ಸಿ.ಟಿ.ರವಿ ರಾಜೀನಾಮೆಗೆ ಎಚ್.ಎಚ್.ದೇವರಾಜ್ ಒತ್ತಾಯ

CTRavi

ಚಿಕ್ಕಮಗಳೂರು, ಫೆ.7-ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ನಗರಸಭೆ ಸದಸ್ಯ ರವಿಕುಮಾರ್ ಅಲಿಯಾಸ್ ಕಾಯಿ ರವಿ ಶಾಸಕ ಸಿ.ಟಿ.ರವಿ ಅವರ ಬೆಂಬಲಿಗರಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಒತ್ತಾಯಿಸಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್ ಹಗರಣ, ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಹಾಗೂ ಗೋ ಕಳ್ಳತನ ಪ್ರಕರಣಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ದಂಧೆಯಲ್ಲಿ ತೊಡಗಿದ್ದು, ಇವರಿಗೆ ಬಿಜೆಪಿಯ ಪ್ರಭಾವಿ ರಾಜಕಾರಣಿಗಳ ಬೆಂಬಲ ಇರುವುದು ಸ್ಪಷ್ಟವಾಗಿದೆ. ಹಾಗಾಗಿ ಇಂತಹ ದಂಧೆಯಲ್ಲಿ ತೊಡಗಿರುವ ಆರೋಪಿಗಳಿಗೆ ಕಾನೂನು ರೀತಿಯ ಶಿಕ್ಷೆ ಆಗಲೇಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ನಗರಸಭೆಯ ವಿಪಕ್ಷ ಸದಸ್ಯರು, ಪೌರಾಯುಕ್ತರು, ಜಿಲ್ಲಾಧಿಕಾರಿ ಮತ್ತು ಎಸ್ಪಿ ಕಚೇರಿಗೆ ತೆರಳಿ ಆರೋಪಿ ರವಿಕುಮಾರ್ ಅಲಿಯಾಸ್ ಕಾಯಿ ರವಿಯ ಸದಸ್ಯತ್ವ ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.ನಗರಸಭೆ ಸದಸ್ಯರಾದ ತೇಜಮೂರ್ತಿ, ಬಿ.ಎಂ.ಸಂದೇಶ್, ಕೆ.ಎಂ.ಕೃಷ್ಣಮೂರ್ತಿ, ರೂಬಿನ್ ಮೋಸಸ್ ಹಾಗೂ ಮಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin