ಸೆಲಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಗೆ ಪುನೀತ್ ರಾಯಭಾರಿ

Punith

ಬೆಂಗಳೂರು, ಆ.25- ದಕ್ಷಿಣದ ನಾಲ್ಕು ರಾಜ್ಯಗಳ ಸೆಲಬ್ರಿಟಿಗಳ ಬ್ಯಾಡ್ಮಿಂಟನ್ ಲೀಗ್ಅನ್ನು ಸೆ.18ರಿಂದ ನಡೆಸಲಾಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ, ಹೈದರಾಬಾದ್ ಒಳಗೊಂಡಂತೆ ನಾಲ್ಕೂ ರಾಜ್ಯಗಳ ಸೆಲಬ್ರಿಟಿ ಬ್ಯಾಡ್ಮಿಂಟನ್ ಲೀಗ್ (ಸಿಬಿಎಲ್) ನಡೆಯಲಿದೆ. ಕರ್ನಾಟಕ ಆಲ್ಪ್ಸ್ ತಂಡದ ಮಾಲೀಕತ್ವವನ್ನು ಜಸ್ಟೀನ್ ಸ್ಯಾಮ್ಯುಯಲ್ ಹಾಗೂ ನಟಿ ಸಾಂಘವಿ ಹೊಂದಿದ್ದು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕರ್ನಾಟಕ ತಂಡದ ನಾಯಕನಾಗಿ ನಟ ದಿಗಂತ್ ಹೊಣೆ ಹೊತ್ತಿದ್ದು, ಯೋಗಿ, ಪ್ರಜ್ವಲ್ ದೇವರಾಜ್, ಇಂದ್ರಜಿತ್, ಕವಿತಾ ಲಂಕೇಶ್, ಸಿಂಧು ಲೋಕನಾಥ್, ರವಿಚೇತನ್, ಐಂದ್ರಿತಾ ರೈ, ಅರ್ಜುನ್ ಮತ್ತಿತರರು ತಂಡದಲ್ಲಿರುವರು.

ಸೆ.18ರಂದು ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಲೀಗ್ ಆರಂಭವಾಗಲಿದ್ದು, ಎರಡನೆ ಸ್ಪರ್ಧೆ ಕೇರಳದ ಕೊಚ್ಚಿನ್ನಲ್ಲಿ ಸೆ.24ರಂದು ನಡೆಯಲಿದೆ. ಅ.8ರಂದು ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಸ್ಪರ್ಧೆ ನಡೆಯಲಿದ್ದು, ಅ.22ರಂದು ಹೈದರಾಬಾದ್ನಲ್ಲಿ ಸ್ಪರ್ಧೆಗಳು ನಡೆಯಲಿವೆ.   ನ.11 ಮತ್ತು 12ರಂದು ಫೈನಲ್ಸ್ ಪಂದ್ಯಾವಳಿಗಳು ಮಲೇಷಿಯಾದ ಕೌಲಾಲಂಪುರದಲ್ಲಿ ಆಯೋಜಿಸಲಾಗಿದ್ದು, ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದ ಸಿಂಧು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.   ಉಳಿದಂತೆ ತಮಿಳುನಾಡು ತಂಡಕ್ಕೆ ಆರ್ಯ, ಕೇರಳಕ್ಕೆ ಜಯರಾಮ್, ತೆಲುಗಿಗೆ ಸುಧೀರ್ ಬಾಬು ನಾಯಕರಾಗಿದ್ದಾರೆ. ಮೂರು ಪುರುಷರ ಡಬಲ್ಸ್, ಒಂದು ಮಹಿಳೆಯರ ಡಬಲ್ಸ್, ಒಂದು ಮಿಕ್ಸಡ್ ಡಬಲ್ಸ್ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin