ಸುಪ್ರೀಂ ನಿರ್ದೇಶನದಂತೆ ಮಧುರೈನಲ್ಲಿ ಜಲ್ಲಿಕಟ್ಟು ಆಚರಣೆ, 900ಕ್ಕೂ ಹೆಚ್ಚು ಗೂಳಿಗಳು, ಸ್ಪರ್ಧಿಗಳು ಭಾಗಿ

Jallikattu--01

ಮಧುರೈ, ಫೆ.5-ತಮಿಳುನಾಡಿನ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದ ಬೆಳವಣಿಗೆ ನಂತರ ಮದುರೈ ಜಿಲ್ಲೆಯ ಅವನೀಯಪುರಂ ಪಟ್ಟಣದಲ್ಲಿ ಇಂದು ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಗೂಳಿ ಪಳಗಿಸುವ ಸ್ಪರ್ಧೆ ಅಧಿಕೃತವಾಗಿ ನಡೆಯಿತು. ಎರಡು ವರ್ಷದ ಬಳಿಕ ಹಾಗೂ ಜಲಿಕಟ್ಟು ನಿರ್ಬಂಧ ತೆರವುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಈ ಜನಪದ ಆಚರಣೆಗೆ ವಿಧ್ಯುಕ್ತ ಚಾಲನೆ ದೊರೆತಿದೆ.   ಮಧುರೈ ಜಿಲ್ಲಾಧಿಕಾರಿ ವೀರರಾಘವ ರಾವ್ ಜಲ್ಲಿಕಟ್ಟು ಕ್ರೀಡೆ ಉದ್ಘಾಟಿಸಿದರು. ಈ ರೋಚಕ ಕ್ರೀಡೆಯಲ್ಲಿ 900ಕ್ಕೂ ಹೆಚ್ಚು ಗೂಳಿಗಳು ಮತ್ತು ಅಷ್ಟೇ ಸಂಖ್ಯೆ ಸ್ಪರ್ಧಿಗಳು ಭಾಗವಹಿಸಿದ್ದರು.

ಸ್ಫರ್ಧೆಗೆ ಮುನ್ನ ಹೋರಿಗಳು ಮತ್ತು ಸ್ಪರ್ಧಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಗೂಳಿ ಹಿಡಿಯುವ ತಂಡಗಳಿಗೆ ಪ್ರತ್ಯೇಕ ಸಮವಸ್ತ್ರಗಳನ್ನು ನೀಡಲಾಗಿತ್ತು.
ಸುಪ್ರೀಂಕೋರ್ಟ್‍ನ ಮಾರ್ಗದರ್ಶನ ಮತ್ತು ಸೂಚನೆಯನ್ನು ಯಥಾವತ್ತಾಗಿ ಪಾಲಿಸಿ ಜಲ್ಲಿಕಟ್ಟು ಕ್ರೀಡೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ ವಾಹನಗಳನ್ನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.   ಕ್ರೀಡೆ ವೇಳೆ ಪ್ರೇಕ್ಷಕರು ಅಖಾಡದತ್ತ ನುಗ್ಗುವುದನ್ನು ತಪ್ಪಿಸಲು ವಿಶೇಷ ಬ್ಯಾರಿಕೇಡ್ ಹಾಕಲಾಗಿತ್ತು ಹಾಗೂ ವೀಕ್ಷಕರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.

ಸಂಕ್ರಾಂತಿ ನಂತರ ತಮಿಳುನಾಡಿನ ವಿವಿಧೆಡೆ ನಡೆದ ಜಲ್ಲಿಕಟ್ಟು ವೇಳೆ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪೊಲೀಸ್ ಬಿಗಿಭದ್ರತೆಯೊಂದಿಗೆ ಆಚರಣೆ ನಡೆಯಿತು.  ಸುಪ್ರೀಂಕೋರ್ಟ್ ಅನುಮತಿ ಮೇರೆಗೆ ವಿಧ್ಯುಕ್ತವಾಗಿ ನಡೆದ ಜಲಿಕಟ್ಟು ಕ್ರೀಡೆಯನ್ನು ತಮಿಳರು ಸಡಗರ-ಸಂಭ್ರಮದಿಂದ ಪಾಲ್ಗೊಂಡರು.   ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕು ಮತ್ತು ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧೆಡೆ ಇತ್ತೀಚೆಗೆ ನಡೆದ ಭಾರೀ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಉದ್ರಿಕ್ತ ಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಕಟ್ಟಡ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಬಲಪ್ರಯೋಗದಲ್ಲಿ ಅನೇಕರು ಗಾಯಗೊಂಡಿದ್ದರು. ಈ ಸಂಬಂಧ ಹಲವರನ್ನು ಬಂಧಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin