೇರಿದ ಸುಮಾರು 15-20 ವರ್ಷ ಹಳೆಯದಾದ ಈ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದ್ದವು ಎನ್ನಲಾಗಿದೆ. ಘಟನೆಗೆ ಸಿಲಿಂಡರ್ ಸ್ಪೋಟವೋ ಅಥವಾ ಮಳೆಯ ಕಾರಣದಿಂದ ಕಟ್ಟಡ ಕುಸಿದಿದೆಯೋ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

Sri Raghav

Admin