ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Spread the love

Nirmala--01
ನವದೆಹಲಿ. ಜ.17 : ದೇಶದ ಮೊದಲ ಮಹಿಳಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ರಾಜಸ್ಥಾನ ಜೋಧ್ ಪುರ ವಾಯುನೆಲೆಯಿಂದ ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಮೂಲಕ ಸುಖೋಯ್ ನಲ್ಲಿ ಹಾರಾಟ ನಡೆಸಿದ ಭಾರತದ 2ನೇ ಮಹಿಳೆ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಅವರು  ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ನಿರ್ಮಲಾ ಸೀತಾರಾಮನ್ ಅವರು ಸುಖೋಯ್ ನ ಮಹಿಳಾ ಪೈಲಟ್ ಹಿಂಭಾಗದ ಸೀಟ್ ನಲ್ಲಿ ಕುಳಿತು ಹಾರಾಟ ನಡೆಸಿದರು. ಸುಮಾರು 45 ನಿಮಿಷಗಳ ಕಾಲ ನಿರ್ಮಲಾ ಸೀತಾರಾಮನ್ ಅವರು ಹಾರಾಟ ನಡೆಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.

Facebook Comments

Sri Raghav

Admin