ಸೂರತ್ಕಲ್ ಬಳಿ ಟ್ಯಾಂಕರ್‍ನಿಂದ ಅನಿಲ ಸೋರಿಕೆ : ತಪ್ಪಿದ ಭಾರಿ ಅನಾಹುತ

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ದಕ್ಷಿಣಕನ್ನಡ,ಮಾ.31- ಟ್ಯಾಂಕರ್‍ನಿಂದ ಅನಿಲ ಸೋರಿಕೆಯಾಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ತುರ್ತು ಕಾರ್ಯಾಚರಣೆ ಪಡೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾರೀ ದುರಂತ ತಪ್ಪಿದಂತಹ ಘಟನೆ ಸೂರತ್ಕಲ್ ಬಳಿ ನಡೆದಿದೆ. ಇಲ್ಲಿರುವ ಎಂಆರ್‍ಪಿಎಲ್ ಬಳಿಯೇ ಸುಮಾರು 15ಕ್ಕೂ ಹೆಚ್ಚು ಟ್ಯಾಂಕರ್‍ಗಳನ್ನು ರಸ್ತೆಬದಿ ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಟ್ಯಾಂಕರ್‍ನಿಂದ ಅನಿಲ ಸೋರಿಕೆಯಾಗುತ್ತಿತ್ತು.   ಈ ಬಗ್ಗೆ ಸ್ಥಳೀಯರೊಬ್ಬರು ಅನುಮಾನ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸಿ ಸೋರಿಕೆಯನ್ನು ಪತ್ತೆಹಚ್ಚಿ ದುರಸ್ತಿಪಡಿಸಲಾಗಿದೆ.

ಅಕಸ್ಮಾತ್ ಇದು ಅನಿಲಕ್ಕೆ ಬೆಂಕಿ ತಗುಲಿದ್ದರೆ ಎಂಆರ್‍ಪಿಎಲ್ ಘಟಕಕ್ಕೂ ಭಾರೀ ಹಾನಿಯಾಗುತ್ತಿತ್ತು. ಜೀವಹಾನಿಯೂ ಕೂಡ ಆಗುತ್ತಿತ್ತು. ಸ್ಥಳೀಯರೊಬ್ಬ ಸಮಯಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ.   ಅನಿಲ ಸೋರಿಕೆಗೆ ಕಾರಣವೇನು? ಟ್ಯಾಂಕರ್‍ಗೆ ತುಂಬುವಾಗ ಇದ್ದಂತಹ ಅಧಿಕಾರಿಗಳು ಮತ್ತು ಸುರಕ್ಷತೆಯ ಪ್ರಮಾಣ ಪತ್ರ ನೀಡಿದ ಸಿಬ್ಬಂದಿ ವಿರುದ್ದ ಸೂರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಾರೆ ಮತ್ತು ಈ ಪ್ರದೇಶದಲ್ಲಿ ಮಧ್ಯಾಹ್ನದವರೆಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin