ಸುಕ್ಮಾ ನಕ್ಸಲರ ದಾಳಿಯಲ್ಲಿ ಹುತಾತ್ಮನಾದ ಯೋಧನ ಪತ್ನಿಗೆ ಎಎಸ್‍ಐ ಹುದ್ದೆ

Spread the love

Sukma-Attck

ರಾಯ್‍ಪುರ್, ಮೇ 2-ಸುಕ್ಮಾ ಜಿಲ್ಲೆಯ ಕಾಲಾಪತ್ಥರ್‍ನಲ್ಲಿ ನಕ್ಸಲರ ಕ್ರೌರ್ಯಕ್ಕೆ ಬಲಿಯಾದ 25 ಹುತಾತ್ಮ ಯೋಧರಲ್ಲಿ ಬಲ್ಮಾಲಿ ಯಾದವ್ ಎಂಬುವರ ಪತ್ನಿಗೆ ಛತ್ತೀಸ್‍ಗಢ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ (ಎಎಸ್‍ಐ) ಹುದ್ದೆ ನೀಡಿದೆ.   ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್‍ಸಿಂಗ್ ಜಶ್‍ಪುರ್ ಜಿಲ್ಲೆಯ ದೌರಾಸಂದ್ ಗ್ರಾಮದಲ್ಲಿರುವ ಸಿಆರ್‍ಪಿಎಫ್ ಹುತಾತ್ಮ ಯೋಧ ಯಾದವ್ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. 

ಇದೇ ಸಂದರ್ಭದಲ್ಲಿ ಹುತಾತ್ಮನ ಪತ್ನಿ ಜಿತೇಶ್ವರಿ ಅವರಿಗೆ ಎಎಸ್‍ಐ ಹುದ್ದೆಗೆ ನೇಮಕ ಮಾಡಿರುವ ನೇಮಕಾತಿ ಪತ್ರವನ್ನು ಸಹ ಸಿಎಂ ನೀಡಿದರು. ಬಸ್ತರ್ ಪ್ರಾಂತ್ಯದ ಅರಣ್ಯ ಪ್ರದೇಶದಲ್ಲಿ ಏ.24ರಂದು ಸುಮಾರು 300 ಶಸ್ತ್ರಸಜ್ಜಿತ ನಕ್ಸಲರ ಅಟ್ಟಹಾಸಕ್ಕೆ ಬಲ್ಮಾಲಿ ಯಾದವ್ ಸೇರಿದಂತೆ 25 ಯೋಧರು ಬಲಿಯಾಗಿ, ಅನೇಕರು ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin