ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಿಗೆ ಮೆಟ್ರೋ ಸೌಲಭ್ಯ

Spread the love

Metro--01

ಬೆಂಗಳೂರು, ಫೆ.20- ಸಿಲಿಕಾನ್ ಸಿಟಿಯ ಪ್ರಮುಖ ಆದಾಯದ ಮಾರ್ಗವೇ ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳು. ಇಲ್ಲಿಗೆ ಮೆಟ್ರೋ ರೈಲ್ವೆ ಸೌಲಭ್ಯ ಒದಗಿಸಲು ಮೆಟ್ರೋ ಮುಂದಾಗಿದ್ದು, ಇದರಿಂದ ಮೆಟ್ರೋ ಅಂದಾಜು 8 ಲಕ್ಷ ಐಟಿ ಉದ್ಯೋಗಿಗಳನ್ನು ತಲುಪುವ ನಿರೀಕ್ಷೆ ಹೊಂದಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್- ಕೆಆರ್ ಪುರಂ ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಆರಂಭಿಸಲು ಬಿಎಂಆರ್‍ಸಿಎಲ್ ಸಿದ್ಧತೆ ನಡೆಸಿದೆ. ಇನ್ನೊಂದು ವಾರದಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಲಿದೆ. ರಾಜ್ಯ ಸರ್ಕಾರ ನೀಡಿದ್ದ 500 ಕೋಟಿ ರೂ. ಆದಾಯದ ಗುರಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಬಿಎಂಆರ್‍ಸಿಎಲ್ ಕಾಮಗಾರಿ ಆರಂಭಿಸಲು ಸಿದ್ಧವಾಗಿದೆ.

ಪ್ರಮುಖ ಐಟಿ ಹಬ್ ಆಗಿರುವ ಈ ಪ್ರದೇಶಗಳಲ್ಲಿ ಮೆಟ್ರೋ ಕಲ್ಪಿಸುವಂತೆ 2016ರಲ್ಲಿ ಬಿಎಂಆರ್‍ಸಿಎಲ್ ಯೋಜನಾ ವರದಿ ಸಿದ್ಧಪಡಿಸಿತ್ತು. ಅಂದಾಜು 4202 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಗೆ 2017 ಮಾರ್ಚ್‍ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿತ್ತು. ಇನ್ನು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸಿದ್ಧತೆ ನಡೆಸಿರುವ ಬಿಎಂಆರ್‍ಸಿಎಲ್ ಇದಕ್ಕಾಗಿ ತುಂಡು ಗುತ್ತಿಗೆ ರೀತಿಯಲ್ಲಿ 2-3 ಕಿಲೋ ಮೀಟರ್ ಗುತ್ತಿಗೆಯನ್ನು ಒಬ್ಬೊಬ್ಬರಿಗೆ ನೀಡಲು ಮುಂದಾಗಿದೆ.  ಒಟ್ಟಿನಲ್ಲಿ ಐಟಿ ಉದ್ಯೋಗಿಗಳನ್ನು ಸೆಳೆಯಲು ನಮ್ಮ ಮೆಟ್ರೋ ಪ್ರಯತ್ನ ಆರಂಭಿಸಿದ್ದು, ಯೋಜನೆ ಆದಷ್ಟು ಬೇಗ ಸಿದ್ಧವಾದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಕಡಿಮೆಯಾಗುವ ವಿಶ್ವಾಸವಿದೆ.

Facebook Comments

Sri Raghav

Admin