ಸೆ.14ರಿಂದ ಕಬ್ಬು ಅರೆಯುವಿಕೆ ಆರಂಭ

Spread the love

kr-pete2

ಕೆ.ಆರ್.ಪೇಟೆ, ಸೆ.8- ತಾಲೂಕಿನ ರೈತರ ಹಿತದೃಷ್ಟಿಯಿಂದ ಇದೇ ಸೆ.14ರಿಂದ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವಿಕೆ ಕಾರ್ಯವನ್ನು ಆರಂಭಿಸುತ್ತಿರುವುದಾಗಿ ಕಾರ್ಖಾನೆಯ ಉಪಾಧ್ಯಕ್ಷ ಸಿ.ಪವನ್‍ಕುಮಾರ್ ತಿಳಿಸಿದರು.ಚೆನ್ನೈನ ಹಸಿರು ಪೀಠ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಹಾಗೂ 15 ಮೆಗಾವ್ಯಾಟ್ ಉತ್ಪಾದನೆಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಸುಮಾರು 150 ಕೋಟಿ ವೆಚ್ಚದಲ್ಲಿ ಕಾರ್ಖಾನೆಯು ನಿರ್ಮಾಣ ಮಾಡಿರುವ ಹೈಟೆಕ್ ತಂತ್ರಜ್ಞಾನದ ವಿದ್ಯುತ್ ಉತ್ಪಾದನಾ ಘಟಕದ ಸಿದ್ದತೆಯ ಬಗ್ಗೆ ಪತ್ರಕರ್ತರ ತಂಡಕ್ಕೆ ಮಾಹಿತಿ ನೀಡಿ ಮಾತನಾಡಿದ ಅವರು ನ್ಯಾಯಾಲಯದ ತೀರ್ಪಿನಿಂದ ಕಾರ್ಖಾನೆಯ ಆರಂಭಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ 7.50ಲಕ್ಷ ಟನ್ ಕಬ್ಬನ್ನು ಅರೆದು ಎಲ್ಲಾ ರೈತರಿಗೂ ಕಬ್ಬಿನ ಬಾಕಿಯನ್ನು ಪಾವತಿ ಮಾಡಲಾಗಿದೆ. ಈ ಸಾಲಿನಲ್ಲಿ ಅಷ್ಟೇ ಕಬ್ಬು ಅರೆಯಲು ಕಾರ್ಖಾನೆಯು ಬದ್ದವಾಗಿದೆ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಬ್ಬು ಬೆಳೆಗಾರರು ಸುಮಾರು ಲಕ್ಷ ಟನ್ ಕಬ್ಬು ಸಿಗಲಿದ್ದು ಉಳಿದ ಕಬ್ಬನ್ನು ಕೆ.ಆರ್.ನಗರ ಶ್ರೀರಾಮ ಸಕ್ಕರೆ ಕಾರ್ಖಾನೆ, ಶ್ರೀನಿವಾಸಪುರ ಹೇಮಾವತಿ ಸಕ್ಕರೆ ಕಾರ್ಖಾನೆಗಳು ತಾತ್ಕಾಲಿಕ ಬಂದ್ ಆಗಿರುವ ಕಾರಣ ಜಿಲ್ಲಾಡಳಿತವು ಈ ಎರಡೂ ವ್ಯಾಪ್ತಿಯ ಕಬ್ಬನ್ನು ನಮ್ಮ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಹಂಚಿಕೆ ಮಾಡಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿವರಿಸಿದರು.
ಪ್ರಸಕ್ತ ಬಾಯ್ಲರ್‍ನಿಂದ ಹೊರ ಬರುತ್ತಿದ್ದ ಹೊಗೆಯ ಪ್ರಮಾಣವು ಪ್ರತೀ ಮೀಟರ್‍ಗೆ 150 ಮಿಲಿ ಗ್ರಾಂನಿಂದ 50 ಮಿಲಿಗ್ರಾಂಗೆ ಇಳಿಯಲಿರುವುದು ಹೊಸಬಾಯ್ಲರ್‍ನ ಆಧುನಿಕ ತಂತ್ರಜ್ಞಾನದ ಫಲವಾಗಿದೆ. ಆದ್ದರಿಂದ ರೈತರು, ಪರಿಸರ ಪ್ರೇಮಿಗಳು ಯಾವುದೇ ಕಾರಣಕ್ಕೂ ಆತಂಕಪಡಬೇಕಾಗಿಲ್ಲ. ಆಡಳಿತ ಮಂಡಳಿಯು ಪರಿಸರ ಮಾಲಿನ್ಯ ಇಲಾಖೆ ಮತ್ತು ಹಸಿರು ಪೀಠ ನಿರ್ದೇಶನದಂತೆ ಪರಿಸರಸ್ನೇಹಿ ಹಾಗೂ ರೈತ ಮಿತ್ರನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಕೃಷ್ಣಮೋಹನ್, ನೂತನ ಕೋಜನ್ ವಿಭಾಗದ ಮುಖ್ಯಸ್ಥ ರಾಜಶೇಖರ್, ಕಬ್ಬು ಅಭಿವೃದ್ಧಿ ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬುರಾಜ್, ಆಡಳಿತ ವಿಭಾಗದ ವ್ಯವಸ್ಥಾಪಕ ಉತ್ತಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin